• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯ ಅತಿದೊಡ್ಡ ಕಚೇರಿ ಉದ್ಘಾಟಿಸಲಿದ್ದಾರೆ ಅಮಿತ್ ಶಾ, ಜೆಪಿ ನಡ್ಡಾ

|
Google Oneindia Kannada News

ಗುವಾಹಟಿ, ಸಪ್ಟೆಂಬರ್‌ 25: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ವರಿಷ್ಠರು ಈಶಾನ್ಯ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ಅತಿದೊಡ್ಡ ಕಚೇರಿಯನ್ನು ಉದ್ಘಾಟಿಸಲಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಅಕ್ಟೋಬರ್ 8 ರಂದು ಕಚೇರಿ ಉದ್ಘಾಟನೆ ನಡೆಯಲಿದೆ. ಗುವಾಹಟಿಯಲ್ಲಿರುವ ಈ ಕಚೇರಿಯು ರಾಜ್ಯದ ಪ್ರಧಾನ ಕಚೇರಿಯಾಗಲಿದೆ. ಅತ್ಯಾಧುನಿಕ ಮೂಲಸೌಕರ್ಯಗಳೊಂದಿಗೆ ಬಿಜೆಪಿ ಕಚೇರಿಯು 95,000 ಚದರ ಅಡಿಗಳಲ್ಲಿ ಹರಡಿದೆ. ಕಟ್ಟಡವು ಆರು ಮಹಡಿಗಳನ್ನು ಮತ್ತು ತೆರೆದ ಮೇಲ್ಛಾವಣಿಯ ಆವರಣವನ್ನು ಹೊಂದಿರುತ್ತದೆ.

ಲೋಕಸಭಾ ಚುನಾವಣೆ: ಕೇರಳದಲ್ಲಿ ಬಿಜೆಪಿ ಪ್ರಚಾರಕ್ಕೆ ಜೆಪಿ ನಡ್ಡಾ ಅಡಿಗಲ್ಲುಲೋಕಸಭಾ ಚುನಾವಣೆ: ಕೇರಳದಲ್ಲಿ ಬಿಜೆಪಿ ಪ್ರಚಾರಕ್ಕೆ ಜೆಪಿ ನಡ್ಡಾ ಅಡಿಗಲ್ಲು

ಬಿಜೆಪಿಯ ಹೊಸ ಅಸ್ಸಾಂ ಕಚೇರಿಯು 350 ಜನರಿಗೆ ಅವಕಾಶ ಕಲ್ಪಿಸುವ ಸಭಾಂಗಣವನ್ನು ಹೊಂದಿದೆ. ತಲಾ 40 ಜನರ ಸಾಮರ್ಥ್ಯದ ಉನ್ನತ ಹೈಟೆಕ್ ಕಾನ್ಫರೆನ್ಸ್ ಹಾಲ್‌ಗಳನ್ನು ಹೊಂದಿರುತ್ತದೆ. ಇದು ತಲಾ 50 ಜನರಿಗೆ ಅವಕಾಶ ಕಲ್ಪಿಸಲು ಐದು ಸಭೆ ಸಭಾಂಗಣಗಳನ್ನು ಹೊಂದಿರುತ್ತದೆ. ಕಚೇರಿಯು ಸ್ವಾಗತ ಮತ್ತು ಕ್ಯಾಂಟೀನ್ ಜೊತೆಗೆ ದೊಡ್ಡ ಪತ್ರಿಕಾಗೋಷ್ಠಿ ಕೊಠಡಿಯನ್ನು ಸಹ ಹೊಂದಿರುತ್ತದೆ.

