ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಘಾಲಯದಲ್ಲಿ ಸಿಎಎ ವಿರುದ್ಧ ಪ್ರತಿಭಟನೆ: ಓರ್ವ ಸಾವು, ಇಂಟರ್‌ನೆಟ್ ಸ್ಥಗಿತ

|
Google Oneindia Kannada News

ಶಿಲ್ಲಾಂಗ್, ಫೆಬ್ರವರಿ 29: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಕಿಚ್ಚು ಇದೀಗ ಮೇಘಾಲಯವನ್ನು ತಲುಪಿದೆ.

ಮೇಘಾಲಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಓರ್ವ ಮೃತಪಟ್ಟಿದ್ದಾನೆ.ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ 40ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.

ಈಶಾನ್ಯ ದೆಹಲಿ ಗಲಭೆ: ಶಿವ ದೇಗುಲ ರಕ್ಷಿಸಿದ ಮುಸ್ಲಿಮರು ಈಶಾನ್ಯ ದೆಹಲಿ ಗಲಭೆ: ಶಿವ ದೇಗುಲ ರಕ್ಷಿಸಿದ ಮುಸ್ಲಿಮರು

ಪರಿಸ್ಥಿತಿ ಕೈಮೀರದಂತೆ ನೋಡಿಕೊಳ್ಳಲು ಮೇಘಾಲಯದ 6 ಜಿಲ್ಲೆಗಳಲ್ಲಿ ಮೊಬೈಲ್​ ಇಂಟರ್​ನೆಟ್​ ಸೇವೆಯನ್ನು ರದ್ದು ಮಾಡಲಾಗಿದೆ. ಮುಂದಿನ 48 ಗಂಟೆಗಳ ಕಾಲ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಲ್ಲಾಂಗ್​ ಹಾಗೂ ಸುತ್ತಮುತ್ತ ಭಾಗದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.

Anti Caa Protest In Meghalaya One Killed Internet Suspended

ಶಿಲ್ಲಾಂಗ್​ ಜಿಲ್ಲೆಯ ಇಚಮತಿ ಭಾಗದಲ್ಲಿ ಆ್ಯಂಟಿ ಸಿಎಎ ಹಾಗೂ ಆಂತರಿಕ ರೇಖೆಯ ಪರವಾನಗಿ (ಐಎಲ್​ಪಿ) ಪರವಾಗಿ ಸಭೆ ನಡೆದಿತ್ತು. ಈ ವೇಳೆ ಖಾಸಿ ವಿದ್ಯಾರ್ಥಿ ಸಂಘಟನೆ ಮತ್ತು ನಾನ್​ ಟ್ರೈಬಲ್ಸ್​ ನಡುವೆ ವಾಗ್ವಾದ ಏರ್ಪಟ್ಟಿದೆ. ಇದು ಹಿಂಸಾಚಾರಕ್ಕೆ ತಿರುಗಿದ್ದು, ಓರ್ವ ಮೃತಪಟ್ಟಿದ್ದಾನೆ.

ನವದೆಹಲಿಯಲ್ಲಿ ನಡೆಯುತ್ತಿರುವ ಸಿಎಎ ಮತ್ತು ಎನ್​​ಆರ್​​ಸಿ ವಿರೋಧಿ ಪ್ರತಿಭಟನೆಯಲ್ಲಿ ಸಾವಿನ ಸಂಖ್ಯೆ ದಿನದಿಂದ ದಿನಕ್ಕೇರುತ್ತಲೇ ಇದೆ. ಇಲ್ಲಿಯವರೆಗೂ ಈ ಗಲಭೆಯಲ್ಲಿ 42 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ 123 ಮಂದಿ ವಿರುದ್ಧ ಎಫ್​​ಐಆರ್​​ ದಾಖಲಾಗಿದೆ.

English summary
One person has been killed in clashes between Khasi Students Union members and non-tribals during a meeting on CAA and inner line permit in Meghalaya's East Khasi Hills.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X