ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ನೇತೃತ್ವದಲ್ಲಿ ಮಂಗಳೂರಿನಲ್ಲಿ ಬಿಜೆಪಿ ಪಾದಯಾತ್ರೆ

By ಅನುಷಾ ರವಿ
|
Google Oneindia Kannada News

ತಿರುವನಂತಪುರಂ, ಸೆಪ್ಟೆಂಬರ್ 25 : ಕೇರಳದಲ್ಲಿ ನಡೆದ ರಾಜಕೀಯ ಹತ್ಯೆಗಳನ್ನು ಖಂಡಿಸಿ ಬಿಜೆಪಿ 'ಜನರಕ್ಷಕ ಯಾತ್ರೆ'ಯನ್ನು ನಡೆಸಲು ತೀರ್ಮಾನಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯಲಿದೆ. ಮಂಗಳೂರಿನಲ್ಲಿಯೂ ಇದೇ ಮಾದರಿಯ ಪಾದಯಾತ್ರೆ ನಡೆಯಲಿದೆ.

ಅಮಿತ್ ಶಾ ವಿರುದ್ಧ ಅಪಪ್ರಚಾರ, ಬಿಜೆಪಿಯಿಂದ ದೂರು ದಾಖಲುಅಮಿತ್ ಶಾ ವಿರುದ್ಧ ಅಪಪ್ರಚಾರ, ಬಿಜೆಪಿಯಿಂದ ದೂರು ದಾಖಲು

ಕೇರದಲ್ಲಿ ನಡೆದ ಸಂಘ ಪರಿವಾತರದ ಕಾರ್ಯಕರ್ತರ ಹತ್ಯೆ ಖಂಡಿಸಿ 'ಜನರಕ್ಷಕ ಯಾತ್ರೆ' ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್‌ನಲ್ಲಿಯೇ ಈ ಯಾತ್ರೆ ನಡೆಯಬೇಕಿತ್ತು. ಆದರೆ, ಅಮಿತ್ ಶಾ ಬೇರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ಕಾರಣ ಅಕ್ಟೋಬರ್ 3ರಿಂದ ಮೂರು ದಿನಗಳ ಕಾಲ ಪಾದಯಾತ್ರೆ ನಡೆಯುತ್ತಿದೆ.

 Amit Shah to lead padayatra against assault on Sangh workers in Kerala, Mangaluru

ಕರ್ನಾಟಕ ಬಿಜೆಪಿ ಇದೇ ಮಾದರಿಯ ಪಾದಯಾತ್ರೆಯನ್ನು ಮಂಗಳೂರಿನಲ್ಲಿ ನಡೆಸಲು ನಿರ್ಧರಿಸಿದೆ. ಅಮಿತ್ ಶಾ ಅವರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ನಡೆದ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರ ಹತ್ಯೆ ಖಂಡಿಸಿ ಅಕ್ಟೋಬರ್ 4ರಂದು ಪಾದಯಾತ್ರೆ ನಡೆಸುವ ಸಾಧ್ಯತೆ ಇದೆ.

ಕೇರಳದಲ್ಲಿ ಇದುವರೆಗೂ ನಡೆದ ರಾಜಕೀಯ ಹತ್ಯೆಗಳೆಷ್ಟು?ಕೇರಳದಲ್ಲಿ ಇದುವರೆಗೂ ನಡೆದ ರಾಜಕೀಯ ಹತ್ಯೆಗಳೆಷ್ಟು?

ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ನಿವಾಸದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮಂಗಳೂರಿನಲ್ಲಿ ಪಾದಯಾತ್ರೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಅಕ್ಟೋಬರ್ 3 ರಿಂದ 5ನೇ ದಿನಾಂಕದೊಳಗೆ ಒಂದು ದಿನ ಮಂಗಳೂರಿನಲ್ಲಿ ಪಾದಯಾತ್ರೆ ನಡೆಯಲಿದೆ.

ಕರ್ನಾಟಕಕ್ಕೆ ಅಮಿತ್ ಶಾ ರಣತಂತ್ರ 'ಉತ್ತರ'ವೇ?ಕರ್ನಾಟಕಕ್ಕೆ ಅಮಿತ್ ಶಾ ರಣತಂತ್ರ 'ಉತ್ತರ'ವೇ?

ರಾಜ್ಯ ಬಿಜೆಪಿ ಯುವಮೋರ್ಚಾ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಸೆಪ್ಟೆಂಬರ್‌ನಲ್ಲಿ 'ಮಂಗಳೂರು ಚಲೋ' ಬೈಕಾ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೆ, ಬೈಕ್ ಜಾಥಾ ಹೊರಟವರನ್ನು ಆಯಾ ಜಿಲ್ಲೆಯಲ್ಲಿಯೇ ತಡೆದು, ಕಾರ್ಯಕ್ರಮ ಯಶಸ್ವಿಯಾಗದಂತೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿತ್ತು.

ಕೇರಳದಲ್ಲಿ ಅಕ್ಟೋಬರ್ 3 ರಿಂದ 5 ರ ತನಕ 'ಜನರಕ್ಷಕ' ಯಾತ್ರೆ ನಡೆಯಲಿದೆ. ಕಣ್ಣೂರಿನಲ್ಲಿ ಈ ಪಾದಯಾತ್ರೆಗೆ ಚಾಲನೆ ಸಿಗಲಿದೆ. 2000 ದಿಂದ 2016ರ ತನಕ ಕಣ್ಣೂರಿನಲ್ಲಿಯೇ 69 ರಾಜಕೀಯ ಹತ್ಯೆಗಳು ನಡೆದಿವೆ. ಈ ಹತ್ಯೆಗಳನ್ನು ಖಂಡಿಸಿ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿದೆ.

English summary
Kerala BJP unit's ambitions Janaraksha Yatra will commence from October 3, 2017. BJP National President Amit Shah will lead the padayatra aimed at highlighting political violence in Kerala. Leaders of Karnataka BJP hope to replicate a similar padayatra in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X