ಅಸ್ಸಾಂನಲ್ಲಿ ಬಿಜೆಪಿಯ ಈ ಕಚೇರಿಗೆ ಅಂದಿನ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಫೆಬ್ರವರಿ 2019ರಲ್ಲಿ ಅಡಿಪಾಯ ಹಾಕಿದ್ದರು. ಈ ಕಚೇರಿಯ ಉದ್ಘಾಟನೆಗೆ ಉನ್ನತ ನಾಯಕರು ಗುವಾಹಟಿಗೆ ಬರುವುದನ್ನು ನಾವು ಎದುರು ನೋಡುತ್ತಿದ್ದೇವೆ. ಈ ಕಚೇರಿಯು ಹೇಗೆ ರೂಪುಗೊಂಡಿದೆ ಎಂಬುದನ್ನು ನೋಡಲು ನಮಗೆ ಅಪಾರ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದು ವ್ಯವಸ್ಥೆಗಳನ್ನು ಗಮನಿಸುತ್ತಿರುವ ರಾಜ್ಯ ಪದಾಧಿಕಾರಿಯೊಬ್ಬರು ತಿಳಿಸಿದರು.

ಬಿಜಿಪಿಯ 2024ರ ಅಧಿಕಾರದ ರಾಜಕೀಯ 2023 ಸೆಮಿಫೈನಲ್? ಕಾರಣ ತಿಳಿಯಿರಿಬಿಜಿಪಿಯ 2024ರ ಅಧಿಕಾರದ ರಾಜಕೀಯ 2023 ಸೆಮಿಫೈನಲ್? ಕಾರಣ ತಿಳಿಯಿರಿ

ಬಿಜೆಪಿ ಅಸ್ಸಾಂ ಮೂಲಕ ಈಶಾನ್ಯ ರಾಜ್ಯಗಳಲ್ಲಿ ತಳವೂರಲು ಹೆಬ್ಬಾಗಿಲಾಗಿದೆ. ಅಸ್ಸಾಂ ರಾಜ್ಯವು ಈ ಪ್ರದೇಶದಲ್ಲಿ ನಮ್ಮ ಪಕ್ಷಕ್ಕೆ ಅದೃಷ್ಟವನ್ನು ತೆರೆಯುತ್ತದೆ. ಈ ಏಕೈಕ ಉದ್ದೇಶಕ್ಕಾಗಿ ನಾವು ಇಲ್ಲಿ ದೊಡ್ಡ ಕಚೇರಿಯನ್ನು ಹೊಂದಿದ್ದೇವೆ ಎಂದು ಮತ್ತೊಬ್ಬ ಅಸ್ಸಾಂ ರಾಜ್ಯ ಪದಾಧಿಕಾರಿ ಹೇಳಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಈಶಾನ್ಯ ಪ್ರದೇಶದ ಪ್ರಗತಿಗೆ ವಿಶೇಷ ಒತ್ತು ನೀಡಿದ್ದು, ಪ್ರಧಾನಿಯವರು ಸ್ವತಃ 50 ಕ್ಕೂ ಹೆಚ್ಚು ಭೇಟಿಗಳನ್ನು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ದಾಖಲೆ ಧೂಳಿಪಟ

ಕಾಂಗ್ರೆಸ್ ಪಕ್ಷದ ದಾಖಲೆ ಧೂಳಿಪಟ

2016ರಲ್ಲಿ ಬಿಜೆಪಿಯು ಅಸ್ಸಾಂನಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ದಾಖಲೆಯನ್ನು ಮುರಿದು ಅಧಿಕಾರಕ್ಕೆ ಬಂದಿತು. ಕಾಂಗ್ರೆಸ್ ಅನ್ನು ಹೊರತುಪಡಿಸಿ ರಾಜ್ಯದಲ್ಲಿ ತನ್ನ ಅವಧಿಯನ್ನು ಪುನರಾವರ್ತಿಸುವ ಮೂಲಕ ಸರ್ಕಾರಗಳನ್ನು ಹೊಂದಿರುವ ಏಕೈಕ ಪಕ್ಷವಾಯಿತು. 2017ರಲ್ಲಿ ಬಿಜೆಪಿ ಮಣಿಪುರದಲ್ಲಿ ಸರ್ಕಾರವನ್ನು ರಚಿಸಿತು. 2022 ರಲ್ಲಿ ಮತ್ತೊಮ್ಮೆ ತನ್ನ ಸರ್ಕಾರವನ್ನು ಪುನರಾವರ್ತನೆ ಮಾಡಿತು.

