ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೆ ಅಧಿಕಾರ ತಪ್ಪಿಸಲು ಮತ್ತೊಂದು ಹೆಜ್ಜೆಯಿಟ್ಟ ಚಂದ್ರಬಾಬು ನಾಯ್ಡು

|
Google Oneindia Kannada News

Recommended Video

ಒಂದು ದಿನದ ಉಪವಾಸ ಅಂತ್ಯಗೊಳಿಸಿದ ಚಂದ್ರಬಾಬುನಾಯ್ಡು..! | Oneindia Kannada

ನವದೆಹಲಿ, ಫೆ 12: ಪ್ರಧಾನಮಂತ್ರಿ ನರೇಂದ್ರ ಮೋದಿ ಇನ್ನೊಂದು ಅವಧಿಗೆ ಅಧಿಕಾರಕ್ಕೆ ಏರದಂತೆ ತಡೆಯುವ ಎಲ್ಲಾ ದಾರಿಯನ್ನು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಮುಕ್ತವಾಗಿರಿಸಿಕೊಂಡಂತಿದೆ.

ನಿಮ್ಮ ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳುವ ಯೋಗ್ಯತೆ ಇಲ್ಲದ ನೀವು, ನನ್ನ ನೆಲದಲ್ಲಿ ನಿಂತು, ನನ್ನ ಮೇಲೆ ಟೀಕೆ ಮಾಡುತ್ತೀರಾ ಎಂದು ಮೋದಿ ವಿರುದ್ದ ವಾಕ್ ಪ್ರಹಾರ ನಡೆಸಿದ್ದ ಸಿಎಂ ನಾಯ್ಡು, ಪ್ರಧಾನಿ ವಿರುದ್ದ ಇನ್ನೊಂದು ದಾಳ ಉರುಳಿಸಲು ಮುಂದಾಗಿದ್ದಾರೆ.

ಚಂದ್ರಬಾಬು ನಾಯ್ಡು ಪ್ರತಿಭಟನೆ; ಬೆಂಬಲಿಗರ ವಾಸ್ತವ್ಯಕ್ಕೆ 60 ಲಕ್ಷ ವೆಚ್ಚಚಂದ್ರಬಾಬು ನಾಯ್ಡು ಪ್ರತಿಭಟನೆ; ಬೆಂಬಲಿಗರ ವಾಸ್ತವ್ಯಕ್ಕೆ 60 ಲಕ್ಷ ವೆಚ್ಚ

ಅದೂ ಎಂತಾ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿದ್ದಾರೆಂದರೆ, ತೆಲುಗುದೇಶಂ ಪಕ್ಷ ಉದಯಗೊಂಡಾಗಿಂದಲೂ, ತಮ್ಮ ಬದ್ದ ವಿರೋಧಿಗಳ ಜೊತೆ ಕೈಜೋಡಿಸಲೂ ನನ್ನದೇನೂ ಅಭ್ಯಂತರವಿಲ್ಲ ಎಂದಿದ್ದಾರೆ.

ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿ ಏನು ಸಾಹಸ ಮಾಡಿದರೂ, ಮುಖಭಂಗ ತಪ್ಪಿಸಿಕೊಳ್ಳಲಾಗದ ನಂತರ ಚಂದ್ರಬಾಬು, ಭಾನುವಾರ (ಫೆ 10) ಗುಂಟೂರಿನಲ್ಲಿ ನಡೆದ ಪ್ರಧಾನಿ ಮೋದಿ ಸಾರ್ವಜನಿಕ ಸಭೆಗೆ ಸೇರಿದ ಜನಸ್ತೋಮವನ್ನು ಕಂಡು, ಇನ್ನಷ್ಟು ಕಸಿವಿಸಿಗೊಂಡಿದ್ದಾರೆಂದು ವ್ಯಾಖ್ಯಾನಿಸಲಾಗುತ್ತಿದೆ. ನಾಯ್ಡು, ಚುನಾವಣೋತ್ತರ ಮೈತ್ರಿಯ ಬಗ್ಗೆ ಮಾತನಾಡಿದ್ದು ಹೀಗೆ..

