ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಫಾನ್ ಚಂಡಮಾರುತ: ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ, ಭೂಕುಸಿತ ಆತಂಕ

|
Google Oneindia Kannada News

ನವದೆಹಲಿ, ಮೇ.20: ಒಡಿಶಾದ ಭದ್ರಾಕ್ ಪ್ರದೇಶದಲ್ಲಿ ಬುಧವಾರ ಗುಡುಗು ಸರಿತ ಭಾರಿ ಮಳೆ ಆಗಲಿದ್ದು, ಭೂ ಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬಂಗಾಳಕೊಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿ ಅಂಫಾನ್ ಚಂಡ ಮಾರುತವು ಮುಂದಿನ 12 ಗಂಟೆಗಳಲ್ಲಿ ಪಶ್ಚಿಮ ಬಂಗಾಳದ ದಿಘಾ ಹಾಗೂ ಹಾಟಿಯ ಗಡಿಯನ್ನು ದಾಟಿ ಸುಂದರ್ ಬನ್ಸ್ ತಲುಪಲಿದೆ.

ಅಂಫಾನ್ ಚಂಡಮಾರುತ ಭೀತಿಯಲ್ಲಿ ಕರಾವಳಿ ಪ್ರದೇಶದ ಜನ ಶಿಫ್ಟ್!ಅಂಫಾನ್ ಚಂಡಮಾರುತ ಭೀತಿಯಲ್ಲಿ ಕರಾವಳಿ ಪ್ರದೇಶದ ಜನ ಶಿಫ್ಟ್!

ಒಡಿಶಾದ ಪಾರದೀಪ್ ನಿಂದ ಗಂಟೆಗೆ 210 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿರುವ ಅಂಫಾನ್ ಚಂಡಮಾರುತವು ಬುಧವಾರ ಸಂಜೆ ವೇಳೆಗೆ ಪಶ್ಚಿಮ ಬಂಗಾಳ ಗಡಿ ದಾಟಿ ಬಾಂಗ್ಲಾದೇಶಕ್ಕೆ ತಲುಪಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

 Amphan Cyclone Threat: Rainfall, Strong Wind Makes Landfall In Odisha

ಭೂಕುಸಿತದ ಎಚ್ಚರಿಕೆಯ ಸಂದೇಶ:

ಅಂಫಾನ್ ಚಂಡಮಾರುತದ ಬಿರುಗಾಳಿಯ ವೇಗವು 155-165 ಆಗಿದ್ದು ಭಾರಿ ಮಳೆಯ ಜೊತೆಗೆ ಬಿರುಗಾಳಿ ಬೀಸುವ ಅಪಾಯವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ ಮಂಗಳವಾರ ಚಂಡಮಾರುತದಿಂದ ಒಡಿಶಾದ ಜಗತ್ ಸಿಂಗ್ ಪುರ್, ಭದ್ರಕ್, ಕೇಂದ್ರಪಾದ್, ಬಾಲಸೋರ್ ಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಕರಾವಳಿ ಪ್ರದೇಶದ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಜನರ ಸ್ಥಳಾಂತರ:

ಪಶ್ಚಿಮ ಬಂಗಾಳದ ಸುಂದರ್ ಬನ್ಸ್ ಮತ್ತು ದಿಘಾ ಕರಾವಳಿ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದ ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 45 ತಂಡಗಳನ್ನು ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ನಿಯೋಜನೆ ಮಾಡಲಾಗಿದೆ.

English summary
Amphan Cyclone Threat: Rainfall, Strong Wind Makes Landfall In Odisha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X