ಜನಲೋಕಪಾಲ್ ಗಾಗಿ ಮತ್ತೆ ಬೀದಿಗಿಳಿಯಲಿದ್ದಾರೆ ಅಣ್ಣಾ

Subscribe to Oneindia Kannada

ಮುಂಬೈ, ನವೆಂಬರ್ 29: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮತ್ತೆ ಬೀದಿಗಿಳಿಯಲಿದ್ದಾರೆ. ಮುಂದಿನ ವರ್ಷದ ಮಾರ್ಚ್ 23ರಿಂದ ಜನಲೋಕಪಾಲ್ ಜಾರಿ ಮತ್ತು ರೈತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಅವರು ನವದೆಹಲಿಯಲ್ಲಿ ಸತ್ಯಾಗ್ರಹ ಆರಂಭಿಸಲಿದ್ದಾರೆ.

ತಮ್ಮ ಸತ್ಯಾಗ್ರಹ ಆರಂಭಿಸಲು ಮಾರ್ಚ್ 23ರ ಹುತಾತ್ಮರ ದಿನವನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.

ಲೋಕ್ ಪಾಲ್ ವಿಳಂಬ, ಹೋರಾಟದ ಎಚ್ಚರಿಕೆ ನೀಡಿದ ಅಣ್ಣ ಹಜಾರೆ

ಅಹಮದ್ ನಗರ ಜಿಲ್ಲೆಯ ತಮ್ಮ ಗ್ರಾಮ ರಳೇಗಣ್ ಸಿದ್ಧಿಯಲ್ಲಿ ಸೋಮವಾರ ಮಾತನಾಡಿರುವ ಅಣ್ಣಾ ಹಜಾರೆ, "ಜನಲೋಕಪಾಲ್, ರೈತರ ಸಮಸ್ಯೆ ಮತ್ತು ಚುನಾವಣಾ ಸುಧಾರಣೆಗಾಗಿ ಸತ್ಯಾಗ್ರಹ ನಡೆಸಲಾಗುವುದು," ಎಂದು ಘೋಷಿಸಿದ್ದಾರೆ.

Anna Hazare to launch Jan Lokpal agitation from March 23, 2018

ತಾನು ಈ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

ಕೇಜ್ರಿ ಭ್ರಷ್ಟಾಚಾರ ಸಾಬೀತಾದರೆ ರಾಜಿನಾಮೆಗೆ ಒತ್ತಾಯಿಸಿ ಧರಣಿ: ಅಣ್ಣಾ

ಕಳೆದ 22 ವರ್ಷಗಳಲ್ಲಿ 12 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಗಳ ಸಂಖ್ಯೆ ನನಗೆ ಬೇಕು ಎಂದು ಅಣ್ಣಾ ಹೇಳಿದ್ದಾರೆ.

ಜನಲೋಕಪಾಲ್ ಕಾಯಿದೆ ಜಾರಿಗೆ ಒತ್ತಾಯಿಸಿ 2011ರಲ್ಲಿ ಅಣ್ಣಾ ಹಜಾರೆ 12 ದಿನಗಳ ಉಪಪಾಸ ಸತ್ಯಾಗ್ರಹ ನಡೆಸಿದ್ದರು. ಆರಂಭದಲ್ಲಿ ಅಂದಿನ ಯುಪಿಎ ಸರಕಾರ ಜನಲೋಕಪಾಲ್ ಜಾರಿಗೆ ಒಪ್ಪಿಕೊಂಡಿತ್ತು. ಆದರೆ ನಂತರ ಜಾರಿಗೆ ಬಂದಿರಲಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Social activist Anna Hazare will launch an agitation over Jan Lokpal, farmers' issues and poll reforms in New Delhi on March 23, 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