ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್, ತೃತೀಯಲಿಂಗಿಗೆ ಪ್ರಮುಖ ಸ್ಥಾನ

|
Google Oneindia Kannada News

Recommended Video

ರಾಜಕೀಯದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್‍ನಿಂದ ಮಹತ್ವದ ನಿರ್ಧಾರ | Oneindia Kannada

ನವದೆಹಲಿ, ಜನವರಿ 08: ಸಾಮಾಜಿಕ ಕಾರ್ಯಕರ್ತ, ಮಾಜಿ ಪತ್ರಕರ್ತೆ, ತೃತೀಯಲಿಂಗಿ ಅಪ್ಸರಾ ರೆಡ್ಡಿ ಅವರನ್ನು ಅಖಿಲ ಭಾರತ ಮಹಿಳಾ ಕಾಂಗ್ರೆಸ್ (ಎಐಎಂಸಿ) ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಈ ಮೂಲಕ 134 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತೃತೀಯಲಿಂಗಿಯೊಬ್ಬರಿಗೆ ಇಂಥ ಹುದ್ದೆಯನ್ನು ನೀಡಲಾಗಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ(ಜನವರಿ 08)ದಂದು ಅಪ್ಸರಾ ರೆಡ್ಡಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

Apsara Reddy appointed Congresss first transgender National General Secretary

ಲೋಕಸಭಾ ಚುನಾವಣೆ: ಅಮೇಥಿಯಿಂದ ಮಹಾರಾಷ್ಟ್ರದತ್ತ ರಾಹುಲ್ ಗುಳೆ?ಲೋಕಸಭಾ ಚುನಾವಣೆ: ಅಮೇಥಿಯಿಂದ ಮಹಾರಾಷ್ಟ್ರದತ್ತ ರಾಹುಲ್ ಗುಳೆ?

ಕಾಲೇಜು ದಿನಗಳಿಂದಲೇ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಅಪ್ಸರ ಭಾಗವಹಿಸಿದ್ದರು. ನಂತರ ತಮಿಳುನಾಡಿನ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್​ ಶಾರೊಂದಿಗೆ ಚರ್ಚಿಸಿ, ಬಿಜೆಪಿಗೆ ಸೇರ್ಪಡೆಯಾಗಿದ್ದರು.

2016ರಲ್ಲಿ ಭಾರತೀಯ ಜನತಾ ಪಕ್ಷದಲ್ಲಿದ್ದ ಅಪ್ಸರಾ ಅವರು ನಂತರ ಅಣ್ಣಾಡಿಎಂಕೆ (ಎಐಎಡಿಎಂಕೆ) ಪಕ್ಷ ವಕ್ತಾರರಾಗಿದ್ದರು. ಬಿಜೆಪಿಯಲ್ಲಿ ಸಮಾನತೆ ಇಲ್ಲ ಎಂದು ಟೀಕಿಸಿದ್ದರು. ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ನಿಧನದ ನಂತರ ಶಶಿಕಲಾ ನಟರಾಜನ್ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು.

English summary
Journalist Apsara Reddy, a transgender woman known for her social activism, has been appointed as the National General Secretary of All India Mahila Congress (AIMC), making her the 134-year-old party's first transgender officebearer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X