ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳ್ಳತನ ತಪ್ಪಿಸಲು ಗೂಡ್ಸ್‌ ರೈಲುಗಳಿಗೆ ಇನ್ನು ಸಶಸ್ತ್ರ ಪಡೆ ಕಾವಲು

|
Google Oneindia Kannada News

ನವದೆಹಲಿ, ಜನವರಿ 31 : ರೈಲ್ವೆ ಸಚಿವಾಲಯ ಗೂಡ್ಸ್ ರೈಲುಗಳ ಸುರಕ್ಷತೆಗಾಗಿ ಸಶಸ್ತ್ರ ಕಾವಲು ಆಳವಡಿಕೆ ಮಾಡಲು ಒಪ್ಪಿಗೆ ನೀಡಿದೆ. ರೈಲ್ವೆ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾವಲು ನೀಡಲು ಅನುಮತಿ ನೀಡಲಾಗಿದೆ.

ಗೂಡ್ಸ್‌ ರೈಲುಗಳಲ್ಲಿ ಸಾಗಣೆಯಾಗುವ ವಸ್ತುಗಳ ಸುರಕ್ಷತೆಗಾಗಿ ಈ ಕ್ರಮವನ್ನು ಇಲಾಖೆ ಕೈಗೊಂಡಿದೆ. ಪೂರ್ವ ರೈಲ್ವೆ ವಲಯದಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ. ಬಳಿಕ ಉಳಿದ ರೈಲ್ವೆ ವಲಯಕ್ಕೆ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ.

ಫೆ.15ರಿಂದ ಹುಬ್ಬಳ್ಳಿ-ವಿಜಯಪುರ ಇಂಟರ್ ಸಿಟಿ ರೈಲು ಆರಂಭ ಫೆ.15ರಿಂದ ಹುಬ್ಬಳ್ಳಿ-ವಿಜಯಪುರ ಇಂಟರ್ ಸಿಟಿ ರೈಲು ಆರಂಭ

ರೈಲುಗಳಿಗೆ ಭದ್ರತೆ ಕೊಡಲು ಇಲಾಖೆ ಯಾರನ್ನು ನೇಮಕಾತಿ ಮಾಡಿಕೊಳ್ಳುವುದಿಲ್ಲ. ಖಾಸಗಿ ಭದ್ರತಾ ಸಿಬ್ಬಂದಿಗಳ ಮೂಲಕ ಭದ್ರತೆ ಒದಗಿಸಲು ತೀರ್ಮಾನಿಸಲಾಗಿದೆ. ಪ್ರಾಯೋಗಿಕವಾಗಿ ಆರು ತಿಂಗಳ ಕಾಲ ಭದ್ರತೆ ಒದಗಿಸಲಾಗುತ್ತದೆ.

ರೈಲು ಒಂದೂವರೆ ಗಂಟೆ ತಡವಾಗಿದ್ದಕ್ಕೆ 63,000 ರೂ ಪರಿಹಾರ ಪಾವತಿಸಲಿದೆ ಐಆರ್‌ಸಿಟಿಸಿರೈಲು ಒಂದೂವರೆ ಗಂಟೆ ತಡವಾಗಿದ್ದಕ್ಕೆ 63,000 ರೂ ಪರಿಹಾರ ಪಾವತಿಸಲಿದೆ ಐಆರ್‌ಸಿಟಿಸಿ

Armed Force To Escort Goods Train

ಸರಕುಗಳನ್ನು ಸಾಗಣೆ ಮಾಡುವ ರೈಲಿನಲ್ಲಿ ಬ್ರೇಕ್ ವ್ಯಾನ್‌ನಲ್ಲಿ ಸಶಸ್ತ್ರ ಕಾವಲುಗಾರರು ಇರುವುದಕ್ಕೆ ಅವಕಾಶ ನೀಡಿದೆ. ಗೂಡ್ಸ್‌ ರೈಲಿನಲ್ಲಿ ಸರಕುಗಳ ಕಳವು ತಡೆಯುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ

ಭದ್ರತೆ ಒದಗಿಸುವ ಕುರಿತು ಜನವರಿ 29ರಂದು ಆದೇಶ ಹೊರಡಿಸಲಾಗಿದೆ. ಪ್ರಾಯೋಗಿಕವಾದ ಆರು ತಿಂಗಳ ಅವಧಿ ಮುಗಿದ ಬಳಿಕ ಇದನ್ನು ಮುಂದುವರೆಸುವ ಬಗ್ಗೆ ಪರಾಮರ್ಶೆ ನಡೆಸಿ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.

English summary
Railway approved for armed force to escort goods train. Initially it will implement in Eastern Railway zone. Armed escorts will provided by private agencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X