ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭಿನ್ನಾಭಿಪ್ರಾಯ ಹತ್ತಿಕ್ಕಲು ಭಯೋತ್ಪಾದನಾ ವಿರೋಧಿ ಕಾನೂನು ದುರುಪಯೋಗ ಪಡಿಸಿಕೊಳ್ಳಬಾರದು'

|
Google Oneindia Kannada News

ನವದೆಹಲಿ, ಜು.13: ಭಯೋತ್ಪಾದನಾ ವಿರೋಧಿ ಕಾನೂನನ್ನು "ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ದುರುಪಯೋಗಪಡಿಸಿಕೊಳ್ಳಬಾರದು" ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಡಾ.ಧನಂಜಯ ಯಶ್ವಂತ್‌ ಚಂದ್ರಚೂಡ್ ಸೋಮವಾರ ಹೇಳಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಿನ ಕಾನೂನು ಸಂಬಂಧಗಳ ಕುರಿತು ಜಂಟಿ ಸಮ್ಮೇಳನದಲ್ಲಿ ಮಾತನಾಡಿದ ಸಂದರ್ಭ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಡಾ.ಧನಂಜಯ ಈ ಮೇಲಿನ ಹೇಳಿಕೆ ನೀಡಿದ್ದಾರೆ. "ಭಯೋತ್ಪಾದನಾ-ವಿರೋಧಿ ಶಾಸನ ಸೇರಿದಂತೆ ಕ್ರಿಮಿನಲ್ ಕಾನೂನನ್ನು ಭಿನ್ನಾಭಿಪ್ರಾಯ ಹತ್ತಿಕ್ಕಲು ಅಥವಾ ನಾಗರಿಕರಿಗೆ ಕಿರುಕುಳವನ್ನು ನೀಡಲು ದುರುಪಯೋಗಪಡಿಸಿಕೊಳ್ಳಬಾರದು," ಎಂದಿದ್ದಾರೆ.

'ಆಘಾತಕಾರಿ': ರದ್ದು ಮಾಡಿದ ಕಾನೂನಿನಡಿ ಪ್ರಕರಣಗಳ ಬಗ್ಗೆ ಕೇಂದ್ರಕ್ಕೆ ಸುಪ್ರೀಂ ನೋಟಿಸ್'ಆಘಾತಕಾರಿ': ರದ್ದು ಮಾಡಿದ ಕಾನೂನಿನಡಿ ಪ್ರಕರಣಗಳ ಬಗ್ಗೆ ಕೇಂದ್ರಕ್ಕೆ ಸುಪ್ರೀಂ ನೋಟಿಸ್

"ಅರ್ನಾಬ್ ಗೋಸ್ವಾಮಿ ಹಾಗೂ ರಾಜ್ಯದ ನನ್ನ ತೀರ್ಪಿನಲ್ಲಿ ನಾನು ಗಮನಿಸಿದಂತೆ, ನಮ್ಮ ನ್ಯಾಯಾಲಯಗಳು ನಾಗರಿಕರ ಸ್ವಾತಂತ್ರ್ಯದ ಕೊರತೆ ವಿರುದ್ಧ ರಕ್ಷಣೆಯಾಗಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ," ಎಂದು ಅಭಿಪ್ರಾಯಿಸಿದ್ದಾರೆ. "ಒಂದು ದಿನದ ಸ್ವಾತಂತ್ರ್ಯ ಕೊರತೆಯೂ ತುಂಬಾ ಹೆಚ್ಚು. ನಮ್ಮ ನಿರ್ಧಾರಗಳ ಆಳವಾದ ವ್ಯವಸ್ಥಿತ ಸಮಸ್ಯೆಗಳ ಬಗ್ಗೆ ನಾವು ಯಾವಾಗಲೂ ಜಾಗರೂಕರಾಗಿರಬೇಕು," ಎಂದರು.