ಅರುಣಾಚಲ ಪ್ರದೇಶದಲ್ಲಿ ಸಮ್ರಿಶ್ರ ಸರ್ಕಾರ

ಅರುಣಾಚಲ ಪ್ರದೇಶದಲ್ಲಿ ಸಮ್ರಿಶ್ರ ಸರ್ಕಾರ

2018ರಲ್ಲಿ ಒಂದೆರಡು ದಶಕಗಳ ಎಡಪಂಥೀಯ ಆಡಳಿತವನ್ನು ಮುರಿದು ತ್ರಿಪುರಾದಲ್ಲಿ ಸರ್ಕಾರ ರಚನೆಯಾಗಿರುವುದು ಈ ಪ್ರದೇಶದಲ್ಲಿ ಬಿಜೆಪಿಯ ಮತ್ತೊಂದು ಮೊದಲನೆಯದು. ಬಿಜೆಪಿಯು ಅರುಣಾಚಲ ಪ್ರದೇಶದಲ್ಲಿ ಹಾಗೂ ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಸಮ್ಮಿಶ್ರ ಸರ್ಕಾರಗಳಲ್ಲಿ ಅಧಿಕಾರದಲ್ಲಿ ಮುಂದುವರಿದಿದೆ.

ಅಧಿಕಾರವನ್ನು ಉಳಿಸಿಕೊಳ್ಳಲು ಕಣಕ್ಕೆ

ಅಧಿಕಾರವನ್ನು ಉಳಿಸಿಕೊಳ್ಳಲು ಕಣಕ್ಕೆ

ಮುಂದಿನ ವರ್ಷದ ಆರಂಭದಲ್ಲಿ ತ್ರಿಪುರಾದಲ್ಲಿ ನಡೆಯಲಿರುವ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಮಿತ್ರ ಪಕ್ಷವಾದ ಐಪಿಎಫ್‌ಟಿಯೊಂದಿಗೆ ಎಲ್ಲಾ 60 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಅಧಿಕಾರವನ್ನು ಉಳಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಪಕ್ಷದ ರಾಜ್ಯ ಮುಖ್ಯಸ್ಥ ವಕ್ತಾರ ಸುಬ್ರತಾ ಚಕ್ರವರ್ತಿ ತಿಳಿಸಿದ್ದಾರೆ.

ಎಲ್ಲ 60 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ

ಎಲ್ಲ 60 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಅವರು ಶುಕ್ರವಾರ ತ್ರಿಪುರಾಕ್ಕೆ ಭೇಟಿ ನೀಡಿದ್ದು, ಶನಿವಾರ ಮಧ್ಯಾಹ್ನದವರೆಗೆ ಪದಾಧಿಕಾರಿಗಳು, ಕೋರ್ ಕಮಿಟಿಯ ಸದಸ್ಯರು, ಶಾಸಕರು, ಸಚಿವರು, ಸಂಸದರು ಮತ್ತು ಕೇಂದ್ರ ಸಚಿವರೊಂದಿಗೆ ಕಾರ್ಯತಂತ್ರಗಳನ್ನು ಅಂತಿಮಗೊಳಿಸಲು ಮತ್ತು ನೀಲನಕ್ಷೆಯನ್ನು ಸಿದ್ಧಪಡಿಸಲು ಸರಣಿ ಸಭೆಗಳನ್ನು ನಡೆಸಿದ್ದರು. ಎಲ್ಲಾ 60 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಅವರು ಹೇಳಿದರು.

ಅಮಿತ್ ಶಾ
Know all about
ಅಮಿತ್ ಶಾ
English summary
BJP national president JP Nadda and Union Home Minister Amit Shah will inaugurate Bharatiya Janata Party's biggest office in the Northeast, officials said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X