ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್: ಎರಡು ವಾರ ಮುನ್ನವಷ್ಟೇ ಫ್ರೆಂಚ್ ಅಧಿಕಾರಿಗಳನ್ನು ಭೇಟಿಮಾಡಿದ್ದ ಅಂಬಾನಿ

|
Google Oneindia Kannada News

ನವದೆಹಲಿ, ಫೆಬ್ರವರಿ 12: ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ನಿಂದ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಮಾಡುವುದಾಗಿ ಪ್ರಕಟಿಸಿದ ಎರಡು ವಾರ ಮುಂಚೆಯಷ್ಟೇ ಉದ್ಯಮಿ ಅನಿಲ್ ಅಂಬಾನಿ ಅವರು ಫ್ರಾನ್ಸ್ ರಕ್ಷಣಾ ಅಧಿಕಾರಿಗಳನ್ನು ಭೇಟಿ ಮಾಡಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

2015ರ ಮಾರ್ಚ್‌ ಕೊನೆಯ ವಾರದಲ್ಲಿ ಅನಿಲ್ ಅಂಬಾನಿ, ಆಗಿನ ಫ್ರೆಂಚ್ ರಕ್ಷಣಾ ಸಚಿವ ಜೀನ್ ವೆಸ್ ಲಿ ಡ್ರಿಯಾನ್ ಅವರ ಪ್ಯಾರಿಸ್ ಕಚೇರಿಗೆ ಭೇಟಿ ನೀಡಿ ಅವರ ಉನ್ನತ ಸಲಹೆಗಾರರೊಂದಿಗೆ ಸಭೆ ನಡೆಸಿದ್ದರು ಎನ್ನಲಾಗಿದೆ.

ರಫೇಲ್ ಡೀಲ್ - ರಾಹುಲ್ ಹೇಳಿದ 10 ಸುಳ್ಳುಗಳು : ತಿರುಗಿಬಿದ್ದ ಬಿಜೆಪಿ ರಫೇಲ್ ಡೀಲ್ - ರಾಹುಲ್ ಹೇಳಿದ 10 ಸುಳ್ಳುಗಳು : ತಿರುಗಿಬಿದ್ದ ಬಿಜೆಪಿ

ಈ ಸಭೆಯಲ್ಲಿ ಡ್ರಿಯಾನ್ ಅವರ ವಿಶೇಷ ಸಲಹೆಗಾರ ಜೀನ್ ಕ್ಲಾಡ್ ಮಲ್ಲೆಟ್, ಅವರ ಕೈಗಾರಿಕಾ ಸಲಹೆಗಾರ ಕ್ರಿಸ್ಟೋಫ್ ಸಾಲೊಮನ್ ಮತ್ತು ಅವರ ಕೈಗಾರಿಕಾ ವ್ಯವಹಾರಗಳ ತಾಂತ್ರಿಕ ಸಲಹೆಗಾರ ಜೆಫ್ರಿ ಬೌಕೋಟ್ ಹಾಜರಿದ್ದರು.

ಸಭೆಯ ವೇಳೆ ಅಂಬಾನಿ ವಾಣಿಜ್ಯ ಮತ್ತು ರಕ್ಷಣಾ ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಏರ್‌ಬಸ್ ಹೆಲಿಕಾಪ್ಟರ್ ಜತೆಗೂಡಿ ಕೆಲಸ ಮಾಡುವ ಆಸಕ್ತಿ ವ್ಯಕ್ತಪಡಿಸಿದ್ದರು. ಈ ಕುರಿತಾದ ಒಪ್ಪಂದ ತಯಾರಾಗುತ್ತಿದ್ದು, ಪ್ರಧಾನಿ ಭೇಟಿಯ ವೇಳೆ ಸಹಿ ಹಾಕುವ ಉದ್ದೇಶವಿದೆ ಎಂದು ತಿಳಿಸಿದ್ದಾಗಿ ವರದಿಯಾಗಿದೆ.

