• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೆಹಲಿ ಅಲ್ಲ ಈಗ ಆಂಧ್ರಪ್ರದೇಶ ಮೂರನೇ ಕೊರೊನಾ ಪೀಡಿತ ರಾಜ್ಯ

|

ನವದೆಹಲಿ, ಆಗಸ್ಟ್ 01: ದೆಹಲಿಯನ್ನು ಹಿಂದಿಕ್ಕಿ ಆಂಧ್ರಪ್ರದೇಶ ಈಗ ಕೊರೊನಾ ಪೀಡಿತ ರಾಜ್ಯಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಂದು ನಿಂತಿದೆ.

ಕಳೆದ ಮೂರು ವಾರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 30 ಸಾವಿರಕ್ಕೇರಿದೆ. ಒಟ್ಟು 1,40,933 ಕೊರೊನಾ ಸೋಂಕಿತರಿದ್ದಾರೆ ಇಲ್ಲಿಯವರೆಗೆ 1349 ಮಂದಿ ಸಾವನ್ನಪ್ಪಿದ್ದಾರೆ.

ಶುಕ್ರವಾರ ಆಂಧ್ರಪ್ರದೇಶದಲ್ಲಿ 10,376 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 60 ಮಂದಿ ಮೃತಪಟ್ಟಿದ್ದಾರೆ. 3822 ಮಂದಿ ಒಂದೇ ದಿನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 75, 720 ಪ್ರಕರಣಗಳಿವೆ. 63,864 ಮಂದಿ ಗುಣಮುಖರಾಗಿದ್ದಾರೆ.

ತಮಿಳುನಾಡಲ್ಲಿ ಆ.31ರ ತನಕ ಲಾಕ್ ಡೌನ್; ಭಾನುವಾರ ಬಂದ್

ದೆಹಲಿಯಲ್ಲಿ 1 ಲಕ್ಷದ 34 ಸಾವಿರ ಕೊರೊನಾ ಸೋಂಕಿತರಿದ್ದಾರೆ. 1 ಲಕ್ಷದ 20 ಸಾವಿರ ಮಂದಿ ಗುಣಮುಖರಾಗಿದ್ದಾರೆ. 3,936 ಮಂದಿ ಸಾವನ್ನಪ್ಪಿದ್ದಾರೆ.

ಒಟ್ಟು ಎಷ್ಟು ಮಾದರಿಗಳ ಪರೀಕ್ಷೆ ನಡೆದಿದೆ

ಒಟ್ಟು ಎಷ್ಟು ಮಾದರಿಗಳ ಪರೀಕ್ಷೆ ನಡೆದಿದೆ

ಇದುವರೆಗೆ 19,51,776 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಆರೋಗ್ಯ ಸಚಿವ ಎಕೆಕೆ ಶ್ರೀನಿವಾಸ್ ರಾಜ್ಯದಲ್ಲಿ ತಪಾಸಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಕರಣಗಳು ಹೆಚ್ಚೆಚ್ಚು ಪತ್ತೆಯಾಗುತ್ತಿವೆ ಎಂದಿದ್ದಾರೆ.

ದೆಹಲಿಯಲ್ಲಿ ಜೂನ್ ತಿಂಗಳಲ್ಲಿ ದಿನಕ್ಕೆ 4 ಸಾವಿರ ಪ್ರಕರಣ

ದೆಹಲಿಯಲ್ಲಿ ಜೂನ್ ತಿಂಗಳಲ್ಲಿ ದಿನಕ್ಕೆ 4 ಸಾವಿರ ಪ್ರಕರಣ

ದೆಹಲಿಯಲ್ಲಿ ಜೂನ್ ತಿಂಗಳಲ್ಲಿ ಹೆಚ್ಚೆಚ್ಚು ಪ್ರಕರಣಗಳು ಪತ್ತೆಯಾಗಿತ್ತು ತಿಂಗಳುಗಳ ಕಾಲ ದಿನಕ್ಕೆ 4 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆಸ್ಪತ್ರೆಗಳ ಕೊರತೆ ಉಂಟಾಗಿ, ಮೈದಾನಳಲ್ಲೆಲ್ಲಾ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದರು.

ದೆಹಲಿಯಲ್ಲಿ ಹೋಟೆಲ್‌ಗಳು ಪುನರಾರಂಭ

ದೆಹಲಿಯಲ್ಲಿ ಹೋಟೆಲ್‌ಗಳು ಪುನರಾರಂಭ

ದೆಹಲಿಯಲ್ಲಿ ಹೋಟೆಲ್‌ಗಳನ್ನು ಪುನರಾರಂಭಿಸಲಾಗುತ್ತಿದೆ. ವಾರದ ಮಾರುಕಟ್ಟೆಗಳನ್ನು ತೆರೆದು ಒಂದು ವಾರ ಪರೀಕ್ಷೆ ಮಾಡಲಾಗುತ್ತದೆ. ಭಾರತದಲ್ಲಿ 16 ಸಾವಿರ ಕೊರೊನಾ ಸೋಂಕಿತ ಪ್ರಕರಣಗಳಿವೆ. ನಿತ್ಯ 55 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿದೆ. ಶುಕ್ರವಾರ 779 ಮಂದಿ ಮೃತಪಟ್ಟಿದ್ದಾರೆ. ಒಟ್ಟು 35,747 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕ, ಬ್ರೆಜಿಲ್, ಬ್ರಿಟನ್, ಮೆಕ್ಸಿಕೋ ಬಳಿಕ ಭಾರತ ಐದನೇ ಅತಿ ಹೆಚ್ಚು ಕೊರೊನಾ ಸಾವನ್ನು ಹೊಂದಿರುವ ರಾಷ್ಟ್ರವಾಗಿದೆ.

ತಮಿಳುನಾಡಿನಲ್ಲಿ ಲಾಕ್‌ಡೌನ್ ವಿಸ್ತರಣೆ

ತಮಿಳುನಾಡಿನಲ್ಲಿ ಲಾಕ್‌ಡೌನ್ ವಿಸ್ತರಣೆ

ತಮಿಳುನಾಡುಸರ್ಕಾರ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಆಗಸ್ಟ್ 31ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,34,114. ಗುರುವಾರ ತಮಿಳುನಾಡು ಸರ್ಕಾರ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಕೇಂದ್ರ ಗೃಹ ಇಲಾಖೆ ಬುಧವಾರ ಅನ್ ಲಾಕ್ 3.0 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ಈಗಾಗಲೇ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ರಾಜ್ಯಗಳು ಲಾಕ್ ಡೌನ್ ಅನ್ನು ಆಗಸ್ಟ್ 31ರ ತನಕ ವಿಸ್ತರಣೆ ಮಾಡಿವೆ. ಬಿಹಾರ ಸರ್ಕಾರ ಆಗಸ್ಟ್ 16ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

English summary
Andhra Pradesh on Friday surpassed Delhi to become the third worst coronavirus-hit state in the country. The state has added over 30,000 cases to its tally in the last three days, taking its total of those infected by the deadly virus to 1,40,933, including 1,349 fatalities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X