ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ 400 ರೂ. ಲಸಿಕೆ 1500ಕ್ಕೆ ಮಾರಾಟ: ಅನುರಾಗ್ ಠಾಕೂರ್ ಆರೋಪ

|
Google Oneindia Kannada News

ನವದೆಹಲಿ, ಜೂನ್ 3: ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಲಸಿಕೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ಹಾಗೂ ರಾಜಸ್ಥಾನ ರಾಜ್ಯಗಳು ವಾಕ್ಸಿನ್ ಬ್ಲ್ಯಾಕ್ ಮಾರ್ಕೆಟಿಂಗ್‌ನಲ್ಲಿ ಭಾಗಿಯಾಗಿದೆ, ಈ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದಾರೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಉತ್ಪಾದಕರಿಂದ ಲಸಿಕೆಯನ್ನು ಖರೀದಿಸಿ ಪ್ರತಿ ಡೋಸ್‌ಗೆ 400 ರೂಪಾಯಿಗಳಂತೆ ರಾಜ್ಯ ಸರ್ಕಾರಗಳಿಗೆ ನೀಡುತ್ತದೆ. ಆದರೆ ಇದನ್ನು ಪಂಜಾಬ್ ಸರ್ಕಾರ 1060 ರೂಪಾಯಿಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುತ್ತದೆ. ಖಾಸಗಿ ಆಸ್ಪತ್ರೆಗಳು ಇವುಗಳನ್ನು ಪ್ರತಿ ಡೋಸ್‌ಗೆ 1560 ರೂಪಾಯಿಗಳನ್ನು ಪಡೆದುಕೊಂಡು ಜನರಿಗೆ ಲಸಿಕೆ ನೀಡುತ್ತದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

ಕೊರೊನಾವೈರಸ್ ಸ್ಥಿರ: ಭಾರತದಲ್ಲಿ ಒಂದೇ ದಿನ 1,34,154 ಮಂದಿಗೆ ಸೋಂಕು ಕೊರೊನಾವೈರಸ್ ಸ್ಥಿರ: ಭಾರತದಲ್ಲಿ ಒಂದೇ ದಿನ 1,34,154 ಮಂದಿಗೆ ಸೋಂಕು

ಉಚಿತವಾಗಿ ನೀಡಬೇಕಾದ ಲಸಿಕೆಗಳನ್ನು ಕಾಂಗ್ರೆಸ್ ಸರ್ಕಾರ 3120 ರೂಪಾಯಿಗಳಿಗೆ ನೀಡುತ್ತಿದೆ. ಇದುವೆ ಕಾಂಗ್ರೆಸ್ ಪಕ್ಷದ ನೆಚ್ಚಿನ "ಎರಡಕ್ಕೆ ನಾಲ್ಕು ಪಾಲಿಸಿ" ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ವ್ಯಂಗ್ಯವಾಗಿ ಟ್ವಿಟ್ ಮಾಡಿ ಆರೋಪಿಸಿದ್ದಾರೆ.

Anurag thakur serious allegations against congress on vaccine black marketing

ಇನ್ನು ರಾಜಸ್ಥಾನ್ ಸರ್ಕಾರ ಪಂಜಾಬ್‌ಗಿಂತ ಎರಡು ಹೆಜ್ಜೆ ಮುಂದೆ ಇಟ್ಟಿದೆ ಎಂದಿದ್ದಾರೆ. ರಾಜಸ್ಥಾನ್ ಸರ್ಕಾರ 11.50 ಲಕ್ಷ ಡೋಸ್ ಲಸಿಕೆಯನ್ನು ವ್ಯರ್ಥ ಮಾಡಿದೆ. ಈಗ ಸಾವಿರಾರು ಲಸಿಕೆಗಳು ಕಸದ ರಾಶಿಯಲ್ಲಿ ದೊರೆತಿದೆ. ಇದು ರಾಜಸ್ಥಾನ ಸರ್ಕಾರ ಜನರ ನಂಬಿಕೆಯನ್ನು ಕಸದ ಬುಟ್ಟಿಗೆ ಹಾಕಿದಂತೆ" ಎಂದು ಅನುರಾಗ್ ಠಾಕೂರ್ ಟೀಕಿಸಿದ್ದಾರೆ.

ಕಳೆದ ಜನವರಿಯಲ್ಲಿ ಲಸಿಕೆ ಕಾರ್ಯಕ್ರಮ ಆರಂಭವಾದ ನಂತರ ಲಸಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ವಿರೋಧ ಪಕ್ಷಗಳು ಆಡಳಿತವಿರುವ ರಾಜ್ಯಗಳ ತಿಕ್ಕಾಟಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯಗಳು ಲಸಿಕೆ ಅಸಮರ್ಪಕವಾಗಿ ಪೂರೈಕೆ ಮಾಡಲಾಗುತ್ತಿದೆ ಎಂದು ದೂರನ್ನು ನೀಡಿತ್ತು. ಮತ್ತೊಂದೆಡೆ ಜಾರ್ಖಂಡ್ ಮತ್ತು ಛತ್ತೀಸ್‌ಗಢ ರಾಜ್ಯಗಳು ಗರಿಷ್ಟ ಪ್ರಮಾಣದಲ್ಲಿ ಲಸಿಕೆಯನ್ನು ವ್ಯರ್ಥ ಮಾಡಿದೆ ಎಂಬ ಅಂಶವನ್ನು ಹೇಳಿತ್ತು. ಆದರೆ ಇದಕ್ಕೆ ಜಾರ್ಖಂಡ್ ಮತ್ತು ಛತ್ತೀಸ್‌ಗಢ ರಾಜ್ಯಗಳು ಪ್ರತಿಕ್ರಿಯಿಸಿ ಈ ಅಂಕಿಅಂಶಗಳು ಸತ್ಯಕ್ಕೆ ದೂರವಾಗಿದೆ ಎಂದು ರಾಜ್ಯಗಳ ಅಂಕಿಅಂಶಗಳನ್ನು ಹಂಚಿಕೊಂಡಿತ್ತು.

English summary
Finance minister of state Anurag Thakur serious allegations against congress on vaccine black marketing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X