ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿಲ್ ಅಂಬಾನಿ ಕಂಪನಿ ಮರು ಪಾವತಿಸಿತು ಎರಿಕ್ಸನ್ ನ 450 ಕೋಟಿ

|
Google Oneindia Kannada News

ಸ್ವೀಡಿಷ್ ಟೆಲಿಕಾಂ ಉಪಕರಣಗಳ ತಯಾರಿಕಾ ಕಂಪನಿಗೆ ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿಮಿಟೆಡ್ (ಆರ್ ಕಾಮ್)ನಿಂದ $ 67.42 ಮಿಲಿಯನ್ (450 ಕೋಟಿ ರುಪಾಯಿ) ಸಂದಾಯ ಆಗಿದೆ ಎಂದು ಎರಿಕ್ಸನ್ ಕಂಪನಿಯ ವಕ್ತಾರೆ ಸೋಮವಾರ ಮಾಹಿತಿ ನೀಡಿದ್ದಾರೆ. ಕಳೆದ ತಿಂಗಳ ಕೊನೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.

 ಬಿಲಿಯನ್ ಆಸ್ತಿಯಿಂದ ಜೈಲು ಬಾಗಿಲ ತನಕ ಅನಿಲ್ ಅಂಬಾನಿ ಬಿಲಿಯನ್ ಆಸ್ತಿಯಿಂದ ಜೈಲು ಬಾಗಿಲ ತನಕ ಅನಿಲ್ ಅಂಬಾನಿ

ನಾಲ್ಕು ವಾರದೊಳಗೆ ಎರಿಕ್ಸನ್ ಕಂಪನಿಗೆ ನೀಡಬೇಕಾದ 450 ಕೋಟಿ ರುಪಾಯಿಯನ್ನು ಪಾವತಿ ಮಾಡಬೇಕು. ಇಲ್ಲದಿದ್ದಲ್ಲಿ ನ್ಯಾಯಾಂಗ ನಿಂದನೆ ಆರೋಪದಲ್ಲಿ ಮೂರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಅನಿಲ್ ಅಂಬಾನಿಯ ರಿಲಯನ್ಸ್ ಕಮ್ಯೂನಿಕೇಷನ್ಸ್ ಹಾಗೂ ಅದರ ಇಬ್ಬರು ನಿರ್ದೇಶಕರಿಗೆ ಆದೇಶ ಮಾಡಿತ್ತು.

Anil Ambanis RCom pays 462 crore dues before SC deadline ends

ಅಂದ ಹಾಗೆ ರಿಲಯನ್ಸ್ ಕಮ್ಯೂನಿಕೇಷನ್ಸ್ ನಿಂದ ಎರಿಕ್ಸನ್ ಗೆ ಒಟ್ಟು 571 ಕೋಟಿ ರುಪಾಯಿ ಸಾಲ ಬಾಕಿ ಇತ್ತು. ಅದರಲ್ಲಿ ಒನ್ ಟೈಮ್ ಸೆಟ್ಲ್ ಮೆಂಟ್ 550 ಕೋಟಿ ರುಪಾಯಿ ಹಾಗೂ ಬಡ್ಡಿ 21 ಕೋಟಿ ರುಪಾಯಿ ಸೇರಿಕೊಂಡಿತ್ತು. ಅಂತೂ ಸುಪ್ರೀಂ ಕೋರ್ಟ್ ನೀಡಿದ್ದ ಗಡುವಿನ ಒಂದು ದಿನ ಮೊದಲು ಬಾಕಿ ಪಾವತಿ ಮಾಡಲಾಗಿದೆ.

English summary
Swedish telecom equipment maker Ericsson has received Rs. 462 crore ($67.42 million) from telecom firm Reliance Communications Ltd (RCom), a spokeswoman for Ericsson said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X