ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳಯಾನದಿಂದ ಮತ್ತೊಂದು ಚಿತ್ರ ಬಂತು

|
Google Oneindia Kannada News

ಬೆಂಗಳೂರು, ಅ. 8: ಮಂಗಳಯಾನ ಕೆಂಪು ಗ್ರಹದ ಮೇಲಿನ ಮತ್ತೊಂದು ಚಿತ್ರವನ್ನು ರವಾನಿಸಿದೆ. 66,543 ಕಿಮೀ ಎತ್ತರದಿಂದ ತೆಗೆದಿರುವ ಮಂಗಳನ ಸಂಪೂರ್ಣ ಚಿತ್ರ ವಿಜ್ಞಾನಿಗಳ ಸಂಶೋಧನೆಗೆ ಸಹಕಾರಿಯಾಗಲಿದೆ.

ಈ ಬಗ್ಗೆ ಇಸ್ರೋ ತನ್ನ ಫೇಸ್‌ ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದು ಮಂಗಳಯಾನ ಅಕ್ಟೋಬರ್‌ 7 ರಂದು ಕಳಿಸಿದ ಚಿತ್ರವನ್ನು ಅಪ್‌ಲೋಡ್‌ ಮಾಡಿದೆ.[ಮಂಗಳನ ಅಂಗಳದ ಮತ್ತಷ್ಟು ಚಿತ್ರಗಳು]

mars

ಮಂಗಳನ ದಕ್ಷಿಣ ಭಾಗದಲ್ಲಿ ಕಂಡುಬರುವ ಜ್ವಾಲಾಮುಖಿಗಳ ಬಗ್ಗೆ ಈ ಚಿತ್ರವೂ ಸಾಕಷ್ಟು ಮಾಹಿತಿ ನೀಡಿದೆ. ಅಲ್ಲಿಯ ವಾತಾವರಣ ಅರಿಯಲು ಇದು ನೆರವಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಭಾರತದ ಬಹುನಿರೀಕ್ಷಿತ ಮಂಗಳಯಾನ ಸೆಪ್ಟಂಬರ್‌ 24 ರಂದು ಮಂಗಳನ ಅಂಗಳ ತಲುಪಿತ್ತು. ಕೆಂಪು ಗ್ರಹ ತಲುಪಿದ ಮರುದಿನ ಮತ್ತು ಸೆ. 30 ರಂದು ಕೆಲ ಫೋಟೊಗಳನ್ನು ಕಳಿಸಿಕೊಟ್ಟಿತ್ತು.

ಸ್ವತಃ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಹಾಜರಿದ್ದು ಉಪಗ್ರಹ ಉಡಾವಣೆ ಕೌಶಲ್ಯ ಅರಿತಿದ್ದರು. ಅತ್ತ ಅಮೆರಿಕ ತನ್ನ ಕ್ಯೂರಿಯಾಸಿಟಿ ಮೂಲಕ ಮಂಗಳನಲ್ಲಿ ಸಂಶೋಧನೆಗೆ ತೊಡಗಿದ್ದರೆ ಇತ್ತ ಭಾರತದ ಮಂಗಳಯಾನ ನಿರಂತರವಾಗಿ ತನ್ನ ಕೆಲಸ ಮಾಡುತ್ತಿದೆ.

ಮತ್ತೊಂದು ಬೆಳವಣಿಗೆಯಲ್ಲಿ ಭಾರತ ಮತ್ತು ಅಮೆರಿಕ ಜಂಟಿಯಾಗಿ ಮಂಗಳನಲ್ಲಿಗೆ ಉಪಗ್ರಹವೊಂದನ್ನು ಕಳಿಸಿಕೊಡುವುದಾಗಿ ಹೇಳಿದ್ದರು. ಈ ಕುರಿತ ಒಪ್ಪಂದಕ್ಕೆ ನಾಸಾ (ಅಮೆರಿಕ)ದ ಅಧ್ಯಕ್ಷ ಮತ್ತು ಆಡಳಿತಾಧಿಕಾರಿ ಚಾಲ್ರ್ಸ್ ಬೋಲ್ಡೆನ್ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಅಧ್ಯಕ್ಷ ಕೆ.ರಾಧಾಕೃಷ್ಣನ್ ಟೊರೆಂಟೋದಲ್ಲಿ ಸಹಿ ಮಾಡಿದ್ದರು.[ಅಮೆರಿಕ-ಭಾರತ ಜಂಟಿ ಮಂಗಳಯಾನ]

ಒಟ್ಟಿನಲ್ಲಿ ಮಂಗಳಯಾನ ಕೆಂಪು ಗ್ರಹದ ವಿವಿಧ ಬಗೆಯ ಫೋಟೊಗಳನ್ನು ಕಳುಹಿಸುತ್ತಿದ್ದು ಭಾರತದ ಬಾಹ್ಯಾಕಾಶ ಸಂಶೋಧನೆಗೆ ಇವು ಮತ್ತಷ್ಟು ನೆರವು ನೀಡುತ್ತಿರುವುದರಲ್ಲಿ ಅನುಮಾನವಿಲ್ಲ.

English summary
Another full disc image of Mars, taken by the Mars Color Camera, from an altitude of 66,543 km. Dark region towards south of the cloud formation is Elysium - the second largest volcanic province on Mars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X