ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನಾ ಹೆಲಿಕಾಪ್ಟರ್ ಪತನ: 6 ಯೋಧರ ಪಾರ್ಥಿವ ಶರೀರದ ಗುರುತು ಪತ್ತೆ

|
Google Oneindia Kannada News

ನವದೆಹಲಿ, ಡಿಸೆಂಬರ್ 11: ತಮಿಳುನಾಡು ನೀಲಗಿರಿ ಜಿಲ್ಲೆಯ ಕೂನೂರು ಬಳಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟಿರುವ ಸಶಸ್ತ್ರ ಪಡೆಯ ಸಿಬ್ಬಂದಿ ಮೃತದೇಹಗಳ ಗುರುತು ಪತ್ತೆ ಕಾರ್ಯವನ್ನು ಮುಂದುವರಿಸಲಾಗುತ್ತಿದೆ.

ಶನಿವಾರದ ವೇಳೆಗೆ JWO ಪ್ರದೀಪ್ A, Wg Cdr PS ಚೌಹಾಣ್, JWO ರಾಣಾ ಪ್ರತಾಪ್ ದಾಸ್, Sqn ನಾಯಕ ಕುಲದೀಪ್ ಸಿಂಗ್, L/Nk B ಸಾಯಿ ತೇಜ ಮತ್ತು L/Nk ವಿವೇಕ್ ಕುಮಾರ್ ಪಾರ್ಥಿವ ಶರೀರವನ್ನು ಗುರುತಿಸಲಾಗಿದೆ. ಉಳಿದ ಮೃತದೇಹಗಳ ಗುರುತು ಪತ್ತೆ ಕಾರ್ಯವನ್ನು ಮುಂದುವರಿಸಲಾಗುತ್ತಿದೆ.

ಬಿಪಿನ್ ರಾವತ್ ಪಾರ್ಥಿವ ಶರೀರಕ್ಕೆ ಮೋದಿ, ತ್ರಿ-ಸೇನಾ ಮುಖ್ಯಸ್ಥರಿಂದ ಅಂತಿಮ ಗೌರವಬಿಪಿನ್ ರಾವತ್ ಪಾರ್ಥಿವ ಶರೀರಕ್ಕೆ ಮೋದಿ, ತ್ರಿ-ಸೇನಾ ಮುಖ್ಯಸ್ಥರಿಂದ ಅಂತಿಮ ಗೌರವ

ಶನಿವಾರ ಬೆಳಗ್ಗೆ ಕುಟುಂಬ ಸದಸ್ಯರಿಗೆ ಪಾರ್ಥಿವ ಶರೀರವನ್ನು ಬಿಡುಗಡೆ ಮಾಡಲಾಗಿದೆ. ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವುದಕ್ಕಾಗಿ ಪಾರ್ಥಿವ ಶರೀರವನ್ನು ಸೂಕ್ತ ಸೇನಾ ಗೌರವದೊಂದಿಗೆ ವಿಮಾನದಲ್ಲಿ ಸ್ಥಳಾಂತರಿಸಲಾಗುತ್ತದೆ. ಅದಕ್ಕೂ ಮೊದಲು ದೆಹಲಿ ಕ್ಯಾಂಟ್‌ನ ಮೂಲ ಆಸ್ಪತ್ರೆಯಲ್ಲಿ ಪುಷ್ಪ ನಮನ ಸಲ್ಲಿಸಲಾಗುತ್ತದೆ.

Army Helicopter Crash: Identification Of 6 IAF Personnel Completed, Mortal Remains to Be Released Today

ಹುತಾತ್ಮ ಯೋಧರ ಪಾರ್ಥಿವ ಶರೀರ ರವಾನೆ:

ಶನಿವಾರದ ವೇಳೆಗೆ JWO ಪ್ರದೀಪ್ A, Wg Cdr PS ಚೌಹಾಣ್, JWO ರಾಣಾ ಪ್ರತಾಪ್ ದಾಸ್, Sqn ನಾಯಕ ಕುಲದೀಪ್ ಸಿಂಗ್, L/Nk B ಸಾಯಿ ತೇಜ ಮತ್ತು L/Nk ವಿವೇಕ್ ಕುಮಾರ್ ಪಾರ್ಥಿವ ಶರೀರವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಹುತಾತ್ಮ ಯೋಧರಿಗೆ ಅಂತಿಮ ವಿಧಿ ವಿಧಾನವನ್ನು ನೆರವೇರಿಸಲಾಗುತ್ತದೆ.

* JWO ಪ್ರದೀಪ್ ಪಾರ್ಥಿವ ಶರೀರವು ಬೆಳಗ್ಗೆ 11 ಗಂಟೆ ಹೊತ್ತಿಗೆ ಸುಲೂರು ಪ್ರದೇಶಕ್ಕೆ ತಲುಪಿದೆ.

