ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿ ವೈರ್ ವಿರುದ್ಧ ಅಮಿತ್ ಶಾ ಪುತ್ರನಿಂದ ಮಾನನಷ್ಟ ಮೊಕದ್ದಮೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 9: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಆದಾಯ ಒಂದೇ ವರ್ಷದಲ್ಲಿ ಗಗನಕ್ಕೇರಿದೆ ಎಂದು 'ದಿ ವೈರ್' ಎಂಬ ಆನ್ ಲೈನ್ ನ್ಯೂಸ್ ಪೋರ್ಟಲ್ ವರದಿ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ, ನ್ಯೂಸ್ ಪೋರ್ಟಲ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲು ಶಾ ಪುತ್ರ ಜಯ್ ನಿರ್ಧರಿಸಿದ್ದಾರೆ.

ಗಗನಕ್ಕೇರಿದ ಅಮಿತ್ ಶಾ ಪುತ್ರನ ಆದಾಯ: ಮೋದಿ, ಶಾ ಬೆಂಡೆತ್ತಿದ ಟ್ವಿಟ್ಟಿಗರುಗಗನಕ್ಕೇರಿದ ಅಮಿತ್ ಶಾ ಪುತ್ರನ ಆದಾಯ: ಮೋದಿ, ಶಾ ಬೆಂಡೆತ್ತಿದ ಟ್ವಿಟ್ಟಿಗರು

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೊಯೆಲ್, ಸುಳ್ಳು ಸುದ್ದಿ ಪ್ರಕಟಿಸಿ, ಶಾ ಪುತ್ರನ ತೇಜೋವಧೆ ಮಾಡಿದ ನ್ಯೂಸ್ ಪೋರ್ಟಲ್ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ಜಯ್ ನಿರ್ಧರಿಸಿದ್ದಾರೆಂದು ತಿಳಿಸಿದ್ದಾರೆ.

Amit Shah's son Jay to file Rs. 100 crore Defamation case against The Wire

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಜಯ್ ಶಾ ಆದಾಯ ಗಗನಕ್ಕೇರಿದೆ ಎಮಬ ಕುರಿತು 'ದಿ ವೈರ್' ವರದಿ ಮಾಡಿತ್ತು. ಈ ಕುರಿತು ಹೆಚ್ಚಿನ ತನಿಖೆ ನಡೆಯಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿದ್ದು, ನೋಟು ಅಮಾನ್ಯೀಕರಣದ ನಂತರ ನಿಜವಾಗಿಯೂ ಲಾಭವಾಗಿದ್ದು, ಆರ್ ಬಿಐ ಗಾಗಲೀ, ಬಡವರಿಗಾಗಲೀ, ರೈತರಿಗಾಗಲೀ ಅಲ್ಲ್. ಬದಲಾಗಿ ಶಾ ಕುಟುಂಬ ಮತ್ತು ಅವರ ಹಿಂಬಾಲಕರಿಗೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

English summary
A report about the business dealings of BJP president Amit Shah's son Jay triggered a political storm. Jay decided to file criminal defamation case against the online news portal, 'The Wire', which has publishsed a news against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X