ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಸಚಿವಾಲಯದಿಂದ ಪ್ರಯಾಣಿಕರಲ್ಲಿ ಮನವಿ

|
Google Oneindia Kannada News

ನವದೆಹಲಿ, ಮೇ 29: ರೈಲ್ವೆ ಸಚಿವಾಲಯವು ಪ್ರಯಾಣಿಕರಲ್ಲಿ ಮನವಿ ಮಾಡಿದೆ. ಭಾರತೀಯ ರೈಲ್ವೆಯು ವಲಸೆ ಕಾರ್ಮಿಕರನ್ನು ಊರು ಸೇರಿಸಲು ಪ್ರತಿನಿತ್ಯ ಶ್ರಮಿಕ್ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ.

ಅನಾರೋಗ್ಯದಿಂದ ಬಳಲುತ್ತಿದ್ದರೆ, ಮೊದಲೇ ಯಾವುದಾದರೂ ರೋಗವಿದ್ದರೆ ದಯವಿಟ್ಟು ರೈಲಿನಲ್ಲಿ ಸಂಚರಿಸಬೇಡಿ ಎಂದು ಪ್ರಯಾಣಿಕರಲ್ಲಿ ವಿನಂತಿ ಮಾಡಿಕೊಂಡಿದೆ.

ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?

ಜೂನ್ 1 ರಿಂದ ಕೆಲವು ರಾಜ್ಯಗಳಲ್ಲಿ ರೈಲುಗಳ ಸಂಚಾರ ಆರಂಭಗೊಳ್ಳಲಿದೆ. ಸಾಕಷ್ಟು ಮಂದಿ ರೈಲಿನಲ್ಲಿ ಪ್ರಯಾಣಿಸುವಾಗಲೇ ಸಾವನ್ನಪ್ಪುತ್ತಿದ್ದಾರೆ. ಹೈಪರ್‌ ಟೆನ್ಷನ್, ಮಧುಮೇಹ, ಹೃದಯಸಂಬಂಧಿ ಕಾಯಿಲೆ, ಕ್ಯಾನ್ಸರ್ ಇನ್ನಿತರೆ ಕಾಯಿಲೆಗಳಿದ್ದರೆ ಓಡಾಟ ಮಾಡಬೇಡಿ ಇದ್ದಲ್ಲಿಯೇ ಇರಿ ಎಂದು ಸೂಚನೆ ನೀಡಲಾಗಿದೆ.

Appeals From Ministry Of Railways To Passengers

ಹಾಗೆಯೇ ಗರ್ಭಿಣಿ, 10 ವರ್ಷದೊಳಗಿನ ಮಕ್ಕಳು, 65 ವರ್ಷ ಮೇಲ್ಪಟ್ಟವರು ರೈಲಿನಲ್ಲಿ ಸಂಚರಿಸುವುದು ಬೇಡ ಇಂಥವರಿಗೆ ಕೊರೊನಾ ವೈರಸ್ ತಗುಲುವ ಸಾಧ್ಯತೆ ಇರುತ್ತದೆ.
ಪ್ರಯಾಣಿಕರ ಸೇವೆಗೆ ಭಾರತೀಯ ರೈಲ್ವೆ ಪರಿವಾರ ದಿನದ 24 ಗಂಟೆಯೂ ಕೆಲಸ ಮಾಡುತ್ತಿದೆ.

ಪ್ರಯಾಣಿಕರ ಭದ್ರತೆ ಮುಖ್ಯವಾಗಿದೆ. ಏನೇ ತೊಂದರೆಯಿದ್ದರೂ ಹಿಂಜರಿಯಬೇಡಿ ಮುಕ್ತವಾಗಿ 139,138ಕ್ಕೆ ಕರೆ ಮಾಡಿ ಎಂದು ರೈಲ್ವೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಶ್ರಮಿಕ್ ರೈಲು ಸಂಚಾರ; ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿಶ್ರಮಿಕ್ ರೈಲು ಸಂಚಾರ; ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿ

ಬಿಹಾರದ ರೈಲ್ವೆ ನಿಲ್ದಾಣದಲ್ಲಿ ತಾಯಿಯ ಮೃತದೇಹದ ಮುಂದೆ ಮಗು ಆಟವಾಡುತ್ತಿದ್ದ ದೃಶ್ಯ ಎಲ್ಲರನ್ನೂ ಮರುಕಗೊಳಿಸಿತ್ತು. ಆ ಮಹಿಳೆ ಕುಟುಂಬದ ಜೊತೆ ರೈಲಿನಲ್ಲಿ ಬಂದಿದ್ದಳು. ಆಹಾರ, ನೀರು ಎಲ್ಲಾ ವ್ಯವಸ್ಥೆಯೂ ಅಲ್ಲಿತ್ತು.

ಆದರೆ ಮೊದಲೇ ಅವರಿಗೆ ಆರೋಗ್ಯ ಸಮಸ್ಯೆ ಇತ್ತೇ ಎಂಬುದನ್ನು ತಿಳಿಯಬೇಕಿದೆ. ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸಲು ರೈಲ್ವೆ ಸಚಿವಾಲಯ ಪ್ರಯಾಣಿಕರಲ್ಲಿ ಮನವಿ ಮಾಡಿದೆ.

English summary
Railway Ministry Says To protect vulnerable persons from COVID19, in line with MHA directives,Railways makes an appeal that persons with co-morbidities, pregnant women, children below the age of 10 years and persons above 65 years may avoid travel by rail,except when it is essential.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X