ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪಾಂಚಜನ್ಯ ಆರ್‌ಎಸ್‌ಎಸ್‌ ಮುಖವಾಣಿಯಲ್ಲ, ನಮಗೂ ಅದಕ್ಕೂ ಸಂಬಂಧವಿಲ್ಲ' ಎಂದ ಸಂಘ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 05: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖವಾಣಿ ಪಾಂಚಜನ್ಯ ಇನ್ಫೋಸಿಸ್‌ ವಿರುದ್ದ ಆರೋಪವನ್ನು ಮಾಡಿದೆ. ಇನ್ಫೋಸಿಸ್‌ ದೇಶದ್ರೋಹಿಗಳೊಂದಿಗೆ ಸೇರಿಕೊಂಡಿದೆ. ತುಕ್ಡೆ ತುಕ್ಡೆ ಗ್ಯಾಂಗ್‌ ಜೊತೆ ಸೇರಿದೆ ಎಂದು ಆರ್‌ಎಸ್‌ಎಸ್‌ ಮುಖವಾಣಿ ಪಾಂಚಜನ್ಯ ಹೇಳಿದೆ.

ಆರ್‌ಎಸ್‌ಎಸ್‌ ಮುಖವಾಣಿಯಲ್ಲಿ ಪ್ರಕಟವಾದ ಈ ವರದಿಯನ್ನು ಹಲವಾರು ಮಂದಿ ಟೀಕೆ ಮಾಡಿದ್ದಾರೆ. ಐಟಿ ದಿಗ್ಗಜ ಇನ್ಫೋಸಿಸ್‌ ವಿರುದ್ದ ಈ ರೀತಿಯ ಆಧಾರ ರಹಿತವಾದ ಆರೋಪವನ್ನು ಮಾಡುವುದು ಸರಿಯಲ್ಲ ಎಂದು ಹಲವಾರು ಮಂದಿ ಹೇಳಿದ್ದಾರೆ. ಪಾಂಚಜನ್ಯದಲ್ಲಿ ಪ್ರಕಟವಾಗಿರುವ ವರದಿಗೆ ಸಾಕಷ್ಟು ಮಂದಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ವೀರ್‌ ಸಾವರ್ಕರ್ ರಥಯಾತ್ರೆಯನ್ನು ರಾಜಕೀಯ ದೊಂಬರಾಟ ಎಂದ ಹಿಂದೂ ಮಹಾಸಭಾವೀರ್‌ ಸಾವರ್ಕರ್ ರಥಯಾತ್ರೆಯನ್ನು ರಾಜಕೀಯ ದೊಂಬರಾಟ ಎಂದ ಹಿಂದೂ ಮಹಾಸಭಾ

ಆದರೆ ಈ ಎಲ್ಲಾ ವಿವಾದಗಳ ಬೆನ್ನಲ್ಲೇ ಈ ಬಗ್ಗೆ ಹೇಳಿಕೆ ನೀಡಿರುವ ಆರ್‌ಎಸ್‌ಎಸ್‌ನ ಅಖಿಲ ಭಾರತ ಪ್ರಚಾರ ಉಸ್ತುವಾರಿ ಸುನೀಲ್​ ಅಂಬೇಕರ್​, ''ಪಾಂಚಜನ್ಯ ಆರ್‌ಎಸ್‌ಎಸ್‌ನ ಮುಖವಾಣಿ ಅಲ್ಲ,'' ಎಂದು ಹೇಳಿದ್ದಾರೆ.

 Anti-National Infosys Article In Journal, Not our view says RSS

ಇದೇ ಸಂದರ್ಭದಲ್ಲಿ ಪಾಂಚಜನ್ಯ ಇನ್ಫೋಸಿಸ್‌ ವಿರುದ್ದ ಮಾಡಿದ ಆರೋಪವನ್ನು ಅಲ್ಲಗಳೆದಿರುವ ಆರ್‌ಎಸ್‌ಎಸ್‌ನ ಅಖಿಲ ಭಾರತ ಪ್ರಚಾರ ಉಸ್ತುವಾರಿ ಸುನೀಲ್​ ಅಂಬೇಕರ್ ಟ್ವೀಟ್‌ ಮಾಡಿದ್ದು, "ಭಾರತೀಯ ಕಂಪನಿಯಾದ ಇನ್ಪೋಸಿಸ್‌, ಭಾರತದ ಪ್ರಗತಿಗೆ ತನ್ನದೇ ಆತ ಕೊಡುಗೆಯನ್ನು ನೀಡಿದೆ. ಇನ್ಪೋಸಿಸ್‌ ನಿರ್ವಹಣೆ ಮಾಡುವ ಪೋರ್ಟಲ್‌ಗೆ ಸಂಬಂಧಿಸಿದಂತೆ ಕೆಲವೊಂದು ಸಮಸ್ಯೆಗಳು ಇರಬಹುದು. ಆದರೆ ಪಾಂಚಜನ್ಯದಲ್ಲಿ ಈ ಬಗ್ಗೆ ಪ್ರಕಟವಾದ ಲೇಖನಗಳು ಲೇಖಕರ ವೈಯಕ್ತಿಕ ದೃಷ್ಟಿಕೋನಗಳಾಗಿವೆ," ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್, ವಿಎಚ್‌ಪಿ ವಿರೋಧ: ಜನಸಂಖ್ಯೆ ಮಸೂದೆ ಮರುಪರಿಶೀಲನೆಗೆ ಮುಂದಾದ ಯುಪಿ ಸರ್ಕಾರಆರ್‌ಎಸ್‌ಎಸ್, ವಿಎಚ್‌ಪಿ ವಿರೋಧ: ಜನಸಂಖ್ಯೆ ಮಸೂದೆ ಮರುಪರಿಶೀಲನೆಗೆ ಮುಂದಾದ ಯುಪಿ ಸರ್ಕಾರ

