ಪ್ರಶಾಂತ್ ಕಿಶೋರ್ ವಿರುದ್ಧ ಸೇಡು ತೀರಿಸಿಕೊಂಡ ಅಮಿತ್ ಶಾ

Posted By:
Subscribe to Oneindia Kannada

2014ರಲ್ಲಿ ದೇಶದೆಲ್ಲೆಡೆ ಮೋದಿ ಅಲೆ ಏಳುವಂತೆ ಮಾಡಿದ್ದ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಅವರು ನಂತರ ಬಿಜೆಪಿ ತೊರೆದು ಬಿಹಾರದಲ್ಲಿ ಬಿಜೆಪಿ ವಿರುದ್ಧ ಕಾರ್ಯನಿರ್ವಹಿಸಿದ್ದು ನೆನಪಿರಬಹುದು. ಬಿಹಾರದಲ್ಲಿ ಉಂಟಾದ ಸೋಲಿನ ಸೇಡನ್ನು ಬಿಜೆಪಿಯ 'ಚಾಣಕ್ಷ' ಅಮಿತಾ ಶಾ ಅವರು ಇಂದು ಉತ್ತರಪ್ರದೇಶದಲ್ಲಿ ತೀರಿಸಿಕೊಂಡಿದ್ದಾರೆ.[ಉತ್ತರಪ್ರದೇಶದಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ 10 ಕಾರಣ]

ಮೋದಿ ಗೆಲ್ಲಿಸಲು 'ಚಾಯ್ ಪೇ ಚರ್ಚಾ', ನಿತೀಶ್ ಗೆಲುವಿಗೆ 'ಸಾರಾಯಿ ಮುಕ್ತ' ಮಂತ್ರ ಜಪಿಸಿದ್ದ ಪ್ರಶಾಂತ್ ಕಿಶೋರ್, ಉತ್ತರಪ್ರದೇಶ ಜಾತಿ ಸಂಕೀರ್ಣತೆಯ ಮರ್ಮ ಅರಿಯದೆ 'ಮೇಲ್ವರ್ಗದ ಸಿಎಂ' ಎಂದು ಬ್ರಾಹ್ಮಣರಿಗೆ ಮಣೆ ಹಾಕಲು ಹೋಗಿ ಮಗಚಿ ಬಿದ್ದರು. [ಬಿಜೆಪಿ ಭರ್ಜರಿ ಜಯದ ಹಿಂದೆ ಅಮಿತ್ ಶಾ ತಂತ್ರಗಾರಿಕೆ ಹೀಗಿತ್ತು!]

ಈ ಬಾರಿ ಅಪನಗದೀಕರಣ, ಸರ್ಜಿಕಲ್ ಸ್ಟ್ರೈಕ್, ಮೀಸಲಾತಿ ಹೋರಾಟದ ನಡುವೆ ಮೋದಿ ಬ್ರ್ಯಾಂಡ್ ಮಂಕಾಗುವ ನಿರೀಕ್ಷೆಗಳಿತ್ತು. ಆದರೆ, ಎಲ್ಲಾ ದಾಖಲೆಗಳನ್ನು ಅಳಿಸಿ ಮುನ್ನುಗ್ಗಿದೆ. [ಉತ್ತರಪ್ರದೇಶದಲ್ಲಿ ಕೇಸರಿ ರಂಗು, ಇದು ಮೋದಿ ಬ್ರ್ಯಾಂಡ್ ಮ್ಯಾಜಿಕ್]