* Wg Cdr ಚೌಹಾಣ್ ಪಾರ್ಥಿವ ಶರೀರವನ್ನು ಬೆಳಗ್ಗೆ 9.45ರ ವೇಳೆಗೆ ಆಗ್ರಾಗೆ ತಲುಪಿಸಲಾಗಿದೆ.

* JWO ದಾಸ್ ಪಾರ್ಥಿವ ಶರೀರವು ಮಧ್ಯಾಹ್ನ 1 ಗಂಟೆ ವೇಳೆಗೆ ಭುವನೇಶ್ವರ್ ಗೆ ತಲುಪಲಿದೆ.

* N/Niak ಬಿ ಸಾಯಿ ತೇಜ ಅವರ ಪಾರ್ಥಿವ ಶರೀರವು ಮಧ್ಯಾಹ್ನ 12.30ರ ಹೊತ್ತಿಗೆ ಬೆಂಗಳೂರಿಗೆ ಆಗಮಿಸಲಿದೆ.

* N/Niak ವಿವೇಕ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಈಗಾಗಲೇ 11.30ರ ಹೊತ್ತಿಗೆ ಗಗ್ಗಲ್ ಪ್ರದೇಶಕ್ಕೆ ತಲುಪಿಸಲಾಗಿದೆ.

ಶುಕ್ರವಾರ ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ಅಂತ್ಯಕ್ರಿಯೆ:

ಭಾರತದ ಮೊದಲ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಪಾರ್ಥಿವ ಶರೀರವನ್ನು ಕಾಮರಾಜ್ ಮಾರ್ಗದಿಂದ ದೆಹಲಿ ಕಂಟೋನ್ಮೆಂಟ್‌ನ ಬ್ರಾರ್ ಸ್ಕ್ವೇರ್ ಸ್ಮಶಾನದವರೆಗೆ ಅಂತ್ಯಕ್ರಿಯೆ ಮೆರವಣಿಗೆ ನಡೆಸಲಾಯಿತು. ಅಂತಿಮವಾಗಿ ದೆಹಲಿ ಕಂಟೋನ್ಮೆಂಟ್‌ನಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನರವೇರಿಸಲಾಗುತ್ತದೆ. ಇನ್ನೊಂದು ಕಡೆ ಬ್ರಿಗೇಡಿಯರ್ ಎಲ್ ಎಸ್ ಲಿಡ್ಡೇರ್ ಅಂತ್ಯ ಸಂಸ್ಕಾರವನ್ನು ಶುಕ್ರವಾರ ಬೆಳಗ್ಗೆ 9.30ಕ್ಕೆ ದೆಹಲಿ ಕಂಟೋನ್ಮೆಂಟ್‌ನಲ್ಲಿ ನಡೆಸಲಾಯಿತು.

ಎಲ್ಲಾ ಹುತಾತ್ಮ ಯೋಧರಿಗೂ ಅಂತಿಮ ಗೌರವ:

ತಮಿಳುನಾಡು ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ ಸಿಡಿಎಸ್ ಜನರಲ್ ಬಿಪಿನ್ ರಾವತ್, ಮಧುಲಿಕಾ ರಾವತ್, ಎಲ್/ಎನ್‌ಕೆ ವಿವೇಕ್ ಕೆಆರ್, ಎನ್‌ಕೆ ಗುರುಶೇವಕ್ ಸಿಂಗ್, ಎಲ್/ಎನ್‌ಕೆ ಬಿಎಸ್ ತೇಜ, ನಾಯಕ್ ಜಿತೇಂದರ್ ಕೆಆರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಬ್ರಿಗ್ ಎಲ್‌ಎಸ್ ಲಿಡರ್, ಹವಾಲ್ದಾರ್ ಸತ್ಪಾಲ್ ರಾಜ್, ಡಬ್ಲ್ಯುಜಿ ಸಿಡಿಆರ್ ಪಿ ಎಸ್ ಚೌಹಾಣ್, ಸ್ಕ್ಎನ್ ಲೀಡರ್ ಕೆ ಸಿಂಗ್, ಜೆಡಬ್ಲ್ಯೂಒ ರಾಣಾ ಪ್ರತಾಪ್ ದಾಸ್ ಮತ್ತು ಜೆಡಬ್ಲ್ಯೂಒ ಪ್ರದೀಪ್ ಎ. ಪಾರ್ಥಿವ ಶರೀರವನ್ನು ಪಾಲಂ ವಾಯು ನೆಲೆಯಲ್ಲಿ ಗುರುವಾರ ಅಂತಿಮ ಗೌರವ ಸಲ್ಲಿಸಲಾಯಿತು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ವೇಳೆ ಭಾರತೀಯ ಭೂ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅಂತಿಮ ನಮನ ಸಲ್ಲಿಸಿದರು.

Recommended Video

Australia ಮೊದಲನೇ ಪಂದ್ಯದಲ್ಲಿ ಗೆಲ್ಲಲು ಮಾಡಿದ್ದೇನು | Oneindia Kannada

English summary
The positive identification of six bodies has been done and four are still remaining. Mortal remains to be released today. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X