ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತಾಬ್ ಬಚ್ಚನ್ ಟ್ವಿಟ್ಟರ್‌ ಖಾತೆಯಿಂದ ದೇಶಕ್ಕೆ ಬೆದರಿಕೆ ಸಂದೇಶ!

|
Google Oneindia Kannada News

ಮುಂಬೈ, ಜೂನ್ 11: ಬಾಲಿವುಡ್ ಸ್ಟಾರ್ ನಟ ಅಮಿತಾಬ್ ಬಚ್ಚನ್ ಅವರ ಟ್ವಿಟ್ಟರ್ ಖಾತೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಚಿತ್ರ ಹಠಾತ್ತನೆ ಪ್ರತ್ಯಕ್ಷವಾಗಿದೆ.

ಹೌದು, ಅಮಿತಾಬ್ ಬಚ್ಚನ್ ಅವರ ಟ್ವಿಟ್ಟರ್ ಖಾತೆ (SrBachchan) ಯ ಪ್ರೊಫೈಲ್ ಪಿಕ್ಚರ್‌ ನಲ್ಲಿ ಅಮಿತಾಬ್ ಬಚ್ಚನ್ ಅವರ ಚಿತ್ರ ಹೋಗಿ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಚಿತ್ರ ಪ್ರತ್ಯಕ್ಷವಾಗಿತ್ತು. ಅಲ್ಲದೆ ಬೆದರಿಕೆ ಸಂದೇಶವೂ ಒಂದು ಅಮಿತಾಬ್ ಅವರ ಖಾತೆಯಿಂದ ಟ್ವೀಟ್ ಆಗಿದ್ದು ಆತಂಕ ತಂದಿದೆ.

ಅಯಿಲ್‌ದಿಶ್‌ ಟಿಮ್ ತುರ್ಕಿಶ್ ಸೈಬರ್ ಆರ್ಮಿ ಎಂದು ಕರೆದುಕೊಳ್ಳುವ ಹ್ಯಾಕರ್ ತಂಡವೊಂದು ಅಮಿತಾಬ್ ಬಚ್ಚನ್ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿದ್ದು, ಸಂದೇಶವೊಂದನ್ನು ಟ್ವೀಟ್ ಮಾಡಿದೆ.

ದೊಡ್ಡ ಸೈಬರ್ ದಾಳಿಯ ಎಚ್ಚರಿಕೆ

ದೊಡ್ಡ ಸೈಬರ್ ದಾಳಿಯ ಎಚ್ಚರಿಕೆ

'ಇದು ಇಡೀಯ ಪ್ರಪಂಚಕ್ಕೆ ಎಚ್ಚರಿಕೆ ಸಂದೇಶ, ಐಸ್‌ಲೆಂಡ್ ರಿಪಬ್ಲಿಕ್ಸ್‌ ತುರ್ಕಿಶ್ ಫುಟ್‌ಬಾಲರ್‌ಗಳ ಜೊತೆ ಅಗೌರವದಿಂದ ನಡೆದುಕೊಂಡಿರುವುದನ್ನು ನಾವು ಖಂಡಿಸುತ್ತೇವೆ, ನಾವು ಮೃದುವಾಗಿ ಮಾತನಾಡುತ್ತೇವೆ, ಆದರೆ ಜೊತೆಯಲ್ಲಿ ಸದಾ ದೊಣ್ಣೆ ಇಟ್ಟುಕೊಂಡು ಓಡಾಡುತ್ತೇವೆ, ದೊಡ್ಡ ಸೈಬರ್ ಹ್ಯಾಕ್ ಬಗ್ಗೆ ಮುನ್ನೆಚ್ಚರಿಕೆಯಾಗಿ ಈ ಹ್ಯಾಕ್ ಮಾಡಿ ಸಂದೇಶ ನೀಡಿದ್ದೇವೆ ಎಂದು ಹ್ಯಾಕರ್‌ಗಳು ಎಚ್ಚರಿಕೆ ನೀಡಿದ್ದಾರೆ.