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯ

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯ

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಚಂದ್ರಬಾಬು ನಾಯ್ಡು, ನವದೆಹಲಿಯಲ್ಲಿ ಸೋಮವಾರ ಉಪವಾಸ ಸತ್ಯಾಗ್ರಹ ಆರಂಭಿಸಿ, ರಾತ್ರಿಗೆ ಅಂತ್ಯಗೊಳಿಸಿದ್ದರು. ಮೋದಿ ಸಭೆಯ ಮರುದಿನವೇ ನಾಯ್ಡು ಈ ಉಪವಾಸ ನಡೆಸಿದ್ದರು. ಪ್ರಧಾನಿ ಎನ್ನುವ ಹುದ್ದೆಗೆ ಗೌರವ ನೀಡದೆ, ಜೊತೆಗೆ ಮೋದಿಯ ವೈಯಕ್ತಿಕ ಜೀವನದ ಬಗ್ಗೆಯೂ ನಾಯ್ಡು ಮಾತನಾಡಿದ್ದು, ವ್ಯಾಪಕ ಟೀಕೆಗೆ ಒಳಗಾಗಿತ್ತು.

ವೈಎಸ್ಆರ್ ಕಾಂಗ್ರೆಸ್ ಪಕ್ಷದ ಜೊತೆಗೂ ಮೈತ್ರಿಗೆ ನೋ ಪ್ರಾಬ್ಲಂ

ವೈಎಸ್ಆರ್ ಕಾಂಗ್ರೆಸ್ ಪಕ್ಷದ ಜೊತೆಗೂ ಮೈತ್ರಿಗೆ ನೋ ಪ್ರಾಬ್ಲಂ

ಉಪವಾಸ ಸತ್ಯಾಗ್ರಹದ ವೇಳೆ ಚುನಾವಣೋತ್ತರ ಮೈತ್ರಿಗೆ ನಾನು ಸಿದ್ದನಿದ್ದೇನೆ ಎಂದು ಹೇಳಿದ ನಾಯ್ದು, ಆಂಧ್ರಪ್ರದೇಶದಲ್ಲಿ ತಮ್ಮ ವಿರೋಧಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಜೊತೆಗೂ ಮೈತ್ರಿಗೆ ನೋ ಪ್ರಾಬ್ಲಂ ಅಂದಿದ್ದಾರೆ. ನಮ್ಮ ಉದ್ದೇಶ, ನರೇಂದ್ರ ಮೋದಿಯವರನ್ನು ಮತ್ತೆ ಅಧಿಕಾರಕ್ಕೆ ಏರದಂತೆ ತಡೆಯುವುದು ಎಂದು ನಾಯ್ಡು ಹೇಳಿದ್ದಾರೆ.

ಮೋದಿ ಮೋಹ! ಜಗನ್, ಕೆಸಿಆರ್ ರನ್ನು ತರಾಟೆಗೆ ತೆಗೆದುಕೊಂಡ ನಾಯ್ಡುಮೋದಿ ಮೋಹ! ಜಗನ್, ಕೆಸಿಆರ್ ರನ್ನು ತರಾಟೆಗೆ ತೆಗೆದುಕೊಂಡ ನಾಯ್ಡು

ಜಗನ್, ಮೋದಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ

ಜಗನ್, ಮೋದಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ

ಆಂಧ್ರಪ್ರದೇಶದಲ್ಲಿ ಜಗನ್, ತೆಲಂಗಾಣದಲ್ಲಿ ಕೆಸಿಆರ್, ಮೋದಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಇದಕ್ಕೆ ಸಾಕ್ಷಿ, ಗುಂಟೂರಿನಲ್ಲಿ ನಡೆದ ಮೋದಿಯ ಸಾರ್ವಜನಿಕ ಸಭೆ. ಜಗನ್ ಸಹಕಾರವಿಲ್ಲದೇ, ಆ ಮಟ್ಟಿಗೆ ಅಲ್ಲಿ ಜನ ಸೇರುತ್ತಿರಲಿಲ್ಲ. ಇದೆಲ್ಲಾ, ಜಗನ್ ಬೆಂಬಲದಿಂದ ನಡೆದಿದ್ದು - ಚಂದ್ರಬಾಬು ನಾಯ್ಡು.

