ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಭಾರ ಕುಸಿತ: ಆಂಧ್ರ, ಒಡಿಸ್ಸಾಗೆ ಅಪ್ಪಳಿಸಲಿದೆ 'ತಿತ್ಲಿ' ಚಂಡಮಾರುತ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 09: ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಆಂಧ್ರ ಪ್ರದೇಶ ಹಾಗೂ ಒಡಿಸ್ಸಾ ರಾಜ್ಯಗಳಿಗೆ ಭಾರಿ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ.

ತೀವ್ರವಾದ ವಾಯುಭಾರ ಕುಸಿತ ಇದಾಗಿದ್ದು, ಇದರಿಂದಾಗಿ ಎದ್ದಿರುವ ಚಂಡಮಾರುತವು ಇಂದು ಅಥವಾ ನಾಳೆ (ಅಕ್ಟೋಬರ್‌ 10) ಕ್ಕೆ ಆಂಧ್ರ ಪ್ರದೇಶ ಹಾಗೂ ಒಡಿಸ್ಸಾ ಕರಾವಳಿಯನ್ನು ಪ್ರವೇಶಿಸಲಿದೆ. ಬಂಗಾಳಕೊಲ್ಲಿಯಲ್ಲಿ ಉಗಮವಾಗಿರುವ ಈ ಚಂಡಮಾರುತಕ್ಕೆ 'ಟಿಟ್ಲಿ' ಎಂದು ಹೆಸರು ನೀಡಲಾಗಿದೆ.

ಮಂಗಳೂರಿನಲ್ಲಿ ಚಂಡಮಾರುತದ ಭೀತಿ: ಲಂಗರು ಹಾಕಿದ ಸಾವಿರಾರು ಬೋಟ್‌ಗಳುಮಂಗಳೂರಿನಲ್ಲಿ ಚಂಡಮಾರುತದ ಭೀತಿ: ಲಂಗರು ಹಾಕಿದ ಸಾವಿರಾರು ಬೋಟ್‌ಗಳು

ಮಂಗಳವಾರ ಬೆಳಿಗ್ಗೆ, ತೀರದಿಂದ 500 ಕಿ.ಮೀ ದೂರದಲ್ಲಿದ್ದ ಚಂಡಮಾರುತವು 10 ಕಿ.ಮೀ ವೇಗದಲ್ಲಿ ಆಂಧ್ರ ಪ್ರದೇಶ ಹಾಗೂ ಒಡಿಸ್ಸಾ ತೀರದ ಕಡೆ ಚಲಿಸುತ್ತಿತ್ತು. ಆದರೆ ಮುಂದಿನ 24 ಗಂಟೆಗಳಲ್ಲಿ ಅದು ಹೆಚ್ಚಿನ ವೇಗ ಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Andhra Pradesh and Odissa will het by cyclone Wednesday

ಚಂಡಮಾರುತಕ್ಕೆ ಮಹಿಳೆಯರ ಹೆಸರನ್ನಿಡುತ್ತಾರೆ ಏಕೆ?ಚಂಡಮಾರುತಕ್ಕೆ ಮಹಿಳೆಯರ ಹೆಸರನ್ನಿಡುತ್ತಾರೆ ಏಕೆ?

ಈ ವಾಯುಭಾರ ಕುಸಿತವು ಆಂಧ್ರ ಪ್ರದೇಶದ ಕರಾವಳಿ ಜಿಲ್ಲೆಗಳು ಹಾಗೂ ಒಡಿಸ್ಸಾದ ಗಂಜಾಂ, ಗಜಪತಿ, ಪುರಿ, ಜಗತ್‌ಸಿಂಗ್‌ಪುರ ಇನ್ನೂ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಗೆ ಕಾರಣವಾಗಲಿದೆ.

English summary
High depression in Bay of Bengal. Andhra Pradesh and Odissa will hit by cyclone Wednesday morning. Andhra and Odissa will see heavy rain in 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X