ಇಮ್ರಾನ್ ಖಾನ್ ಚಿತ್ರ, ಪಾಕ್ ಪರ ಸಂದೇಶ

ಇಮ್ರಾನ್ ಖಾನ್ ಚಿತ್ರ, ಪಾಕ್ ಪರ ಸಂದೇಶ

ಸಂದೇಶ ಮಾತ್ರವಲ್ಲದೆ, ಅಮಿತಾಬ್ ಬಚ್ಚನ್ ಅವರ ಟ್ವಿಟ್ಟರ್ ಖಾತೆಯಿಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಚಿತ್ರ ಪ್ರಕಟಿಸಿ, ಲವ್ ಪಾಕಿಸ್ತಾನ ಎಂದು ಬರೆಯಲಾಗಿದೆ. ಜೊತೆಗೆ ಚೀನಾ ಮತ್ತು ಪಾಕಿಸ್ತಾನದ ಧ್ವಜ ಹಾರುತ್ತಿರುವ ಚಿತ್ರವನ್ನೂ ಸಹ ಅಮಿತಾಬ್ ಬಚ್ಚನ್ ಅವರ ಖಾತೆಯಿಂದ ಟ್ವೀಟ್‌ ಮಾಡಲಾಗಿದೆ.

ಒಂದು ಗಂಟೆ ಬಳಿಕ ಡಿಲೀಟ್

ಒಂದು ಗಂಟೆ ಬಳಿಕ ಡಿಲೀಟ್

ಚಿತ್ರಗಳು ಪ್ರಕಟವಾದ ಒಂದು ಗಂಟೆ ಬಳಿಕ ಅಮಿತಾಬ್ ಅವರ ಖಾತೆಯಿಂದ ಟ್ವೀಟ್ ಆಗಿದ್ದ ಚಿತ್ರಗಳನ್ನು ತೆಗೆಯಲಾಗಿದೆ. ಪ್ರಸ್ತುತ ಅಮಿತಾಬ್ ಅವರ ಟ್ವಿಟ್ಟರ್ ಖಾತೆಯಲ್ಲಿ ಪ್ರೊಫೈಲ್ ಚಿತ್ರ ಇಲ್ಲ. ಜೊತೆಗೆ ಸೈಬರ್ ದಾಳಿ ಬಗ್ಗೆ ಅಮಿತಾಬ್ ಬಚ್ಚನ್ ಮುಂಬೈ ಪೊಲೀಸರಿಗೆ ದೂರು ಸಹ ನೀಡಿದ್ದಾರೆ.

2015 ರಲ್ಲೂ ಖಾತೆ ಹೀಗೆಯೇ ಆಗಿತ್ತು

2015 ರಲ್ಲೂ ಖಾತೆ ಹೀಗೆಯೇ ಆಗಿತ್ತು

2015 ರಲ್ಲಿ ಸಹ ಅಮಿತಾಬ್ ಬಚ್ಚನ್ ಅವರ ಖಾತೆ ಹ್ಯಾಕ್ ಆಗಿತ್ತು, ಆಗ ಹ್ಯಾಕರ್‌ಗಳು ಟ್ವಿಟ್ಟರ್ ಖಾತೆಗೆ ಪಾರ್ನ್ ಸೈಟ್‌ಗಳನ್ನು ಸೇರಿಸಿಬಿಟ್ಟಿದ್ದರು. ಅದೇ ಸಮಯದಲ್ಲಿ ಅವರ ಮಗ ಅಭಿಶೇಕ್ ಬಚ್ಚನ್ ಅವರ ಟ್ವಿಟ್ಟರ್ ಖಾತೆ ಸಹ ಹ್ಯಾಕ್ ಆಗಿತ್ತು.

English summary
Actor Amithabh Bachchan's twitter account is hacked and tweeted Pakistan prime minister Imran Khan's photo. Also hackers gave threat message through Amithabh Bachchan's account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X