ಮಹಾನಾಯಕ ಎನ್ಟಿಆರ್ ಬೆನ್ನಿಗೆ ಚೂರಿ ಹಾಕಿದ್ದ ಚಂದ್ರಬಾಬು ನಾಯ್ಡು: ಮೋದಿಮಹಾನಾಯಕ ಎನ್ಟಿಆರ್ ಬೆನ್ನಿಗೆ ಚೂರಿ ಹಾಕಿದ್ದ ಚಂದ್ರಬಾಬು ನಾಯ್ಡು: ಮೋದಿ

ಮೂರು ಸಾವಿರ ಕಿ.ಮೀ ಪಾದಯಾತ್ರೆ ನಡೆಸಿದ ಜಗನ್

ಮೂರು ಸಾವಿರ ಕಿ.ಮೀ ಪಾದಯಾತ್ರೆ ನಡೆಸಿದ ಜಗನ್

ಮೂರು ಸಾವಿರ ಕಿ.ಮೀ ಪಾದಯಾತ್ರೆ ನಡೆಸಿದ ನಂತರ, ರಾಜ್ಯಪಾಲ ನರಸಿಂಹನ್ ಅವರನ್ನು ಭೇಟಿಯಾಗಿದ್ದ ಜಗನ್, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ನಾಯ್ಡು ವಿರುದ್ದ ದೂರು ನೀಡಿದ್ದರು. ಇದಕ್ಕೆ ಜಗನ್ ಮೇಲಿರುವ ಎಲ್ಲಾ ಕೇಸುಗಳನ್ನು ಮೋದಿ ಸರಕಾರ ರಕ್ಷಿಸಲು ಹೊರಟಿದೆ ಎಂದು ನಾಯ್ಡು ತಿರುಗೇಟು ನೀಡಿದ್ದರು. ಇದಾದ ಕೇವಲ 24ಗಂಟೆಯ ಅವಧಿಯಲ್ಲಿ ಜಗನ್ ಜೊತೆ ಮೈತ್ರಿ ಮಾಡಿಕೊಂಡರೆ ತಪ್ಪೇನು ಎಂದು ನಾಯ್ಡು ಮಾಧ್ಯಮದವರನ್ನು ಮರು ಪ್ರಶ್ನಿಸಿದ್ದಾರೆ.

ವೈಎಸ್ಆರ್ ಪಕ್ಷಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ

ವೈಎಸ್ಆರ್ ಪಕ್ಷಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ

ಚುನಾವಣಾಪೂರ್ವ ಸಮೀಕ್ಷೆಯ ಪ್ರಕಾರ, ಜಗನ್ ನೇತೃತ್ವದ ವೈಎಸ್ಆರ್ ಪಕ್ಷಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ಕನಿಷ್ಠ 20-22 ಸೀಟಲ್ಲಿ ವೈಎಸ್ಆರ್ ಜಯಗಳಿಸುವ ಸಾಧ್ಯತೆಯಿದೆ. ಅಮಿತ್ ಶಾ ಆಗಲಿ, ಜಗನ್ ಆಗಲಿ ಚುನಾವಣಾಪೂರ್ವ ಮೈತ್ರಿಯ ಬಗ್ಗೆ ಏನನ್ನೂ ಬಿಟ್ಟುಕೊಡದೇ ಇರುವುದು, ನಾಯ್ಡುಗೆ ತಂತ್ರಗಾರಿಕೆ ಹಣೆಯಲು ಕಷ್ಟವಾಗುತ್ತಿದೆ ಎನ್ನುವುದು ಸದ್ಯದ ಮಟ್ಟಿನ ಆಂಧ್ರದ ರಾಜಕೀಯ ಲೆಕ್ಕಾಚಾರ.

ಚಂದ್ರಬಾಬು ನಾಯ್ಡುಗೆ ಶಾಕ್: ಜಗನ್ ಪಾಳೆಯಕ್ಕೆ ಎನ್‌ಟಿಆರ್ ಮೊಮ್ಮಗಚಂದ್ರಬಾಬು ನಾಯ್ಡುಗೆ ಶಾಕ್: ಜಗನ್ ಪಾಳೆಯಕ್ಕೆ ಎನ್‌ಟಿಆರ್ ಮೊಮ್ಮಗ

English summary
Andhra Pradesh, chief minister Chandrababu Naidu hinted that he would be open to a post-poll alliance with regional rival YSR Congress chief Jagan Mohan Reddy to keep the BJP away.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X