ಅದೇ ವಾರವೇ ಅಂಬಾನಿ ಕಂಪೆನಿ ಸ್ಥಾಪನೆ

ಅದೇ ವಾರವೇ ಅಂಬಾನಿ ಕಂಪೆನಿ ಸ್ಥಾಪನೆ

ಅಂಬಾನಿ ಫ್ರೆಂಚ್ ರಕ್ಷಣಾ ಸಚಿವರ ಕಚೇರಿ ಭೇಟಿ ನೀಡಿದ ಸಂದರ್ಭದಲ್ಲಿ ಮೋದಿ ಅವರು ಏಪ್ರಿಲ್ 9 ರಿಂದ 11ರವರೆಗೆ ಫ್ರಾನ್ಸ್ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನುವುದು ಗೊತ್ತಾಗಿತ್ತು.

ಬಳಿಕ, ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡ್ ಜಂಟಿ ಹೇಳಿಕೆಯಲ್ಲಿ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಘೋಷಣೆ ಮಾಡಿದ ಸಂದರ್ಭದಲ್ಲಿ ಪ್ರಧಾನಿ ನಿಯೋಗದಲ್ಲಿ ಅಂಬಾನಿ ಕೂಡ ಇದ್ದರು.

ಕುತೂಹಲಕಾರಿ ಸಂಗತಿಯೆಂದರೆ, ಈ ಸಭೆ ನಡೆದ ವಾರವೇ ಮಾರ್ಚ್ 28, 2015ರಂದು ರಿಲಯನ್ಸ್ ಡಿಫೆನ್ಸ್ ಸಂಸ್ಥೆ ಹುಟ್ಟಿಕೊಂಡಿತ್ತು.

ರಫೇಲ್ ವಿಚಾರವೇ ಇಲ್ಲ ಎಂದಿದ್ದ ಜೈಶಂಕರ್

ರಫೇಲ್ ವಿಚಾರವೇ ಇಲ್ಲ ಎಂದಿದ್ದ ಜೈಶಂಕರ್

2015ರ ಏಪ್ರಿಲ್ 8ರಂದು ಮೋದಿ ಅವರ ಭೇಟಿಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಆಗಿನ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್, ರಫೇಲ್ ಒಪ್ಪಂದದ ಯಾವುದೇ ಊಹಾಪೋಹಗಳನ್ನು ತಳ್ಳಿಹಾಕಿದ್ದರು.

'ರಫೇಲ್ ವಿಚಾರದಲ್ಲಿ ಫ್ರೆಂಚ್ ಕಂಪೆನಿ, ನಮ್ಮ ರಕ್ಷಣಾ ಸಚಿವಾಲಯ ಮತ್ತು ಎಚ್‌ಎಎಲ್‌ ನಡುವೆ ಮಾತಕತೆ ನಡೆಯುತ್ತಿದೆ. ಇವು ಇನ್ನೂ ಪ್ರಗತಿಯಲ್ಲಿರುವ ಚರ್ಚೆಗಳು. ಬಹಳ ತಾಂತ್ರಿಕವಾದ ಮತ್ತು ವಿವರವಾದ ಚರ್ಚೆಗಳು. ಈಗ ನಡೆಯುತ್ತಿರುವ ರಕ್ಷಣಾ ಒಪ್ಪಂದಗಳನ್ನು ನಾಯಕರ ಮಟ್ಟದ ಭೇಟಿಯೊಂದಿಗೆ ಬೆರೆಸುವುದಿಲ್ಲ. ಇವೆರಡೂ ವಿಭಿನ್ನ ಸಂಗತಿಗಳಾಗಿವೆ. ಭದ್ರತಾ ಕ್ಷೇತ್ರದಲ್ಲಿ ನಾಯಕರ ಭೇಟಿಯೂ ಬಹು ದೊಡ್ಡದಾಗಿ ಕಾಣಿಸುತ್ತದೆ' ಎಂದು ಹೇಳಿದ್ದರು.

ರಫೇಲ್: ವಿಮಾನಗಳ ಸಂಖ್ಯೆ ಇಳಿದರೂ ದರ ಶೇ 14.2ರಷ್ಟು ಹೆಚ್ಚಳ ಆಗಿದ್ದು ಹೇಗೆ? ರಫೇಲ್: ವಿಮಾನಗಳ ಸಂಖ್ಯೆ ಇಳಿದರೂ ದರ ಶೇ 14.2ರಷ್ಟು ಹೆಚ್ಚಳ ಆಗಿದ್ದು ಹೇಗೆ?

