ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರಲ್ಲಿ ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ನಡೆದ ಅಪರಾಧ ಪ್ರಕರಣಗಳೆಷ್ಟು?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 16: ದೇಶಾದ್ಯಂತ ಕೊರೊನಾ ಸೋಂಕಿನಿಂದಾಗಿ ಲಾಕ್‌ಡೌನ್ ವಿಧಿಸಿದ್ದರೂ ಬೆಂಗಳೂರು ಸೇರಿದಂತೆ ಹಲವು ಮೆಟ್ರೋಪಾಲಿಟನ್ ನಗರಗಳಲ್ಲಿ ಅಪರಾಧಗಳು ಎಷ್ಟು ನಡೆದಿವೆ ಎಂಬ ಮಾಹಿತಿಯನ್ನು ನಾವು ಇಲ್ಲಿ ನಿಮಗೆ ನೀಡಲಿದ್ದೇವೆ.

ಲಾಕ್‌ಡೌನ್‌ನಿಂದಾಗಿ ಅಪರಾಧ ಪ್ರಕರಣಗಳು ಕೊಂಚ ಕಡಿಮೆ ಇದ್ದರೂ ಕೂಡ ಸಂಖ್ಯೆ ದೊಡ್ಡದೇ ಇದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿರುವ ದತ್ತಾಂಶಗಳ ಪ್ರಕಾರ ದೆಹಲಿಯಲ್ಲಿ ಭಾರತೀಯ ದಂಡಸಂಹಿತೆ ಅಡಿಯಲ್ಲಿ ದಾಖಳಾದ ಪ್ರಕರಣಗಳ ಸಂಖ್ಯೆ 2019 ಹಾಗೂ 2020ರ ನಡುವೆ ಶೇ.18ರಷ್ಟು ಕುಸಿದಿದೆ.

5 ವರ್ಷದಿಂದ ಪೊಲೀಸರಿಗೆ ಯಾಮಾರಿಸಿದ್ದ ಮೂವರು ಸರಗಳ್ಳರು ಸಿಸಿಬಿ ಬಲೆಗೆ5 ವರ್ಷದಿಂದ ಪೊಲೀಸರಿಗೆ ಯಾಮಾರಿಸಿದ್ದ ಮೂವರು ಸರಗಳ್ಳರು ಸಿಸಿಬಿ ಬಲೆಗೆ

ಕಳೆದ ವರ್ಷ 2.4 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಅಥವಾ ದಿನಕ್ಕೆ 650ಕ್ಕೂ ಹೆಚ್ಚು ಪ್ರಕರಣಗಳು ದೆಹಲಿ ಪೊಲೀಸರು ದಾಖಲಿಸಿಕೊಂಡಿದ್ದರು. ಇದರ ನಡುವೆ ಬೆಂಗಳೂರಿನಲ್ಲಿ ಕಳೆದ ವರ್ಷ 19,964 ಪ್ರಕರಣಗಳು ಹಾಗೂ ಮುಂಬೈನಲ್ಲಿ 50 ಸಾವಿರ ಪ್ರಕರಣಗಳು ದಾಖಲಾಗಿವೆ.

Among 19 Metro Cities, Crime Rate In Delhi Highest In 2020

ಒಟ್ಟು 472 ಕೊಲೆ ಪ್ರರಕಣಗಳು ದಾಖಲಾಗಿದ್ದು, ಪ್ರೇಮ ಪ್ರಕರಣ ಮತ್ತು ಆಸ್ತಿ ವಿವಾದವು ಸಾಮಾನ್ಯ ಉದ್ದೇಶಗಳಾಗಿವೆ. 2019ರಲ್ಲಿ 521 ಪ್ರಕರಣಗಳು ದಾಖಲಾಗಿವೆ. ಎನ್‌ಸಿಆರ್‌ಬಿ ದತ್ತಾಂಶವು 2019ರಲ್ಲಿ 5900 ರಿಂದ 2020 ರಲ್ಲಿ 4062 ಅಪಹರಣ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 3 ಸಾವಿರಕ್ಕಿಂತಲೂ ಹೆಚ್ಚು ಪ್ರಕರಣಗಳಲ್ಲಿ 12 ರಿಂದ 18 ವರ್ಷದೊಳಗಿನವರು ಸಂತ್ರಸ್ತರಾಗಿದ್ದಾರೆ.

