ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಶ್ರೀಮಂತ ಭಿಕ್ಷುಕರ ಬಳಿ ಏನೇನಿದೆ?

|
Google Oneindia Kannada News

ಬೆಂಗಳೂರು, ಮೇ 28: ಪೋರ್ಬ್ಸ್ ಪಟ್ಟಿಯಲ್ಲಿನ ಶ್ರೀಮಂತರು, ಜಗತ್ತಿನ ಪ್ರಭಾವಿ ವ್ಯಕ್ತಿಗಳು, ಹೆಚ್ಚು ಹಣ ಗಳಿಸುವ ಕ್ರೀಡಾಪಟುಗಳು, ಕಲಾವಿದರು ಹೀಗೆ ಅನೇಕ ಪಟ್ಟಿಗಳನ್ನು ನೋಡಿದ್ದೇವೆ ಕೇಳಿದ್ದೇವೆ. ಆದರೆ ಇಲ್ಲೊಂದು ಪಟ್ಟಿಯಿದೆ.

ಅತಿಹೆಚ್ಚು ಹಣ ಸಂಪಾದನೆ(ಭಿಕ್ಷೆ ಎತ್ತುವ) ಭಿಕ್ಷುಕರ ಪಟ್ಟಿಯನ್ನು ಒಮ್ಮೆ ನೋಡಲೇಬೇಕು. ಅಬ್ಬಾ ಇವರು ಇಷ್ಟೆಲ್ಲಾ ಸಂಪಾದನೆ ಮಾಡುತ್ತಾರಾ? ಎಂದು ಒಮ್ಮೆ ಆಶ್ಚರ್ಯವಾದರೂ ಸತ್ಯ ಸಂಗತಿಯನ್ನು ಒಪ್ಪಿಕೊಳ್ಳಲೇಬೇಕು.

ಭಿಕ್ಷಾಟನೆಯಲ್ಲೇ ಸಂಪಾದನೆ ಮಾಡಿ ಮಹಾನಗರದಲ್ಲಿ ಬಹುಮಹಡಿ ಕಟ್ಟಡ ಕಟ್ಟಿದ, ಫ್ಲಾಟ್ ಕಟ್ಟಿ ಬಾಡಿಗೆಗೆ ನೀಡಿದ ಮಹಾನುಭಾವರ ಬಗ್ಗೆ ತಿಳಿದುಕೊಳ್ಳಲೇಬೇಕು. ಇವರ ಆದಾಯಕ್ಕೆ ಹೋಲಿಕೆ ಮಾಡಿದರೆ ನಮ್ಮ ವರಮಾನ ಲೆಕ್ಕಕ್ಕೆ ಇಲ್ಲ ಬಿಡಿ. ಯಾವ ಬಿಪಿಒ, ಮಾರ್ಕೆಟಿಂಗ್ ಹೆಡ್, ಸಾಫ್ಟ್ ವೇರ್ ಇಂಜಿನಿಯರ್ ಗಿಂತಲೂ ಇವರೇ ಜಾಸ್ತಿ ಹಣ ಸಂಪಾದನೆ ಮಾಡುತ್ತಿದ್ದಾರೆ.

beggar

1. ಭರತ್ ಜೈನ್
ಶ್ರೀಮಂತ ಭಿಕ್ಷುಕರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಮುಂಬೈನ ಭರತ್ ಜೈನ್ ಅಲಂಕರಿಸುತ್ತಾರೆ. 49 ವರ್ಷದ ಜೈನ್ ಬಳಿ ಮಹಾನಗರ ಮುಂಬೈನಲ್ಲಿ ಎರಡು ಬಹುಮಹಡಿ ಕಟ್ಟಡಗಳ ಒಡೆತನವಿದೆ. ಇವು ಸುಮಾರು 70 ಲಕ್ಷ ರು. ಗೂ ಅಧಿಕ ಬೆಲೆಬಾಳುತ್ತವೆ.

