ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ವಿಸ್ತರಣೆ; ಸಿಎಂಗಳ ಅಭಿಪ್ರಾಯ ಕೇಳಿದ ಅಮಿತ್ ಶಾ

|
Google Oneindia Kannada News

ನವದೆಹಲಿ, ಮೇ 28 : ಕೊರೊನಾ ವೈರಸ್ ಸೋಂಕು ಹರಡದಂತೆ ಜಾರಿಗೊಳಿಸಿರುವ 4ನೇ ಹಂತದ ಲಾಕ್ ಡೌನ್ ಮೇ 31ರಂದು ಅಂತ್ಯಗೊಳ್ಳಲಿದೆ. ಲಾಕ್ ಡೌನ್ ವಿಸ್ತರಣೆ ಮಾಡುವ ಕುರಿತು ಕೇಂದ್ರ ಗೃಹ ಸಚಿವರು ರಾಜ್ಯಗಳ ಮುಖ್ಯಮಂತ್ರಿಗಳ ಅಭಿಪ್ರಾಯ ಕೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲಾಕ್ ಡೌನ್ ವಿಸ್ತರಣೆ ಮಾಡುವ ಕುರಿತು ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಅಮಿತ್ ಶಾ ನಿರ್ದೇಶನ ನೀಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಜೂನ್ 30ರ ತನಕ ಲಾಕ್ ಡೌನ್ ವಿಸ್ತರಣೆ ಹಿಮಾಚಲ ಪ್ರದೇಶದಲ್ಲಿ ಜೂನ್ 30ರ ತನಕ ಲಾಕ್ ಡೌನ್ ವಿಸ್ತರಣೆ

ಲಾಕ್ ಡೌನ್ ಮುಂದುವರೆಸಬೇಕೆ?, ಹೇಗೆ ಅದನ್ನು ಹಂತ-ಹಂತವಾಗಿ ತೆಗೆಯಬಹುದು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯವನ್ನು ನೀಡಲಿದ್ದಾರೆ. ಈಗಾಗಲೇ ಹಿಮಾಚಲ ಪ್ರದೇಶ ಸರ್ಕಾರ ಜೂನ್ 30ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

 ಲಾಕ್ಡೌನ್ 5.0 ಹೇಗಿರಬಹುದು? 11 ನಗರಗಳ ಮೇಲ್ಯಾಕೆ ಕಣ್ಣು? ಲಾಕ್ಡೌನ್ 5.0 ಹೇಗಿರಬಹುದು? 11 ನಗರಗಳ ಮೇಲ್ಯಾಕೆ ಕಣ್ಣು?

 Amit Shah Seeks Chief Ministers Feedback About Lockdown

ಸಂಸದೀಯ ಕಾರ್ಯದರ್ಶಿಗಳು ಎಲ್ಲಾ ಮುಖ್ಯಮಂತ್ರಿಗಳ ಅಭಿಪ್ರಾಯವನ್ನು ಸಂಗ್ರಹಣೆ ಮಾಡಿ ಅಮಿತ್‌ ಶಾಗೆ ವರದಿ ನೀಡಲಿದ್ದಾರೆ. ಇನ್ನೂ ಎರಡು ದಿನದಲ್ಲಿ ಲಾಕ್ ಡೌನ್ ವಿಸ್ತರಣೆಯಾಗಲಿದೆಯೇ?, ಇಲ್ಲವೇ? ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿವೆ.

Fact Check: 'ಮನ್ ಕೀ ಬಾತ್'ನಲ್ಲಿ ಲಾಕ್‌ಡೌನ್‌ 5.0 ಘೋಷಣೆ ನಿಜಾನ?Fact Check: 'ಮನ್ ಕೀ ಬಾತ್'ನಲ್ಲಿ ಲಾಕ್‌ಡೌನ್‌ 5.0 ಘೋಷಣೆ ನಿಜಾನ?

ಪ್ರತಿ ಬಾರಿ ಲಾಕ್ ಡೌನ್ ವಿಸ್ತರಣೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸುತ್ತಿದ್ದರು. ಆದರೆ, ಈ ಬಾರಿ ಇನ್ನೂ ಸಭೆಯನ್ನು ನಡೆಸಿಲ್ಲ.

ಭಾನುವಾರ ಮನ್ ಕೀ ಬಾತ್ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆಗ ಲಾಕ್ ಡೌನ್ ವಿಸ್ತರಣೆ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆ ಇದೆ.

English summary
Home minister Amit Shah seeks all chief ministers feedback on extension ot lifting of lockdown. 4th phase of lockdown will come to end on May 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X