 ಸ್ಟಾನ್‌ ಸಾವಿನ ಬೆನ್ನಲ್ಲೇ ಸುಪ್ರೀಂ ನ್ಯಾಯಾಧೀಶರ ಹೇಳಿಕೆ

ಸ್ಟಾನ್‌ ಸಾವಿನ ಬೆನ್ನಲ್ಲೇ ಸುಪ್ರೀಂ ನ್ಯಾಯಾಧೀಶರ ಹೇಳಿಕೆ

ಇನ್ನು ಕಳೆದ ವರ್ಷ ಎಲ್ಗಾರ್‌ ಪರಿಷತ್ ಪ್ರಕರಣದಲ್ಲಿ ಭಯೋತ್ಪಾದನಾ-ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ ಅಥವಾ ಯುಎಪಿಎ ಅಡಿಯಲ್ಲಿ ಬಂಧಿಸಲ್ಪಟ್ಟ 84 ವರ್ಷದ ಕಾರ್ಯಕರ್ತ ಸ್ಟಾನ್ ಸ್ವಾಮಿ ಸಾವಿನ ಬಗ್ಗೆ ಆಕ್ರೋಶದ ಮಧ್ಯೆ ಈ ಹೇಳಿಕೆ ಬಂದಿದೆ. ಆರೋಗ್ಯದ ಕಾರಣಕ್ಕಾಗಿ ಜಾಮೀನು ಪಡೆಯಲು ಹಲವಾರು ಬಾರಿ ಪ್ರಯತ್ನ ಮಾಡಿದ ಸ್ಟಾನ್‌ ಕೊನೆಗೂ ಮುಂಬೈನಲ್ಲಿ ನಿಧನರಾದರು.

 ಯುಎಪಿಎಯಡಿ ದಾಖಲಾದ ಪ್ರಕರಣಗಳು ಮುನ್ನಲೆಗೆ

ಯುಎಪಿಎಯಡಿ ದಾಖಲಾದ ಪ್ರಕರಣಗಳು ಮುನ್ನಲೆಗೆ

ಯುಎಪಿಎ ಪ್ರಕರಣದಡಿ ದಾಖಲಾದ ಹಲವಾರು ಇತರ ಪ್ರಕರಣಗಳು ಇತ್ತೀಚೆಗೆ ಮುನ್ನಲೆಗೆ ಬಂದಿದೆ. ಈ ತಿಂಗಳ ಆರಂಭದಲ್ಲಿ, ಅಸ್ಸಾಂ ನಾಯಕ ಅಖಿಲ್ ಗೊಗೊಯ್ 1.5 ವರ್ಷಗಳ ನಂತರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ವಿವಾದಾತ್ಮಕ ಪೌರತ್ವ ಕಾನೂನಿನ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಅಖಿಲ್ ಗೊಗೊಯ್ ಬಂಧನಕ್ಕೆ ಒಳಗಾಗಿದ್ದರು. ಬಿಡುಗಡೆಯಾದ ಕೂಡಲೇ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ದುರುಪಯೋಗದ ವಿರುದ್ಧ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದರು. ಮತ್ತೊಂದು ಪ್ರಕರಣದಲ್ಲಿ, ಭಯೋತ್ಪಾದನೆ ಆರೋಪದ ಮೇಲೆ ಬಂಧಿಸಲ್ಪಟ್ಟ ಕಾಶ್ಮೀರಿ ವ್ಯಕ್ತಿಯೊಬ್ಬನನ್ನು ಕೆಲವು ವಾರಗಳ ಹಿಂದೆ ಬಿಡುಗಡೆ ಮಾಡಲಾಯಿತು. 11 ವರ್ಷಗಳ ಕಾನೂನು ಹೋರಾಟದ ನಂತರ ನಿರಪರಾಧಿ ಎಂದು ಸಾಬೀತಾಗಿತ್ತು.

ಗೌರಿ ಹತ್ಯೆ ಪ್ರಕರಣ: ಕವಿತಾ ಲಂಕೇಶ್‌ ಅರ್ಜಿ ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಿದ ಸುಪ್ರಿಂಗೌರಿ ಹತ್ಯೆ ಪ್ರಕರಣ: ಕವಿತಾ ಲಂಕೇಶ್‌ ಅರ್ಜಿ ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಿದ ಸುಪ್ರಿಂ

 ''ಭಾರತ ಮಾನವ ಹಕ್ಕುಗಳ ಗೌರವ ಕೇಂದ್ರಿಕೃತ''

''ಭಾರತ ಮಾನವ ಹಕ್ಕುಗಳ ಗೌರವ ಕೇಂದ್ರಿಕೃತ''