ಮಾಹಿತಿ ಪ್ರಕಾರ, ದೆಹಲಿ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ನಗರವಾಗಿದೆ, ಕಳೆದ ವರ್ಷ ರಾಷ್ಟ್ರ ರಾಜಧಾನಿಯಲ್ಲಿ 10,093ಕ್ಕೂ ಹೆಚ್ಚು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ದಾಖಲಾಗಿವೆ. ಮುಂಬೈ, ಪುಣೆ, ಗಾಜಿಯಾಬಾದ್, ಬೆಂಗಳೂರು ಅಥವಾ ಇಂದೋರ್‌ನಲ್ಲಿ ದಾಖಲಾದ ಪ್ರಕರಣಗಳಿಗಿಂತ ಎರಡು ಪಟ್ಟು ಹೆಚ್ಚು.

2018ರಲ್ಲಿ 13,640 ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ದೆಹಲಿಯಲ್ಲಿ ದಾಖಲಾಗಿದ್ದು, 2019ರಲ್ಲಿ ಈ ಸಂಖ್ಯೆ 300ರಷ್ಟು ಕಡಿಮೆಯಾಗಿದೆ. 997 ಅತ್ಯಾಚಾರ, 110 ವರದಕ್ಷಿಣೆ ಸಾವು,1840 ಹಲ್ಲೆ, 326 ಕಿರುಕುಳ ಪ್ರಕರಣಗಳು ಪತ್ತೆಯಾಗಿವೆ.

ನಡು ರಸ್ತೆಯಲ್ಲಿ ವ್ಯಕ್ತಿ ಮೇಲೆ ದಾಳಿ ಮಾಡಿದ್ದ ರೌಡಿ 'ಚಿನಾಲ್' ಗೆ ಬುದ್ಧಿ ಕಲಿಸಿದ ಪೊಲೀಸರುನಡು ರಸ್ತೆಯಲ್ಲಿ ವ್ಯಕ್ತಿ ಮೇಲೆ ದಾಳಿ ಮಾಡಿದ್ದ ರೌಡಿ 'ಚಿನಾಲ್' ಗೆ ಬುದ್ಧಿ ಕಲಿಸಿದ ಪೊಲೀಸರು

ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು: ಬೆಂಗಳೂರಿನಲ್ಲಿ 2018ರಲ್ಲಿ 3427, 2019ರಲ್ಲಿ 3486, 2020ರಲ್ಲಿ 2730 ಪ್ರಕರಣಗಳು ವರದಿಯಾಗಿವೆ. ದೆಹಲಿಯಲ್ಲಿ 2018ರಲ್ಲಿ 11,724, 2019ರಲ್ಲಿ 12,902, 2020ರಲ್ಲಿ 9782 ಪ್ರಕರಣಗಳು ಪತ್ತೆಯಾಗಿವೆ. ಇನ್ನು ಮುಂಬೈನಲ್ಲಿ 2018ರಲ್ಲಿ 6058, 2019ರಲ್ಲಿ 6519, 2020ರಲ್ಲಿ 483 ಅಪರಾಧ ಪ್ರಕರಣಗಳು ವರದಿಯಾಗಿವೆ.

ಜಗತ್ತಿನಲ್ಲೇ ಅತ್ಯಧಿಕ ಪ್ರಮಾಣದ ಕೊರೊನಾ ಸಂಬಂಧಿ ತಪ್ಪು ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಉತ್ಪಾದಿಸಿದ ರಾಷ್ಟ್ರ ಎನ್ನುವ ಕುಖ್ಯಾತಿಗೆ ಭಾರತ ಒಳಗಾಗಿದೆ. ನೂತನ ಅಧ್ಯಯನದಿಂದ ಈ ಸಂಗತಿ ಬಹಿರಂಗವಾಗಿದೆ.

ಅತಿ ಹೆಚ್ಚು ಮಂದಿ ಇಂಟರ್ನೆಟ್ ಬಳಕೆದಾರರಿದ್ದು, ಇಂಟರ್ನೆಟ್ ಬಳಕೆದಾರರಲ್ಲಿ ಇಂಟರ್ನೆಟ್ ಸಾಕ್ಷರತೆ ಕಡಿಮೆ ಪ್ರಮಾಣದಲ್ಲಿರುವುದು ಕೂಡಾ ಕೊರೊನಾ ಸಂಬಂಧಿ ತಪ್ಪು ಮಾಹಿತಿಗಳು ಹರಿದಾಡಲು ಪ್ರಮುಖ ಕಾರಣ ಎಂದು ಸಂಶೋಧಕರು ಗುರುತಿಸಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ದತ್ತಾಂಶಗಳ ಪ್ರಕಾರ, ಬೆಂಗಳೂರು, ಮುಂಬೈ ಸೇರಿದಂತೆ ಇತರೆ ಮಹಾ ನಗರಗಳಿಗಿಂತಲೂ ದೆಹಲಿಯಲ್ಲಿ ಹೆಚ್ಚು ಪ್ರಕರಣ ದಾಖಲಾಗಿದ್ದು ಮಹಿಳೆಯರ ಸುರಕ್ಷಿತೆಯನ್ನು ಪ್ರಶ್ನೆ ಮಾಡುವಂತಾಗಿದೆ.