ಪ್ರಮುಖ ಪಾಲುದಾರ ರಿಲಯನ್ಸ್

ಪ್ರಮುಖ ಪಾಲುದಾರ ರಿಲಯನ್ಸ್

ರಫೇಲ್ ಯುದ್ಧ ವಿಮಾನ ತಯಾರಿಸುವ ಡಸಾಲ್ಟ್ ಏವಿಯೇಷನ್‌ಗೆ ಅನಿಲ್ ಅಂಬಾನಿ ಅವರ ರಿಲಯನ್ಸ್ ಸಮೂಹ ಪ್ರಮುಖ ಪಾಲುದಾರನಾಗಿದೆ. ರಫೇಲ್ ವಿಮಾನದ ಕೆಲವು ಭಾಗಗಳನ್ನು ವಿವಿಧ ಖಾಸಗಿ ಕಂಪೆನಿಗಳು ತಯಾರಿಸಲಿದ್ದು, ಇವುಗಳ ವೆಚ್ಚ 30 ಸಾವಿರ ಕೋಟಿ ರೂಪಾಯಿ. ಇದರಲ್ಲಿ ರಿಲಯನ್ಸ್‌ನ ನಿಖರವಾದ ಪಾಲು ಎಷ್ಟು ಎನ್ನುವುದು ಇದುವರೆಗೂ ಅಧಿಕೃತವಾಗಿ ಖಚಿತವಾಗಿಲ್ಲ.

ಡಸಾಲ್ಟ್-ರಿಲಯನ್ಸ್ ಜಂಟಿ ಕಂಪೆನಿ

ಡಸಾಲ್ಟ್-ರಿಲಯನ್ಸ್ ಜಂಟಿ ಕಂಪೆನಿ

ಆಫ್‌ಸೆಟ್‌ಗಳನ್ನು ತಯಾರಿಸಲು ಡಸಾಲ್ಟ್ ಮತ್ತು ರಿಲಯನ್ಸ್ ಜಂಟಿಯಾಗಿ ಕಂಪೆನಿಯೊಂದನ್ನು ಸ್ಥಾಪಿಸಿದ್ದು, ನಾಗಪುರದಲ್ಲಿ ಕೈಗಾರಿಕಾ ಘಟಕವೊಂದನ್ನು ಆರಂಭಿಸಲಾಗಿದೆ. ಡಸಾಲ್ಟ್ ಇದುವರೆಗೂ 40 ಕೋಟಿ ರೂ. ಹೂಡಿಕೆ ಮಾಡಿದ್ದು, ಮುಂದಿನ ಐದು ವರ್ಷಗಳಲ್ಲಿ 400 ಕೋಟಿವರೆಗೂ ಹೂಡಿಕೆ ಮಾಡಲಿದೆ. 'ಡಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್‌'ನಲ್ಲಿ ರಿಲಯನ್ಸ್ ಏರೋಸ್ಪೇಸ್ ಶೇ 51 ಮತ್ತು ಡಸಾಲ್ಟ್ ಏವಿಯೇಷನ್ ಶೇ 49ರಷ್ಟು ಷೇರು ಹೊಂದಿವೆ.

ಅನಿಲ್ ಅಂಬಾನಿಗಾಗಿ ಎಚ್‌ಎಎಲ್ ಮುಳುಗಿಸುತ್ತಿದ್ದಾರೆ: ರಾಹುಲ್ ಆರೋಪ ಅನಿಲ್ ಅಂಬಾನಿಗಾಗಿ ಎಚ್‌ಎಎಲ್ ಮುಳುಗಿಸುತ್ತಿದ್ದಾರೆ: ರಾಹುಲ್ ಆರೋಪ

English summary
Reliance Anil Ambani visited French defence officials just two weeks before Prime Minister Narendra Modi announced Rafale deal with 36 aircraft procurement along with then French President Francois Hollande in a joint statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X