ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಡಿಎ ನಾಯಕರ ಜೊತೆ ಮೇ 21ರಂದು ಅಮಿತ್ ಶಾ ಭೋಜನ ಕೂಟ

|
Google Oneindia Kannada News

ಬೆಂಗಳೂರು, ಮೇ 20 : ಲೋಕಸಭಾ ಚುನಾವಣೆ 2019ರ ಚುನಾವಣೋತ್ತರ ಸಮೀಕ್ಷೆ ಬಿಜೆಪಿಯಲ್ಲಿ ಉತ್ಸಾಹ ಹೆಚ್ಚಿಸಿದೆ. ಬಹುತೇಕ ಸಮೀಕ್ಷೆಗಳು ಎನ್‌ಡಿಎ ಮತ್ತೆ ಸರ್ಕಾರ ರಚನೆ ಮಾಡಲಿವೆ ಎಂದು ಹೇಳಿದೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮೇ 21ರಂದು ಎನ್‌ಡಿಎ ಮೈತ್ರಿಕೂಟದ ನಾಯಕರಿಗೆ ಭೋಜನ ಕೂಟ ಆಯೋಜನೆ ಮಾಡಿದ್ದಾರೆ. ಹಲವಾರು ಕೇಂದ್ರ ಸಚಿವರು ಸಹ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಮೇ 21ಕ್ಕೆ ಮಹತ್ವದ ಸಭೆ ಕರೆದ ಎಚ್.ಡಿ.ದೇವೇಗೌಡರು!ಮೇ 21ಕ್ಕೆ ಮಹತ್ವದ ಸಭೆ ಕರೆದ ಎಚ್.ಡಿ.ದೇವೇಗೌಡರು!

ಭಾನುವಾರ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎನ್‌ಡಿಎ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯಬಹುದು ಎಂಬ ಫಲಿತಾಂಶ ಬಂದಿದೆ. ಆದ್ದರಿಂದ, ಅಮಿತ್ ಶಾ ಅವರು ಎನ್‌ಡಿಎ ನಾಯಕರ ಸಭೆಯನ್ನು ಕರೆದಿದ್ದಾರೆ.

ಕಾಂಗ್ರೆಸ್ ಈಗ ಅಧಿಕಾರದಲ್ಲಿರುವ 3 ರಾಜ್ಯಗಳಲ್ಲಿ ಹೀನಾಯ ಸೋಲು?ಕಾಂಗ್ರೆಸ್ ಈಗ ಅಧಿಕಾರದಲ್ಲಿರುವ 3 ರಾಜ್ಯಗಳಲ್ಲಿ ಹೀನಾಯ ಸೋಲು?

NDA leaders

ಮತ್ತೊಂದು ಕಡೆ ಮೇ 23ರಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮೈತ್ರಿಕೂಟ ನಾಯಕರ ಸಭೆ ಕರೆದಿದ್ದಾರೆ. ಅದಕ್ಕೂ ಮೊದಲು ಅಮಿತ್ ಶಾ ಅವರು ಸಭೆ ಕರೆದಿದ್ದಾರೆ. ಮೇ 23ರ ಫಲಿತಾಂಶದ ಬಳಿಕದ ಬೆಳವಣಿಗೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಎಕ್ಸಿಟ್ ಪೋಲ್, ಇಂಡಿಯಾ ಟುಡೇ: ಮಮತಾ ಬ್ಯಾನರ್ಜಿಗೆ ಭಾರೀ ಮುಖಭಂಗಎಕ್ಸಿಟ್ ಪೋಲ್, ಇಂಡಿಯಾ ಟುಡೇ: ಮಮತಾ ಬ್ಯಾನರ್ಜಿಗೆ ಭಾರೀ ಮುಖಭಂಗ

ಇಂಡಿಯಾ ಟುಡೇ, ಚಾಣಾಕ್ಯ, ಸಿಎನ್‌ಎನ್ ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟ 300 ಸ್ಥಾನಗಳನ್ನುಗಳಿಸಬಹುದು ಎಂದು ಹೇಳಿವೆ. ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ತಕ್ಷಣ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ.

English summary
BJP president Amit Shah to host dinner for NDA leaders on May 21, 2019. Union Council of Ministers likely to meet ahead of Lok sabha elections result on Mat 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X