ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 17ರಂದು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಅಮಿತ್ ಶಾ ಸಭೆ

|
Google Oneindia Kannada News

ಶಿಲ್ಲಾಂಗ್, ಜುಲೈ 10:ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜುಲೈ 17ರಂದು ಸಭೆ ನಡೆಸಲಿದ್ದಾರೆ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಮಿತ್ ಶಾ ಅಂತಾರಾಜ್ಯ ಗಡಿ ವಿವಾದಗಳ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

50 ವರ್ಷಗಳಿಂದ ಗಡಿ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ನಮಗೆ ಸಾಧ್ಯವಾಗಲಿಲ್ಲ, ಪ್ರಸ್ತುತ, ಈಶಾನ್ಯದ ರಾಜ್ಯಗಳಲ್ಲಿ ರಾಜಕೀಯ ತಿಳುವಳಿಕೆ ಇದೆ. ನಾವು ಈ ವಿಷಯವನ್ನು ಉನ್ನತ ಮಟ್ಟದಲ್ಲಿ ಚರ್ಚಿಸಬಹುದು ಎಂದು ಸಂಗ್ಮಾ ಹೇಳಿದರು.

Amit Shah To Chair Meeting with CMs of Northeastern States On July 17

ಅಮಿತ್ ಶಾ ಅವರು 2 ದಿನಗಳ ಭೇಟಿಗಾಗಿ ಮೇಘಾಲಯಕ್ಕೆ ಆಗಮಿಸಲಿದ್ದಾರೆ. ಇಲ್ಲಿಗೆ ಸಮೀಪವಿರುವ ಈಶಾನ್ಯ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ(ಎನ್‌ಇಎಸಿ) ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ ಎಂದು ಸಂಗ್ಮಾ ಹೇಳಿದರು.

ಕೇಂದ್ರ ಸಂಪುಟ ವಿಸ್ತರಣೆ: ದಕ್ಷಿಣದ ಪ್ರಾದೇಶಿಕ ಪಕ್ಷ ಸೆಳೆಯುವ ಅಮಿತ್ ಶಾ ಪ್ರಯತ್ನ ವಿಫಲಕೇಂದ್ರ ಸಂಪುಟ ವಿಸ್ತರಣೆ: ದಕ್ಷಿಣದ ಪ್ರಾದೇಶಿಕ ಪಕ್ಷ ಸೆಳೆಯುವ ಅಮಿತ್ ಶಾ ಪ್ರಯತ್ನ ವಿಫಲ

ಕೇಂದ್ರ ಸಚಿವರು ರಾಜ್ಯದಲ್ಲಿ ಕೆಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು. ಸಭೆಯಲ್ಲಿ ಮುಖ್ಯಮಂತ್ರಿಗಳ ಜೊತೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು ಭಾಗವಹಿಸಲಿದ್ದಾರೆ ಎಂದರು.

ಜುಲೈ 17ರಂದು ತಾತ್ಕಾಲಿಕವಾಗಿ ಇಲ್ಲಿನ ಕನ್ವೆನ್ಷನ್ ಹಾಲ್‌ನಲ್ಲಿ ಈಶಾನ್ಯ ರಾಜ್ಯಗಳ ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಸಭೆಯ ಅಧ್ಯಕ್ಷತೆ ವಹಿಸುವುದಾಗಿ ಕೇಂದ್ರ ಗೃಹ ಸಚಿವರು ತಮಗೆ ಮಾಹಿತಿ ನೀಡಿದ್ದಾರೆ ಎಂದು ಸಂಗ್ಮಾ ಸುದ್ದಿಗಾರರಿಗೆ ತಿಳಿಸಿದರು.

ಆಗಸ್ಟ್ 15ರ 75ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ರಾಜ್ಯಗಳ ನಡುವಿನ ಅಂತರರಾಜ್ಯ ಸಮಸ್ಯೆಗಳನ್ನು ಬಗೆಹರಿಸಬೇಕೆಂಬುದು ಕೇಂದ್ರದ ಉದ್ದೇಶವಾಗಿದೆ ಎಂದು ಸಂಗ್ಮಾ ಹೇಳಿದರು.

English summary
Union Home Minister Amit Shah will chair a meeting with CMs of northeast states on July 17, during which he is likely to take up the matter of interstate border disputes among other issues, Meghalaya Chief Minister Conrad K Sangma said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X