ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರ: ಸೇನೆಯ ಬಲಕ್ಕೆ ನಾಲ್ವರು ಉಗ್ರರು ಬಲಿ

|
Google Oneindia Kannada News

ಶ್ರೀನಗರ, ಜೂನ್ 22: ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಗೊಂದಲಗಳ ನಡುವೆಯೇ ಉಗ್ರರು ಮತ್ತು ಸೇನಾಪಡೆಗಳ ನಡುವಣ ಕಾಳಗ ಮುಂದುವರಿದಿದೆ.

ಅನಂತನಾಗ್ ಜಿಲ್ಲೆಯಲ್ಲಿ ಶುಕ್ರವಾರ ನಸುಕಿನ ವೇಳೆಯೇ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈವರೆಗೂ ನಾಲ್ವರು ಉಗ್ರರ ಮೃತದೇಹ ಪತ್ತೆಯಾಗಿದೆ.

ಕಾಶ್ಮೀರಕ್ಕೆ ಸ್ವಾತಂತ್ರ್ಯ ಬೇಕಿದೆ ಎಂದು ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕಕಾಶ್ಮೀರಕ್ಕೆ ಸ್ವಾತಂತ್ರ್ಯ ಬೇಕಿದೆ ಎಂದು ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ

ಭಯೋತ್ಪಾದಕರ ದಾಳಿ ತೀವ್ರವಾಗಿರುವ ಶ್ರೀಗುಫ್ವಾರಾ ಪ್ರದೇಶದಲ್ಲಿ ಈ ಎನ್‌ಕೌಂಟರ್‌ ನಡೆದಿದೆ. ಘಟನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ. ಇಬ್ಬರು ನಾಗರಿಕರಿಗೆ ಗಾಯಗಳಾಗಿವೆ.

army forces killed four terrorists in anantnag

ಈ ಪ್ರದೇಶದಲ್ಲಿ 3-4 ಮಂದಿ ಉಗ್ರರು ಇರುವ ಖಚಿತ ಮಾಹಿತಿಯೊಂದಿಗೆ ಸೇನಾ ಸಿಬ್ಬಂದಿ ಪತ್ತೆ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಉಗ್ರರು ಸೇನಾ ಪಡೆ ಮೇಲೆ ಗುಂಡು ಹಾರಿಸಿದರು. ಕೂಡಲೇ ಪ್ರತ್ಯುತ್ತರ ನೀಡಿದ ಸೇನಾಪಡೆ ಉಗ್ರರನ್ನು ಸದೆಬಡಿಯಿತು.

ಈ ಉಗ್ರರು ಜಮ್ಮು ಮತ್ತು ಕಾಶ್ಮೀರ ಇಸ್ಲಾಮಿಕ್ ಸ್ಟೇಟ್‌ ಸಂಘಟನೆ ಜತೆ ನಂಟು ಹೊಂದಿದ್ದರು ಎಂದು ಡಿಜಿಪಿ ಶೇಷಪಾಲ್ ವೈದ್ಯ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಪಿಡಿಪಿ ಜೊತೆ ಬಿಜೆಪಿ ಡೈವೋರ್ಸ್: ಅಸಲಿ ಸಿನಿಮಾ ಶುರುವಾಗೋದೇ ಇನ್ಮುಂದೆ? ಕಾಶ್ಮೀರದಲ್ಲಿ ಪಿಡಿಪಿ ಜೊತೆ ಬಿಜೆಪಿ ಡೈವೋರ್ಸ್: ಅಸಲಿ ಸಿನಿಮಾ ಶುರುವಾಗೋದೇ ಇನ್ಮುಂದೆ?

ಉಗ್ರರ ಹತ್ಯೆಯಲ್ಲಿ ಹೆಚ್ಚಳ
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಶ್ಮೀರದಲ್ಲಿ ಉಗ್ರರ ಹತ್ಯೆಯ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

2012ರಲ್ಲಿ 72 ಉಗ್ರರನ್ನು ಹತ್ಯೆ ಮಾಡಲಾಗಿತ್ತು. 2013ರಲ್ಲಿ 67 ಉಗ್ರರು ಸತ್ತಿದ್ದರು. 2014ರ ಜೂನ್‌ನಲ್ಲಿ ನಾವು ಅಧಿಕಾರಕ್ಕೆ ಬಂದ ಬಳಿ ಆ ವರ್ಷ 110 ಉಗ್ರರನ್ನು ಕೊಲ್ಲಲಾಯಿತು.

2015ರಲ್ಲಿ 108, 2016ರಲ್ಲಿ 150, 2017ರಲ್ಲಿ 217 ಮತ್ತು ಮೇ 18ರವರೆಗೆ 75 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ವಿವರ ನೀಡಿದ್ದಾರೆ.

English summary
four terrorists gunned down by security forces in anantnag district on Friday. Security forces launched search operation militants fired upon forces in wee hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X