ಸ್ವಾತಂತ್ರ್ಯ ದಿನ ಶಕ್ತಿಸೌಧಕ್ಕೆ ಅಪ್ಪಳಿಸಲಿದೆ ರೈತರ ಮಹಾಪ್ರವಾಹ

Subscribe to Oneindia Kannada

ತುಮಕೂರು, ಆಗಸ್ಟ್, 11: ತೆಂಗು ಮತ್ತು ಅಡಿಕೆಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿ 5 ಸಾವಿರ ರೈತರು ಸ್ವಾತಂತ್ರ್ಯೋತ್ಸವದಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಸಮಸ್ಯೆ ಎದುರಿಸುತ್ತಿರುವ 13 ಜಿಲ್ಲೆಗಳ ರೈತರು ವಿವಿಧ ಕಡೆಯಿಂದ ಪಾದಯಾತ್ರೆ ಹೊರಟಿದ್ದಾರೆ.

ತಿಪಟೂರಿನಿಂದ ಆರಂಭವಾಗಿರುವ ಕಾಲ್ನಡಿಗೆ ಜಾಥಾಕ್ಕೆ ರೈತ ಮುಖಂಡ ಕಡಿದಾಳ್ ಶಾಮಣ್ಣ ಹಾಗೂ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಚಾಲನೆ ನೀಡಿದ್ದಾರೆ.[ಆಮದು ನಿಷೇಧ ಅಡಿಕೆ ಬೆಳೆಗಾರರ ಹಿತ ಕಾಯುವುದೆ?]

 Arecanut, coconut Price fall: Raitha Sangha siege Vidhana Soudha

ತೆಂಗು ಮತ್ತು ಅಡಿಕೆ ದರ ಕುಸಿತದಿಂದ ರೈತರು ಆತ್ಮಹತ್ಯೆ ದಾರಿಯನ್ನು ಮತ್ತೆ ಹಿಡಿಯುವಂತೆ ಆಗಿದೆ. ಮಯಖ್ಯಮಂತ್ರಿ ಸಿದ್ದರಾಮಯ್ಯ ರೈತರು ಎದುರಿಸುತ್ತಿರಯವ ಸಮಸ್ಯೆಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಪಾದಯಾತ್ರೆಯಲ್ಲಿ ಆಗಮಿಸುತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.[ಅಡಿಕೆ ಧಾರಣೆ ಕುಸಿತಕ್ಕೆ ಸಾರ್ಕ್‌ ಒಕ್ಕೂಟ ಕಾರಣ ಅಂದ್ರೆ ನಂಬ್ತೀರಾ?]

 Arecanut, coconut Price fall: Raitha Sangha siege Vidhana Soudha

ತುಮಕೂರಿನ ವಿವಿಧ ಮಠಗಳ ಮಠಾಧೀಶರು ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಡಾ. ಅಭಿನವಮಲ್ಲಿಕಾರ್ಜುನ ಸ್ವಾಮೀಜಿ, ಗೊಡೆಕೆರೆ ಮಠದ ಶ್ರೀ ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಷಡಕ್ಷರ ಮಠದ ಶ್ರೀರುದ್ರಮುನಿ ಸ್ವಾಮೀಜಿ ರೈತರನ್ನು ಬೀಳ್ಕೊಟ್ಟರು.[ತೆಂಗಿನಕಾಯಿ ಬೆಲೆ ಪ್ರಪಾತಕ್ಕೆ ಕುಸಿಯಲು ಕಾರಣಗಳೇನು?]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Rajya Raitha Sangha have planned to lay siege to Vidhana Soudha, Bengaluru on August 15th Independence day. Rajya Raitha Sangha President Kodihalli Chandrashekhar to lead the Farmers. Karnataka Rajya Raitha Sangha urges the announcement of support price for arecanut and coconut as its growers are in deep trouble because of the sudden collapse in prices.
Please Wait while comments are loading...