ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೋರ್ವ ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ನಾಪತ್ತೆ

By Sachhidananda Acharya
|
Google Oneindia Kannada News

ನವದೆಹಲಿ, ಜನವರಿ 10: ಜೆಎನ್‌ಯು ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆಯಾಗಿ ಒಂದು ವರ್ಷ ಕಳೆದಿದೆ. ದೇಶದ ಪ್ರಖ್ಯಾತ ಯಾವ ತನಿಖಾ ಸಂಸ್ಥೆಗಳಿಗೂ ನಜೀಬ್ ಸುಳಿವು ಸಿಕ್ಕಿಲ್ಲ. ಇದೀಗ ಮತ್ತೋರ್ವ ಜೆಎನ್‌ಯು ವಿದ್ಯಾರ್ಥಿ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದಾನೆ. ಹೀಗೆ ಜೆಎನ್‌ಯುನಲ್ಲಿ ನಾಪತ್ತೆಯ ಭೂತ ಮತ್ತೆ ಸದ್ದು ಮಾಡಿದೆ.

ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು)ನಲ್ಲಿ ಪಿಎಚ್ಡಿ ವ್ಯಾಸಾಂಗ ಮಾಡುತ್ತಿದ್ದ 26 ವರ್ಷದ ಮುಕುಲ್ ಜೈನ್ ಎಂಬ ವಿದ್ಯಾರ್ಥಿ ಕ್ಯಾಂಪಸ್ ನಿಂದ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೆಎನ್ ಯು ವಿದ್ಯಾರ್ಥಿ ನಾಪತ್ತೆ, ಮಾಹಿತಿ ನೀಡಿದವರಿಗೆ 10 ಲಕ್ಷ ಬಹಮಾನಜೆಎನ್ ಯು ವಿದ್ಯಾರ್ಥಿ ನಾಪತ್ತೆ, ಮಾಹಿತಿ ನೀಡಿದವರಿಗೆ 10 ಲಕ್ಷ ಬಹಮಾನ

ಜನವರಿ 8ರಿಂದ ಮುಕುಲ್ ಜೈನ್ ನಾಪತ್ತೆಯಾಗಿದ್ದು ಇಲ್ಲಿಯವರೆಗೆ ಪತ್ತೆಯಾಗಿಲ್ಲ. ಈ ಸಂಬಂಧ ಜನವರಿ 8ರಂದೇ ನಾಪತ್ತೆ ಪ್ರಕರಣ ದಾಖಲಾಗಿದೆ. ಆತನಿಗೆ ತನ್ನ ಸಂಬಂಧದಲ್ಲಿ ಸ್ವಲ್ಪ ಸಮಸ್ಯೆಗಳಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಲಾಗಿದೆ.

ಸಂಕ್ರಾಂತಿ ವಿಶೇಷ ಪುಟ

Another JNU student 'goes missing'

ಇದೇ ರೀತಿ ಅಕ್ಟೋಬರ್ 15, 2016ರಲ್ಲಿ ನಜೀಬ್ ಅಹ್ಮದ್ ಎಂಬ ವಿದ್ಯಾರ್ಥಿ ನಾಪತ್ತೆಯಾಗಿದ್ದ. ವಿದ್ಯಾರ್ಥಿಗಳ ಜಗಳವಾಡಿ ಇಲ್ಲಿನ ಮಹಿ-ಮಂಡ್ವಿ ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದ ಈತ ಇನ್ನೂ ಪತ್ತೆಯಾಗಿಲ್ಲ.

ತನ್ನ ಮಗನನ್ನು ಪತ್ತೆ ಮಾಡಿಕೊಡುವಂತೆ ನಜೀಬ್ ತಾಯಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಕೊನೆಗೆ ದೆಹಲಿ ಹೈಕೋರ್ಟ್ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿತ್ತು. ಆದರೆ ಬಯೋಟೆಕ್ನಾಲಜಿ ಎಂಎಸ್ಇ ವ್ಯಾಸಾಂಗ ಮಾಡುತ್ತಿದ್ದ ನಜೀಬ್ ಗುರುತು ಮಾತ್ರ ಇನ್ನೂ ಸಿಕ್ಕಿಲ್ಲ.

English summary
A 26-year-old student, pursuing PhD at Jawaharlal Nehru University (JNU) here, has gone missing from the campus, the police said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X