ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪನ ಹಾದಿ ಹಿಡಿದ ಜಗನ್, 3 ಸಾವಿರ ಕಿ.ಮೀ ಪಾದಯಾತ್ರೆ

By Mahesh
|
Google Oneindia Kannada News

ಅನಂತಪುರ, ಅಕ್ಟೋಬರ್ 30:ಆಂಧ್ರಪ್ರದೇಶದ ಮಾಜಿ ಸಿಎಂ, ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರ ಪಕ್ಷದ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ರಾಜಕೀಯ ನೆಲೆ ಕಂಡುಕೊಳ್ಳಲು ಮತ್ತೆ ಜನರ ಬಳಿಗೆ ಮರಳುತ್ತಿದ್ದಾರೆ. ಅಪ್ಪನ ಹಾದಿಯಲ್ಲೇ ಸಾಗಲು ನಿರ್ಧರಿಸಿರುವ ಜಗನ್ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಜಗನ್ ಗೆ ಸೇರಿದ 148 ಕೋಟಿ ರು. ಮೌಲ್ಯದ ಭೂಮಿ ಅಕ್ರಮ ಎಂದ ಇ.ಡಿ.ಜಗನ್ ಗೆ ಸೇರಿದ 148 ಕೋಟಿ ರು. ಮೌಲ್ಯದ ಭೂಮಿ ಅಕ್ರಮ ಎಂದ ಇ.ಡಿ.

ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಸಾರ್ ಕಾಂಗ್ರೆಸ್ ಅಧಿಪತ್ಯ ಹೊಂದಿರುವ ರಾಯಲ ಸೀಮೆಯ ಕಡಪ, ಕರ್ನೂಲ್, ನೆಲ್ಲೂರು ಜಿಲ್ಲೆಗಳ ಮೇಲೆ ಟಿಡಿಪಿ ತನ್ನ ಬಾವುಟ ಹಾರಿಸಿರುವುದನ್ನು ಇಲ್ಲಿ ಮರೆಯುವಂತಿಲ್ಲ.

Anantapur: Preparations on for Y S Jagan Moha Reddy's Praja sankalp yatra

ಈಗ ಕಡಪ ಜಿಲ್ಲೆಯ ಇಡುಪುಲಪಾಯದಿಂದ ಇಚ್ಚಾಪುರಂ ತನಕ ಸುಮಾರು 3,000 ಕಿ.ಮೀ ದೂರದವರೆಗೂ ನವೆಂಬರ್ 6ರಂದು ಪ್ರಜಾ ಸಂಕಲ್ಪ ಪಾದಯಾತ್ರೆಯನ್ನು ವೈಎಸ್ಸಾರ್ ಕಾಂಗ್ರೆಸ್ ಹಮ್ಮಿಕೊಂಡಿದ್ದಾರೆ.

ಸಿಬಿಐಗೆ ಹಿನ್ನಡೆ, ಜಗನ್ ರೆಡ್ಡಿ ಜಾಮೀನು ಮುಂದುವರಿಕೆಸಿಬಿಐಗೆ ಹಿನ್ನಡೆ, ಜಗನ್ ರೆಡ್ಡಿ ಜಾಮೀನು ಮುಂದುವರಿಕೆ

ಪಾದಯಾತ್ರೆ ಮೂಲಕ ಜನಮನಗೆದ್ದು ರಾಜಶೇಖರ ರೆಡ್ಡಿ ಅವರು ಅಧಿಕಾರಕ್ಕೇರಿದ್ದು ಈಗ ಇತಿಹಾಸ. ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪರ ನಿಂತ ಜಗನ್ ಗೆ ಈಗ ಕೇಂದ್ರದ ಮೋದಿ ಸರ್ಕಾರದಿಂದ ಯಾವುದೇ ನೆರವು ಸಿಗುವ ಭರವಸೆ ಇಲ್ಲ.

ಜಗನ್ ಅವರ ರಾಜಕೀಯ ಸಲಹೆಗಾರ, ರಾಯಲಸೀಮೆಯ ಪ್ರಮುಖ ನಾಯಕ ಸಜ್ಜಲ ರಾಮಕೃಷ್ಣ ರೆಡ್ಡಿ, ಹಿರಿಯ ನಾಯಕರಾದ ವೈಎಸ್ ವಿವೇಕಾನಂದ ರೆಡ್ಡಿ, ಸಂಸದ ವೈಎಸ್ ಅವಿನಾಶ್ ರೆಡ್ಡಿ ಎಲ್ಲರೂ ಖುದ್ದು ಈ ಪಾದಯಾತ್ರೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ವೈಎಸ್ ರಾಜಶೇಖರ್ ರೆಡ್ಡಿಗೆ ಸಮಾಧಿಗೆ ನಮಿಸಿ ಪಾದಯಾತ್ರೆ ಆರಂಭಿಸಲಿರುವ ಜಗನ್, ಮಾರ್ಗ ಮಧ್ಯದಲ್ಲಿ ಕಡಪ ದರ್ಗಾ, ಪುಲಿವೆಂದಲ ಚರ್ಚ್ ಗಳಿಗೂ ಭೇಟಿ ನೀಡಲಿದ್ದಾರೆ. 2019ರ ಚುನಾವಣೆ ಪ್ರಚಾರಕ್ಕೆ ಮುನ್ನುಡಿ ಬರೆಯಲಿರುವ ಈ ಪಾದಯಾತ್ರೆ ನಂತರ ಮುಂದಿನ 6 ತಿಂಗಳುಗಳಲ್ಲಿ 125 ಕ್ಷೇತ್ರಗಳಲ್ಲಿ ಸುಮಾರು 5000ಕ್ಕೂ ಅಧಿಕ ರಸ್ತೆ ಬದಿ ಸಭೆಗಳು, 125 ಸಾರ್ವಜನಿಕ ಬೃಹತ್ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ.

English summary
YSRC chief Y.S. Jagan Mohan Reddy's padayatra programme at Idupulapaya in Kadapa district. Mr Reddy would launch his 3,000 km-long Praja sankalp yatra from Idupulapaya to Ichapuram on November 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X