ಅಲ್ಲದೇ ಜೈನ್ ಜ್ಯೂಸ್ ಶಾಪ್ ವೊಂದರ ಮಾಲಿಕತ್ವ ಹೊಂದಿದ್ದಾರೆ. ಬಾಡಿಗೆ ಮೂಲಕವೇ ತಿಂಗಳಿಗೆ ಹತ್ತು ಸಾವಿರಕ್ಕೂ ಅಧಿಕ ಹಣ ಜೈನ್ ಗೆ ಹರಿದು ಬರುತ್ತದೆ.[ಭಿಕ್ಷುಕರೊಡನೆ ಹೋಳಿಗೆ ಸವಿದ ಸಚಿವ ಆಂಜನೇಯ]

2. ಕಿರಣ್ ಕುಮಾರ್ ಗೀತೆ
ಮುಂಬೈನ ಮತ್ತೊಬ್ಬ ಭಿಕ್ಷುಕನಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನ. ಮುಂಬೈ ಟ್ರಾಫಿಕ್ ನಲ್ಲಿ ಭಿಕ್ಷೆ ಬೇಡುವ ಕಿರಣ್ ಕುಮಾರ್ ಬಳಿ ದೊಡ್ಡದಾದ ಮನೆಯಿದೆ. ಇವರ ದಿನದ ವರಮಾನವೇ 1500 ರು!

beggar

3. ಸರೈತಾ ದೇವಿ
ಭಿಕ್ಷುಕರ ಪಟ್ಟಿಯಲ್ಲೂ ಮಹಿಳೆಯರು ಹಿಂದೆ ಬಿದ್ದಿಲ್ಲ. ಪಾಟ್ನಾದ ನಿವಾಸಿಯಾಗಿರುವ ದೇವಿ ರೈಲಿನಲ್ಲಿ ಭಿಕ್ಷೆ ಬೇಡಿತ್ತಾರೆ. ವಾರ್ಷಿಕ 36 ಸಾವಿರ ರು. ಗೂ ಅಧಿಕ ಮೊತ್ತವನ್ನು ವಿಮಾ ಪ್ರೀಮಿಯಂನ್ನೇ ಕಟ್ಟುತ್ತಾಳೆ.['ಪುಷ್ಪಕ ವಿಮಾನ'ದ ಭಿಕ್ಷುಕ ಕಣ್ಮುಂದೆ ಹಾದುಹೋದಾಗ]

4. ಸಂಭಾಜಿ ಕಾಳೆ
ಮುಂಬೈ ನಿವಾಸಿ ಸಂಭಾಜಿ ಕಾಳೆಯ ಕುಟುಂಬವೇ ಭಿಕ್ಷಾಟನೆಯಲ್ಲಿ ತೊಡಗಿಕೊಂಡಿದೆ. ವಿಹಾರ್ ದಲ್ಲಿ ಇವರು ಸ್ವಂತ ಮನೆ ಹೊಂದಿದ್ದಾರೆ. ದಿನಕ್ಕೆ ಸಾವಿರ ರೂ ಸಂಪಾದನೆಯಾಗದ ವಿನಃ ಕಾಳೆ ಮನೆಗೆ ಹಿಂದಿರುಗಲ್ಲ.

ಈಗ ಹೇಳಿ ರಸ್ತೆ ಮೇಲೆ ತೆರಳುತ್ತಿದ್ದಾಗ ಯಾರಾದರೂ ಭಿಕ್ಷೆ ಕೇಳಿದರೆ ಓರೆ ನೋಡ ಮಾಡಿಕೊಂಡು ಹೋಗುತ್ತೀರಾ? ಮನೆ ಬಾಡಿಗೆಗೆ ಸಿಗದೇ ಒದ್ದಾಡುತ್ತಿದ್ದರೆ ಇವರ ಬಳಿಗೆ ತೆರಳಬೇಕಾದೀತು ಹುಷಾರ್!

English summary
Top Richest or highest earning well settled beggars in india. as compared to statistics they are earning more than the average software engineer/ BPO/ CAll center employees monthly earnings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X