ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷ ವಿರೋಧಿ ಚಟುವಟಿಕೆ: 38 ಸದಸ್ಯರನ್ನು ಅಮಾನತುಗೊಳಿಸಿದ ಗುಜರಾತ್ ಕಾಂಗ್ರೆಸ್

|
Google Oneindia Kannada News

ಅಹಮದಾಬಾದ್ , ಜನವರಿ 20 : ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಗುಜರಾತ್ ಕಾಂಗ್ರೆಸ್ ಶುಕ್ರವಾರ 38 ಸದಸ್ಯರನ್ನು ಅಮಾನತು ಮಾಡಿದೆ.

ಡಿಸೆಂಬರ್‌ನಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದ ಆರೋಪದಲ್ಲಿ 38 ಪದಾಧಿಕಾರಿಗಳನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಿರುವುದಾಗಿ ಗುಜರಾತ್ ಕಾಂಗ್ರೆಸ್ ಶುಕ್ರವಾರ ತಿಳಿಸಿದೆ. ಗುಜರಾತ್ ಕಾಂಗ್ರೆಸ್‌ನ ಶಿಸ್ತು ಸಮಿತಿಯು ಪಕ್ಷ ವಿರೋಧಿ ಚಟುವಟಿಕೆ ಕುರಿತು ಈ ತಿಂಗಳು ಎರಡು ಬಾರಿ ಸಭೆ ನಡೆಸಿದೆ. ಇದುವರೆಗೆ 95 ಜನರ ವಿರುದ್ಧ 71 ದೂರುಗಳು ಬಂದಿವೆ ಎಂದು ಸಮಿತಿಯ ಸಂಚಾಲಕ ಬಾಲುಭಾಯ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Wrestlers Protest: ಮತ್ತೊಮ್ಮೆ ಕ್ರೀಡಾ ಸಚಿವರನ್ನು ಭೇಟಿಯಾಗಲಿರುವ ಕುಸ್ತಿಪಟುಗಳು, ತನಿಖೆ ಆರಂಭವಾಗುವ ಸೂಚನೆ

"ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ನಾವು 38 ಪಕ್ಷದ ಕಾರ್ಯಕರ್ತರನ್ನು ಅಮಾನತುಗೊಳಿಸಿದ್ದೇವೆ. ಇತರರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ಎಂಟು ಕಾರ್ಯಕರ್ತರಿಗೆ ಎಚ್ಚರಿಕೆ ನೀಡಲಾಗಿದೆ" ಎಂದು ಬಾಲುಭಾಯ್ ಪಟೇಲ್ ಹೇಳಿದ್ದಾರೆ. ಸುರೇಂದ್ರನಗರ ಜಿಲ್ಲಾಧ್ಯಕ್ಷ ರಾಯಭಾಯ್ ರಾಥೋಡ್, ನರ್ಮದಾ ಜಿಲ್ಲಾಧ್ಯಕ್ಷ ಹರೇಂದ್ರ ವಲಂದ್ ಮತ್ತು ನಂದೋದ್ ಮಾಜಿ ಶಾಸಕ ಪಿ.ಡಿ. ವಾಸವ ಸೇರಿದಂತೆ 38 ಮಂದಿಯನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

 Anti-party activities: Gujarat Congress suspends 38 members

ಡಿಸೆಂಬರ್‌ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 17 ಸ್ಥಾನಗಳನ್ನು ಗಳಿಸಿತ್ತು. 182 ಸದಸ್ಯ ಬಲದ ಸದನದಲ್ಲಿ ಭಾರತೀಯ ಜನತಾ ಪಕ್ಷ ದಾಖಲೆಯ 156 ಸ್ಥಾನಗಳನ್ನು ಗೆದ್ದು ಅಧಿಕಾರವನ್ನು ಉಳಿಸಿಕೊಂಡಿದೆ.
English summary
Anti-party activities: Gujarat Congress Friday suspends 38 members for six years for anti-party activities in the Assembly polls held in December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X