ನಗದು ರಹಿತ ವಹಿವಾಟಿಗಾಗಿ ಆಂಧ್ರ ಸರ್ಕಾರದಿಂದ ಉಚಿತ ಮೊಬೈಲ್

Posted By:
Subscribe to Oneindia Kannada

ಅಮರಾವತಿ, ನವೆಂಬರ್, 25: ನಗದು ರಹಿತ ವ್ಯವಹಾರವನ್ನು ಉತ್ತೇಜಿಸಲು ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಸ್ಮಾರ್ಟ್ ಫೋನ್ ವಿತರಿಸುವುದಾಗಿ ಆಂಧ್ರಪ್ರದೇಶ ಸರ್ಕಾರತಿಳಿಸಿದೆ.

ಅಧಿಕ ಮುಖಬೆಲೆಯ ನೋಟು ನಿಷೇಧದಿಂದಾಗಿ ದಿನನಿತ್ಯದ ಖರ್ಚುಗಳಿಗೆ ಹಣದವಿಲ್ಲದೆ ಸಾರ್ವಜನಿಕರು ಪರದಾಡುತ್ತಿರುವುದರಿಂದ ನಗದು ರಹಿತ ವ್ಯವಹಾರವನ್ನೇ ಪ್ರೇರೆಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

Andhra government to provide free mobiles for cashless transactions

ಈ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಮತ್ತು ರಾಜ್ಯದ ಇತರೆ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಂಡಿದ್ದಾರೆ.

ರೂ.500 ಹಾಗು 1000 ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿದ ಪರಿಣಾಮ ದೇಶದಾದ್ಯಂತ ಚಿಲ್ಲರೆ ಸಮಸ್ಯೆ ಹೆಚ್ಚಾಗಿರುವುದರಿಂದ ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವುದು ಉತ್ತಮ ಕ್ರಮ ಎಂದು ಸರ್ಕಾರ ತಿಳಿಸಿದೆ.

ಸುಮಾರು 60 ರಿಂದ 70 ಲಕ್ಷ ಸ್ಮಾರ್ಟ್ ಫೋನ್ ಗಳನ್ನು ವಿತರಿಸಲು ಸರ್ಕಾರ ಮುಂದಾಗಿದೆ. ಚೈನೀಸ್ ಬ್ರಾಂಡ್ ಗಳಲ್ಲದೆ, ಆಂಧ್ರಪ್ರದೇಶದಲ್ಲೇ ಇರುವ ಮೊಬೈಲ್ ತಯಾರಿಕಾ ಘಟಕಗಳಲ್ಲಿ ಸ್ಮಾರ್ಟ್ ಫೋನ್ ಗಳನ್ನು ತಯಾರಿಸಲು ನಿರ್ಧರಿಸಿದೆ.

ಉಚಿತ ಮೊಬೈಲ್ ವಿತರಣೆ ಕಾರ್ಯಕ್ರಮವನ್ನು ಎಂದಿನಿಂದ ಆರಂಭಿಸಲಾಗುತ್ತದೆ ಎಂಬುದರ ಬಗ್ಗೆ ಸರ್ಕಾರ ಇನ್ನೂ ಮಾಹಿತಿ ನೀಡಿಲ್ಲ. ಆದರೆ ಶೀಘ್ರದಲ್ಲೇ ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Andhra Pradesh government is planning to distribute free mobile phones to enable economically-backward people to undertake cashless transactions in the wake of the ongoing currency crisis.
Please Wait while comments are loading...