ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒತ್ತಡಕ್ಕೆ ಕೊನೆಗೂ ಮಣಿದ ಮೋದಿ ಸರಕಾರ: ಮಹತ್ವದ ನಿರ್ಧಾರ!

|
Google Oneindia Kannada News

ನವದೆಹಲಿ, ಫೆ 24: ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹತ್ವದ ಲೋಕಪಾಲ್ ನೇಮಕಕ್ಕೆ ನರೇಂದ್ರ ಮೋದಿ ಸರಕಾರ ಮುಂದಾಗುವ ಎಲ್ಲಾ ಸಾಧ್ಯತೆಗಳಿದ್ದು, ಸರ್ವೋಚ್ಚ ನ್ಯಾಯಾಲಯಕ್ಕೆ ವಿವರಣೆ ನೀಡಿದೆ.

ಕಾಮನ್ ಕಾಸ್ ಎನ್ನುವ ಎನ್ಜಿಓ ಸಲ್ಲಿಸಿದ್ದ ಅರ್ಜಿಯ ಸಂಬಂಧ ಶುಕ್ರವಾರ (ಫೆ 23) ವಿಚಾರಣೆ ನಡೆಸುತ್ತಿದ್ದ ಸುಪ್ರೀಂಕೋರ್ಟ್, ಕೇಂದ್ರ ಸರಕಾರಕ್ಕೆ ವಿಸ್ಕೃತ ವಿವರಣೆ ನೀಡುವಂತೆ ಸೂಚಿಸಿತ್ತು. ಈ ಸಂಬಂಧ ವಿವರಣೆ ನೀಡಿರುವ ಕೇಂದ್ರ, ಮಾರ್ಚ್ ಒಂದರಂದು ಲೋಕಪಾಲ್ ನೇಮಕ ಸಮಿತಿಯ ಸಭೆ ನಡೆಯಲಿದೆ ಎಂದು ಹೇಳಿದೆ.

ಕೇಂದ್ರ ಸರಕಾರದ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಲೋಕಪಾಲ ಸಮಿತಿಯಲ್ಲಿ, ಸಿಜೆಐ ದೀಪಕ್ ಮಿಶ್ರಾ, ಪ್ರಧಾನಿ ಮೋದಿ ಮತ್ತು ಸಂಸತ್ತಿನ ಉಭಯ ಸದನಗಳ ಪ್ರತಿಪಕ್ಷದ ನಾಯಕರುಗಳು ಸದಸ್ಯರಾಗಿರುತ್ತಾರೆ.

Appointment of Lokpal finally in process: Modi led Union government tells Supreme Court

ವಿರೋಧ ಪಕ್ಷಗಳಲ್ಲಿ ನಾಯಕರ ಕೊರತೆಯಿದೆ ಎನ್ನುವ ಕಾರಣ ನೀಡಿ, ಲೋಕಪಾಲ ನೇಮಕ ಪ್ರಕ್ರಿಯೆ ವಿಳಂಬವಾಗಬಾರದೆಂದು ಕಳೆದ ಏಪ್ರಿಲ್ ತಿಂಗಳಲ್ಲೇ ಸರ್ವೋಚ್ಚ ನ್ಯಾಯಾಲಯ ಕೇಂದ್ರಕ್ಕೆ ಸೂಚಿಸಿತ್ತು. ಕಾಂಗ್ರೆಸ್ ಅಥವಾ ಇತರ ವಿರೋಧ ಪಕ್ಷಗಳ ನಾಯಕರು ಇಲ್ಲದಿದ್ದರೂ ಲೋಕಪಾಲ್ ನೇಮಿಸಿ ಎಂದು ನ್ಯಾಯಾಲಯ ಹೇಳಿತ್ತು.

ಅಣ್ಣಾಹಜಾರೆ ರಾಷ್ಟ್ರವ್ಯಾಪಿ ಚಳುವಳಿ ನಡೆಸಿದ ನಂತರ 2013ರಲ್ಲಿ ಲೋಕಪಾಲ ನೇಮಕಕ್ಕೆ ಪಾರ್ಲಿಮೆಂಟಿನಲ್ಲಿ ಅನುಮೋದನೆ ನೀಡಲಾಗಿತ್ತು. 2014ರಲ್ಲಿ ಮೋದಿ ಸರಕಾರಕ್ಕೆ ಅಧಿಕಾರಕ್ಕೆ ಬಂದ ನಂತರ, ವಿರೋಧ ಪಕ್ಷದಲ್ಲಿ ನಾಯಕರೇ ಇಲ್ಲ ಎಂದು ಕೋರ್ಟಿಗೆ ಹೇಳಿತ್ತು.

ವಿರೋಧ ಪಕ್ಷದ ಸ್ಥಾನಮಾನವೂ ಸಿಗದಂತೆ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್ ಈಗ ಪಾರ್ಲಿಮೆಂಟಿನಲ್ಲಿ ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ. ಹಾಗಾಗಿ, ಕಾಂಗ್ರೆಸ್ ಪಕ್ಷವನ್ನು ಅಧಿಕೃತ ವಿರೋಧ ಪಕ್ಷವೆಂದು ಪ್ರಕಟಿಸುವ ನಿರ್ಧಾರಕ್ಕೆ ಸಂಸತ್ತಿನಲ್ಲಿ ಇನ್ನೂ ಅನುಮೋದನೆ ಸಿಗಬೇಕಷ್ಟೇ.

English summary
The anti-corruption Lokpal is in process and the meeting of the selection panel, which includes the Prime Minister and the Chief Justice of India, both the floors opposition leaders, will take place on March 1, the government told the Supreme Court on Friday (Feb 23)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X