Live :ಗೋವಾ | ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್

ಒಬಿಸಿ ಮತಗಳು, ಅಖಿಲೇಶ್ ಸರ್ಕಾರ ಮರೆತ ಬುಡಕಟ್ಟು ಜನಾಂಗ, ಜಾತಿ, ಮತ ಪಂಥಗಳ ಓಲೈಕೆ ಮೂಲಕ ಬಿಜೆಪಿ ಶೇ 57ರಷ್ಟು ಕುರ್ಮಿ, ಶೇ 63ರಷ್ಟು ಲೋಧ್, ಶೇ 60 ರಷ್ಟು ಇತತೆ ಒಬಿಸಿ ಮತಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿತು. ಅಖಿಲೇಶ್ ರಂತೆ ಪ್ರಶಾಂತ್ ಕೂಡಾ ಈ ವರ್ಗವನ್ನು ಕಡೆಗಣಿಸಿದ್ದಕ್ಕೆ ಭಾರಿ ಬೆಲೆ ತೆರಬೇಕಾಯಿತು. ಕೊನೆಯ ನಗು ಅಮಿತ್ ಶಾ ಪಾಲಾಯಿತು.[ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿರುಗಾಳಿ ಎಬ್ಬಿಸಿದ ಮೋದಿ 9 ಹೇಳಿಕೆ]

ರಾಹುಲ್ ಅಭ್ಯರ್ಥಿಯಾಗಿ ಪ್ರಶಾಂತ್

ರಾಹುಲ್ ಅಭ್ಯರ್ಥಿಯಾಗಿ ಪ್ರಶಾಂತ್

ರಾಹುಲ್ ಗಾಂಧಿ ಅವರ ಪ್ರಚಾರದ ತಂತ್ರಗಾರಿಕೆ ರೂಪಿಸಿದ್ದ ಪ್ರಶಾಂತ್ ಕಿಶೋರ್ ಗೆ ಅಖಿಲೇಶ್ ಮುಂದೆ ರಾಹುಲ್ ಡಮ್ಮಿಯಾಗುವುದನ್ನು ಕಂಡು, ಮೈತ್ರಿ ಆಫರ್ ನೀಡಿದರು. ಮೈತ್ರಿಗೆ ಹಿರಿಯ ನಾಯಕರ ವಿರೋಧವಿದ್ದರೂ ರಾಹುಲ್, ಪ್ರಿಯಾಂಕಾ ಒತ್ತಡಕ್ಕೆ ಪ್ರಶಾಂತ್ ಅವರು ಮೈತ್ರಿ ಸಾಧಿಸಿದರೂ ಫಲ ನೀಡಲಿಲ್ಲ. ಅತ್ತ ಅಖಿಲೇಶ್ ಅವರ ತಂತ್ರಗಾರಿಕೆಗೂ ಸೋಲುಂಟಾಯಿತು. ಅತಿಯಾದ ಆತ್ಮವಿಶ್ವಾಸಕ್ಕೆ ಬೆಲೆ ತೆರಬೇಕಾಯಿತು.

ತಿರುಗುಬಾಣವಾದ ತಂತ್ರಗಾರಿಕೆ

ತಿರುಗುಬಾಣವಾದ ತಂತ್ರಗಾರಿಕೆ

ಕಾಂಗ್ರೆಸ್ ಎಂದರೆ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪಕ್ಷ ಎನ್ನುವ ಟ್ಯಾಗ್ ಕಳಚಲು ಪ್ರಶಾಂತ್ ಕಿಶೋರ್ ಅವರು ಮಾಡಿದ ತಂತ್ರಗಾರಿಕೆ ತಿರಗುಬಾಣವಾಯಿತು. ಬ್ರಾಹ್ಮಣ ಸಮುದಾಯ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಬೇಕೆಂದು ಸಲಹೆ ನೀಡಿದ್ದರು. ದೆಹಲಿಯಿಂದ ಶೀಲಾ ದೀಕ್ಷಿತ್ ರನ್ನು ಕರೆತರಲಾಯಿತು. ಕೊನೆ ಕೊನೆಗೆ ಪ್ರಿಯಾಂಕಾ ಗಾಂಧಿಯನ್ನು ಸಿಎಂ ಅಭ್ಯರ್ಥಿಯನ್ನಾಗಿ ಏಕೆ ಘೋಷಿಸಬಾರದು ಎಂಬ ಮಾತುಗಳು ಕೇಳಿ ಬಂದವು. ಈ ಬಗ್ಗೆ ಚಿಂತಿಸುವಷ್ಟರಲ್ಲಿ ಕಾಲ ಮೀರಿತ್ತು.

