ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಡಮಾನ್ ನಲ್ಲಿ ಎರಡು ಗಂಟೆಗಳಲ್ಲಿ 9 ಸಣ್ಣ ಪ್ರಮಾಣದ ಭೂಕಂಪ

|
Google Oneindia Kannada News

ಪೋರ್ಟ್ ಬ್ಲೇರ್, ಏಪ್ರಿಲ್ 01 : ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಎರಡು ಗಂಟೆಗಳ ಅವಧಿಯಲ್ಲಿ ಸಣ್ಣಮಟ್ಟದಿಂದ ಸಾಧಾರಣ ಪ್ರಮಾಣದ 9 ಭೂಕಂಪಗಳು ಸಂಭವಿಸಿವೆ. ಮತ್ತು, ಕಳೆದ ಕೆಲವು ಗಂಟೆಗಳಲ್ಲಿ 20ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸೋಮವಾರ ಬೆಳಗಿನ ಜಾವ, 4.7ರಿಂದ 5.2 ಪ್ರಮಾಣದಲ್ಲಿ ಲಘು ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಗರ್ಭಶಾಸ್ತ್ರ ಕೇಂದ್ರ ತಿಳಿಸಿದೆ. ಮೊದಲ ಕಂಪನಿ ಬೆಳಿಗ್ಗೆ 5.14ರ ಸುಮಾರಿಗೆ 4.9 ಪ್ರಮಾಣದಲ್ಲಿ ಸಂಭವಿಸಿತ್ತು. ಕೆಲ ನಿಮಿಷಗಳಲ್ಲಿ ಆದ ಕಂಪನ 5 ಪ್ರಮಾಣದಲ್ಲಿತ್ತು. 6.54ರ ಸುಮಾರಿಗೆ ಸಂಭವಿಸಿದ ಕಂಪನ 5.2 ಪ್ರಮಾಣದಲ್ಲಿತ್ತು.

ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಭೂಕಂಪ, 4.8 ತೀವ್ರತೆ ದಾಖಲುಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಭೂಕಂಪ, 4.8 ತೀವ್ರತೆ ದಾಖಲು

ಇಲ್ಲಿ ಭೂಕಂಪನವೆಂಬುದು ಸಾಮಾನ್ಯ. ದಿನಕ್ಕೆ 2ರಿಂದ 3 ಇಷ್ಟು ಪ್ರಮಾಣದ ಕಂಪನಗಳು ಸಂಭವಿಸುತ್ತಲೇ ಇರುತ್ತವೆ. ಈ ಸರಣಿ ಕಂಪನದಿಂದ ಇಲ್ಲಿಯವರೆಗೆ ಯಾವುದೇ ನಷ್ಟವಾಗಿಲ್ಲ. ಸುನಾಮಿಯ ಎಚ್ಚರಿಕೆಯನ್ನೂ ನೀಡಲಾಗಿಲ್ಲ.

 Andaman and Nicobar island jolted by series of earthquakes

ಕಳೆದ ಮಾರ್ಚ್ 23ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ 5.1 ಪ್ರಮಾಣದ ಕಂಪನ ಉಂಟಾಗಿತ್ತು. ಕೆಲ ದಿನಗಳ ಹಿಂದೆ ಫೆಬ್ರವರಿ 13ರಂದು 4.5 ಪ್ರಮಾಣದ ಕಂಪನವಾಗಿದೆ ಎಂದು ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು. ಇದೀಗ ಹೆಚ್ಚೂಕಡಿಮೆ ಇದೇ ಪ್ರಮಾಣದ ಸರಣಿ ಕಂಪನಗಳು ಸಂಭವಿಸುತ್ತಿವೆ.

ಟರ್ಕಿಯಲ್ಲಿ 6.4 ಪ್ರಮಾಣದ ಪ್ರಬಲ ಭೂಕಂಪ ಟರ್ಕಿಯಲ್ಲಿ 6.4 ಪ್ರಮಾಣದ ಪ್ರಬಲ ಭೂಕಂಪ

ಡಿಟ್ರಿಯನಮ್ ಎಂಬ ವೆಬ್ ಸೈಟ್ ನಲ್ಲಿ ಭೂಕಂಪದ ಸಂಭವನೀಯತೆಯನ್ನು ಅಧ್ಯಯನ ಮಾಡಿ ವರದಿ ಮಾಡುವ ಫ್ರಾಂಕ್ ಗೂಗರ್ ಬೀಟ್ಸ್ ಎಂಬುವವರು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಸದ್ಯದಲ್ಲಿ 6ರಿಂದ 7 ಪ್ರಮಾಣದ ಭಾರೀ ಭೂಕಂಪ ಸಂಭವಿಸಲಿದೆ ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ. ಆದರೆ, ಈರೀತಿ ಭವಿಷ್ಯ ನುಡಿಯುವುದು ಅಸಾಧ್ಯ ಎಂದು ಭೂಗರ್ಭಶಾಸ್ತ್ರ ತಜ್ಞರು ಫ್ರಾಂಕ್ ಅವರ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

English summary
Andaman and Nicobar island jolted by series of earthquakes on Monday, 1st April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X