ಇದೇ ಸಂದರ್ಭದಲ್ಲಿ "ಪಾಂಚಜನ್ಯ ಆರ್‌ಎಸ್‌ಎಸ್‌ನ ಮುಖವಾಣಿಯಲ್ಲ. ಹಾಗಾಗಿ ಈ ವರದಿಯನ್ನು ಅಥವಾ ಅಭಿಪ್ರಾಯವನ್ನು ಆರ್‌ಎಸ್‌ಎಸ್‌ ಜೊತೆಗೆ ಸಂಬಂಧ ಕಲ್ಪಿಸಿಕೊಳ್ಳಬಾರದು," ಎಂದು ಸ್ಪಷ್ಟಪಡಿಸಿದ್ದಾರೆ.

ಪಾಂಚಜನ್ಯದಲ್ಲಿ ಪ್ರಕಟವಾದ ಲೇಖನದಲ್ಲೇನಿದೆ?

ಆರ್‌ಎಸ್‌ಎಸ್‌ನ ಸಾಪ್ತಾಹಿಕ ಪತ್ರಿಕೆಯಾದ ಪಾಂಚಜನ್ಯದಲ್ಲಿ 'ಸಾಖ್‌ ಔರ್‌ ಆಘಾತ್' ಎಂಬ ಶೀರ್ಷಿಕೆಯಡಿ ಕವರ್ ಸ್ಟೋರಿಯೊಂದು ಪ್ರಕಟ ಮಾಡಲಾಗಿದೆ. ಈ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಇನ್ಫೋಸಿಸ್ ಕಂಪನಿ ಭಾರತೀಯ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಉದ್ದೇಶ ಪೂರ್ವಕ ಯತ್ನವನ್ನು ಮಾಡುತ್ತಿದೆ. ಅಲ್ಲದೇ ಈ ಕಂಪನಿಯು ನಕ್ಸಲರು, ಎಡಪಂಥೀಯರು ಮತ್ತು ತುಕ್ಡೆ ತುಕ್ಡೆ ಗ್ಯಾಂಗ್‌ಗೆ ಸಹಾಯ ಮಾಡಿದೆ ಎಂದು ಆರೋಪ ಮಾಡಲಾಗಿದೆ.

ಐಟಿ ರಿಟರ್ನ್ಸ್ ವೆಬ್‌ತಾಣ ಕಿರಿಕಿರಿ, ಇನ್ಫೋಸಿಸ್ ಸಿಇಒಗೆ ಸಮನ್ಸ್ಐಟಿ ರಿಟರ್ನ್ಸ್ ವೆಬ್‌ತಾಣ ಕಿರಿಕಿರಿ, ಇನ್ಫೋಸಿಸ್ ಸಿಇಒಗೆ ಸಮನ್ಸ್

''ಆದಾಯ ತೆರಿಗೆ ಇಲಾಖೆಯು ರಿಟರ್ನ್ಸ್ ಸಲ್ಲಿಸಲು ರಚಿಸಿದ ಹೊಸ ವೆಬ್‌ಸೈಟ್‌ನ ನಿರ್ವಹಣೆಯ ಗುತ್ತಿಗೆಯನ್ನು ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್‌ಗೆ ನೀಡಲಾಗಿದೆ. ಆದರೆ ಈ ವೆಬ್‌ಸೈಟ್‌ ಕೆಲಸ ಮಾಡುತ್ತಿಲ್ಲ. ಇನ್ಪೋಸಿಸ್‌ 'ದೊಡ್ಡ ಅಂಗಡಿ, ಕೆಟ್ಟ ತಿಂಡಿ' ಮತ್ತು 'ಹೆಸರು ದೊಡ್ಡದಾಗಿದ್ದರೂ, ಕೆಲಸ ಚಿಕ್ಕದು' ಎಂಬಂತೆ ವರ್ತನೆ ಮಾಡುತ್ತಿದೆ. ಇನ್ಪೋಸಿಸ್‌ನಂತಹ ಈ ದೊಡ್ಡ ಕಂಪನಿಗಳು ಸಾಮಾನ್ಯ ಕೆಲಸವನ್ನು ಮಾಡಲು ಕೂಡಾ ಯಾಕಿಷ್ಟು ಅಜಾಗರೂಕತೆಯನ್ನು ಪ್ರದರ್ಶಿಸುತ್ತಿದೆ ಎಂಬ ಪ್ರಶ್ನೆಯು ಹುಟ್ಟಿ ಕೊಳ್ಳುವುದಿಲ್ಲ," ಎಂದು ಪ್ರಶ್ನಿಸಲಾಗಿದೆ.

ಹಾಗೆಯೇ "ಗ್ರಾಹಕರಿಗೆ ತೃಪ್ತಿದಾಯಕ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಸಾಮಾನ್ಯವೇ ಅಥವಾ ಇದರ ಹಿಂದೆ ಉದ್ದೇಶಪೂರ್ವಕ ಪಿತೂರಿ ಇದೆಯೇ?," ಎಂದು ಕೂಡಾ ಪ್ರಶ್ನೆ ಮಾಡಲಾಗಿದೆ.

(ಒನ್ ಇಂಡಿಯಾ ಸುದ್ದಿ)

English summary
Panchjanya is not mouthpiece of the RSS said RSS on 'Anti-National Infosys' Article In Journal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X