ಅಖಿಲೇಶ್ ಇಮೇಜ್ ಗೂ ಹಾನಿ

ಅಖಿಲೇಶ್ ಇಮೇಜ್ ಗೂ ಹಾನಿ

2012ರಿಂದ ಇಲ್ಲಿ ತನಕ ಉತ್ತರಪ್ರದೇಶದಲ್ಲಿ ಅಖಿಲೇಶ್ ಬೆಳೆಸಿಕೊಂಡು ಬಂದಿದ್ದ ಇಮೇಜ್ ಸಂಪೂರ್ಣವಾಗಿ ಮಣ್ಣು ಪಾಲಾಯಿತು. ಅಖಿಲೇಶ್ ಸರಕಾರದ ವಿವಿಧ ಯೋಜನೆಗಳಾದ ಸಮಾಜವಾದಿ ಪಿಂಚಣಿ ಯೋಜನೆ, ಕಾಮಧೇನು ಡೈರಿ ಯೋಜನೆ, ನೀರಾವರಿ ಯೋಜನೆ, 2017ರ ಚುನಾವಣೆ ನಂತರ ಸ್ಮಾರ್ಟ್ ಫೋನ್ ವಿತರಣೆ ಮುಂತಾದ ಯೋಜನೆಗಳನ್ನು ಮುಂದಿಟ್ಟುಕೊಂಡು ಬಿಲ್ಡಪ್ ಕೊಟ್ಟಿದ್ದ ಪ್ರೊಫೆಸರ್ ಸ್ಟೀವ್ ಜಾರ್ಡಿಂಗ್ ಅವರ ಪರಿಶ್ರಮವನ್ನು ರಾಹುಲ್ ಹಾಗೂ ಪ್ರಶಾಂತ್ ಜೋಡಿ ಹಾಳುಗೆಡವಿತು.

ನಿತೀಶ್ ಗೆಲ್ಲಿಸಿದ್ದ ಪ್ರಶಾಂತ್

ನಿತೀಶ್ ಗೆಲ್ಲಿಸಿದ್ದ ಪ್ರಶಾಂತ್

2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ಗೆಲುವು ತಂದುಕೊಟ್ಟ ಪ್ರಶಾಂತ್ ಗೆ ಉನ್ನತ ಹುದ್ದೆಯ ಆಸೆ ಇತ್ತಂತೆ. ಆದರೆ, ಇದಕ್ಕೆ ಅಮಿತ್ ಶಾ ಆಸ್ಪದ ನೀಡದ ಕಾರಣ ಅವರು ನಿತೀಶ್ ಹಾಗೂ ಮಹಾಮೈತ್ರಿಕೂಟ ಪರ ನಿಂತು ಶಾ ವಿರುದ್ಧ ಸೇಡು ತೀರಿಸಿಕೊಂಡಿದ್ದರು. ಶಾ ತಂತ್ರ ಎಲ್ಲವೂ ನೆಲಕಚ್ಚಿ, ಸಾರಾಯಿ ಮುಕ್ತ ಬಿಹಾರದ ಕನಸಿಗೆ ಜನ ಮತ ಹಾಕಿದರು. ಈಗ ಮೇಲ್ವರ್ಗದ ಓಲೈಕೆಗೆ ನಿಂತ ಪ್ರಶಾಂತ್ ಗೆ ಒಬಿಸಿ ಮಂತ್ರದ ಮೂಲಕ ಮಣಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Amit Shah takes revenge of Bihar Election : Prashanth Kishor (PK) an Indian political strategist and advisor to Chief Minister of Bihar defeated in Uttar Pradesh
Please Wait while comments are loading...