ನ್ಯಾಯಮೂರ್ತಿ ಚಂದ್ರಚೂಡ್ ಇಂಡೋ-ಯುಎಸ್ ಸಂಬಂಧಗಳ ಬಗ್ಗೆ ಹಲವಾರು ಹೇಳಿಕೆಗಳನ್ನು ನೀಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ "ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಮತ್ತು ಧಾರ್ಮಿಕ ಶಾಂತಿಯನ್ನು ಉತ್ತೇಜಿಸುವಲ್ಲಿ ಸಫಲವಾಗಿದೆ," ಎಂದು ಹೇಳಿದರು. "ಭಾರತವು ಅತ್ಯಂತ ಹಳೆಯ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ. ಬಹುಸಾಂಸ್ಕೃತಿಕ, ಬಹುತ್ವವಾದಿ ಸಮಾಜದ ಆದರ್ಶಗಳನ್ನು ಪ್ರತಿನಿಧಿಸುತ್ತದೆ. ಅಲ್ಲಿ ಸಂವಿಧಾನಗಳು ಆಳವಾದ ಬದ್ಧತೆ ಮತ್ತು ಮಾನವ ಹಕ್ಕುಗಳ ಗೌರವವನ್ನು ಕೇಂದ್ರೀಕರಿಸಿದೆ," ಎಂದು ಒತ್ತಿಹೇಳಿದ್ದಾರೆ.

ಸೆಂಟ್ರಲ್ ವಿಸ್ಟಾ: ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿ ಸುಪ್ರೀಂನಿಂದ ವಜಾಸೆಂಟ್ರಲ್ ವಿಸ್ಟಾ: ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿ ಸುಪ್ರೀಂನಿಂದ ವಜಾ

 ''ಭಾರತ, ಯುಎಸ್‌ ಅತ್ಯಂತ ಶಕ್ತಿಶಾಲಿ ನ್ಯಾಯಾಲಯಗಳನ್ನು ಹೊಂದಿದೆ''

''ಭಾರತ, ಯುಎಸ್‌ ಅತ್ಯಂತ ಶಕ್ತಿಶಾಲಿ ನ್ಯಾಯಾಲಯಗಳನ್ನು ಹೊಂದಿದೆ''

ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಉನ್ನತ ನ್ಯಾಯಾಲಯಗಳ ಬಗ್ಗೆ ಮಾತನಾಡಿದ ಚಂದ್ರಚೂಡ್, "ಎರಡೂ ತಮ್ಮ ಸ್ವಂತ ಶಕ್ತಿಯ ದೃಷ್ಟಿಯಿಂದ ಅತ್ಯಂತ ಶಕ್ತಿಶಾಲಿ ನ್ಯಾಯಾಲಯಗಳು ಎಂದು ಕರೆಯಲಾಗುತ್ತದೆ. ಯುಎಸ್ಎ ಭಾರತೀಯ ನ್ಯಾಯಶಾಸ್ತ್ರದ ಮೇಲೆ ಪ್ರಭಾವ ಬೀರುತ್ತದೆ. ಇದು ಭಾರತೀಯ ಸಂವಿಧಾನದ ಹೃದಯ ಮತ್ತು ಆತ್ಮಕ್ಕೆ ಕೊಡುಗೆ ನೀಡಿದೆ," ಎಂದು ನುಡಿದಿದ್ದಾರೆ. "ವಯಸ್ಕರ ನಡುವಿನ ಸಲಿಂಗ ಸಂಬಂಧದ ಬಗ್ಗೆ ನನ್ನ ತೀರ್ಪು ಲಾರೆನ್ಸ್ Vs ಟೆಕ್ಸಾಸ್‌ನ ಯುಎಸ್ ಸುಪ್ರೀಂ ಕೋರ್ಟ್ ತೀರ್ಪನ್ನು ಅವಲಂಬಿಸಿದೆ," ಎಂದು ತಿಳಿಸಿದರು.

(ಒನ್‌ಇಂಡಿಯಾ ಸುದ್ದಿ)

English summary
Anti-terror law should not be "misused for quelling dissent" Supreme Court Judge Dr Dhananjaya Yeshwant Chandrachud said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X