2019 ಮತ್ತು 2020 ರ ನಡುವೆ ಶೇ.18 ರಷ್ಟು ಪ್ರಕರಣಗಳು ಕೊರೊನಾ ಮತ್ತು ಲಾಕ್ಡೌನ್ ನಿಂದ ಕುಸಿದಿದ್ದರೂ 2020 ರಲ್ಲಿ ಒಟ್ಟು 2.4 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದಿನವೊಂದಕ್ಕೆ 650 ಕ್ಕೂ ಹೆಚ್ಚು ಪ್ರಕರಣಗಳನ್ನು ದೆಹಲಿ ಪೊಲೀಸರು ದಾಖಲಿಸಿದ್ದಾರೆ.

ದೆಹಲಿಯಲ್ಲಿ 2019 ರಲ್ಲಿ 5901 ಕಿಡ್ಯಾಪ್ ಪ್ರಕರಣಗಳು ದಾಖಲಾದರೆ 2020 ರಲ್ಲಿ 4062 ಪ್ರಕರಣಗಳು ದಾಖಲಾಗಿದೆ, 2019 ರಲ್ಲಿ 13395 ಮಹಿಳೆಯರ ಮೇಲೆ ದೌರ್ಜನ್ಯ ಆದ್ರೆ 2020 ರಲ್ಲಿ 10,093 ಪ್ರಕರಣಗಳು ದಾಖಲಾಗಿದೆ, 2019 ರಲ್ಲಿ 521 ಮಹಿಳೆಯರ ಕೊಲೆಯಾದರೆ 2020 ರಲ್ಲಿ 472 ಮಹಿಳೆಯರ ಕೊಲೆಯಾಗಿದೆ.

ಕಳೆದ ವರ್ಷ ರಾಷ್ಟ್ರ ರಾಜಧಾನಿಯಲ್ಲಿ 10,093 ಕ್ಕೂ ಹೆಚ್ಚು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ದಾಖಲಾಗಿವೆ. ಮುಂಬೈ, ಪುಣೆ, ಗಾಜಿಯಾಬಾದ್, ಬೆಂಗಳೂರು ಅಥವಾ ಇಂದೋರ್ ನಲ್ಲಿ ದಾಖಲಾದ ಪ್ರಕರಣಗಳಿಗಿಂತ ಎರಡು ಪಟ್ಟು ಹೆಚ್ಚು ದೆಹಲಿಯಲ್ಲಿ ದಾಖಲಾಗಿದೆ.

138 ದೇಶಗಳಲ್ಲಿ ಈ ಬಗ್ಗೆ ಸಂಶೋಧನೆ ನಡೆಸಲಾಗಿತ್ತು. ಜಗತ್ತಿನಲ್ಲಿಯೇ ಹರಿದಾಡಿದ ಕೊರೊನಾ ತಪ್ಪು ಮಾಹಿತಿ ಒಟ್ಟು ಪ್ರಮಾಣದಲ್ಲಿ ಭಾರತದ ಪಾಲು ಶೇ.18.07. ನಂತರದ ಮೂರು ಸ್ಥಾನಗಳಲ್ಲಿ ಅಮೆರಿಕ(ಶೇ.9.74), ಬ್ರೆಜಿಲ್(8.57) ಮತ್ತು ಸ್ಪೇನ್(8.03) ದೇಶಗಳಿವೆ.

ತಮಗೆ ಬಂದ ಎಲ್ಲಾ ಫಾರ್ವರ್ಡ್ ಸಂದೇಶಗಳ ಅಸಲೀಯತ್ತನ್ನು ಪರೀಕ್ಷಿಸದೆ ತಮ್ಮ ಕಾಂಟ್ಯಾಕ್ಟ್ ಲಿಸ್ಟಿನಲ್ಲಿದ್ದವರಿಗೆ ಫಾರ್ವರ್ಡ್ ಮಾಡುವ ಪದ್ಧತಿ ನಮ್ಮಲ್ಲಿ ಅನೂಚಾನವಾಗಿ ನಡೆಯುತ್ತಲೇ ಬಂದಿದೆ. ಸುಳ್ಳು ಸುದ್ದಿಗಳು ಹಬ್ಬಲು ಇದೂ ಕಾರಣ.

English summary
For the second consecutive year in 2020, Delhi reported the maximum crime rate among 19 metropolitan cities with more than 2 million population, according to the latest National Crime Records Bureau report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X