ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಡ್ಸೆ ದೇಶಭಕ್ತ ಎಂದ ಬಿಜೆಪಿಗರ ಮೇಲೆ ಶಾ ಗರಂ, ಶಿಸ್ತು ಕ್ರಮಕ್ಕೆ ಸೂಚನೆ

|
Google Oneindia Kannada News

ನವದೆಹಲಿ, ಮೇ 17: ನಾಥೂರಾಮ್ ಗೋಡ್ಸೆ ಪರವಾಗಿ ಹೇಳಿಕೆಗಳನ್ನು ನೀಡಿದ್ದ ಬಿಜೆಪಿ ಸಂಸದರ ಮೇಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗರಂ ಆಗಿದ್ದಾರೆ, ಹೇಳಿಕೆ ನೀಡಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಿದ್ದಾರೆ.

ಸಚಿವ ಅನಂತ್‌ಕುಮಾರ್ ಹಗಡೆ, ಸಂಸದ ನಳೀನ್ ಕುಮಾರ್ ಕಟೀಲ್, ಅಭ್ಯರ್ಥಿ ಸಾದ್ವಿ ಪ್ರಜ್ಞಾ ಠಾಕೂರ್ ಅವರುಗಳು ನಾಥೂರಾಮ್ ಗೋಡ್ಸೆ ಪರವಾಗಿ ಹೇಳಿಕೆ ಹಾಗೂ ಟ್ವೀಟ್ ಮಾಡಿದ್ದರು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಈ ಬಗ್ಗೆ ಟ್ಟಿಟ್ಟರ್ ಮೂಲಕ ಪ್ರತಿಕ್ರಿಯಿಸಿರುವ ಅಮಿತ್ ಶಾ, ನಳೀನ್ ಕುಮಾರ್ ಕಟೀಲ್, ಪ್ರಜ್ಞಾ ಠಾಕೂರ್, ಅನಂತ್‌ಕುಮಾರ್ ಅವರ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು, ಅವುಗಳಿಗೂ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಶಾ ಹೇಳಿದ್ದಾರೆ.

ಈಗಾಗಲೇ ಈ ಮೂವರು ತಮ್ಮ ಹೇಳಿಕೆಗಳನ್ನು ಹಿಂಪಡೆದಿದ್ದು, ಕ್ಷಮೆ ಕೋರಿದ್ದಾರೆ, ಆದರೆ ಬಿಜೆಪಿಯು ಈ ಮೂವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಶಿಸ್ತು ಸಮಿತಿಗೆ ಕ್ರಮಕ್ಕೆ ರವಾನಿಸಿದೆ ಎಂದು ಅಧ್ಯಕ್ಷ ಶಾ ಹೇಳಿದ್ದಾರೆ.

ನಾಥೂರಾಮ್ ಗೋಡ್ಸೆ ಪರವಾಗಿ ಹೇಳಿಕೆ ನೀಡಿರುವ ಬಿಜೆಪಿ ಮುಖಂಡರಿಗೆ ಸ್ಪಷ್ಟೀಕರಣ ನೀಡುವಂತೆ ಶಾ ಸೂಚಿಸಿದ್ದು, ನಳೀನ್ ಕುಮಾರ್ ಕಟೀಲ್, ಪ್ರಜ್ಞಾ ಠಾಕೂರ್, ಅನಂತ್‌ಕುಮಾರ್ ಹೆಗಡೆ ಅವರುಗಳು 10 ದಿನಗಳ ಒಳಗಾಗಿ ಪಕ್ಷಕ್ಕೆ ತಮ್ಮ ಸ್ಪಷ್ಟೀಕರಣ ಸಲ್ಲಿಸಬೇಕೆಂದು ಸೂಚಿಸಲಾಗಿದೆ.

Array

ಬಿಜೆಪಿ ವಿಚಾರಧಾರೆಯ ವಿರುದ್ಧ ಹೇಳಿಕೆ

ಭಾರತೀಯ ಜನತಾ ಪಕ್ಷದ ಗೌರವ ಹಾಗೂ ವಿಚಾರಧಾರೆಯ ವಿರುದ್ಧವಾದ ಹೇಳಿಕೆಗಳನ್ನು ನೀಡಿರುವುದನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ನಾಥೂರಾಮ್ ಗೋಡ್ಸೆ ಪರ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾದ ಕಾರಣ ಅಮಿತ್ ಶಾ ಅವರು ಈ ನಿರ್ಣಯ ತಳೆದಿದ್ದಾರೆ.

ಗೋಡ್ಸೆ ಬೆಂಬಲಿಸುವ ಸಾಧ್ವಿಗೆ ನರೇಂದ್ರ ಮೋದಿ ಶ್ರೀರಕ್ಷೆ: ಸಿದ್ದರಾಮಯ್ಯ ಗೋಡ್ಸೆ ಬೆಂಬಲಿಸುವ ಸಾಧ್ವಿಗೆ ನರೇಂದ್ರ ಮೋದಿ ಶ್ರೀರಕ್ಷೆ: ಸಿದ್ದರಾಮಯ್ಯ

ಗೋಡ್ಸೆ ದೇಶಭಕ್ತ ಎಂದಿದ್ದ ಪ್ರಜ್ಞಾ ಠಾಕೂರ್

ಗೋಡ್ಸೆ ದೇಶಭಕ್ತ ಎಂದಿದ್ದ ಪ್ರಜ್ಞಾ ಠಾಕೂರ್

ನಾಥೂರಾಮ್ ಗೋಡ್ಸೆ ಸ್ವಾತಂತ್ರ್ಯ ಭಾರತದ ಮೊದಲ ಹಿಂದೂ ಉಗ್ರ ಎಂದು ತಮಿಳು ನಟ ಕಮಲ್ ಹಾಸನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಜ್ಞಾ ಠಾಕೂರ್ ಅವರು, ನಾಥೂರಾಮ್ ಗೋಡ್ಸೆ ಒಬ್ಬ ದೇಶ ಭಕ್ತ ಎಂದಿದ್ದರು. ಬಿಜೆಪಿಯು ಪ್ರಜ್ಞಾ ಠಾಕೂರ್ ಅವರ ಹೇಳಿಕೆಯನ್ನು ಖಂಡಿಸಿದ ನಂತರ ಬಿಜೆಪಿಯ ವಿಚಾರಧಾರೆಯೇ ನನ್ನ ವಿಚಾರಧಾರೆ ಎನ್ನುವ ಮೂಲಕ ಹೇಳಿಕೆಯನ್ನು ಹಿಂಪಡೆದರು.

ನಾಥೂರಾಮ್ ಗೋಡ್ಸೆ ಬಗೆಗಿನ ಹೇಳಿಕೆ ತಿದ್ದಿಕೊಂಡ ಸಾದ್ವಿ ಪ್ರಜ್ಞಾ ನಾಥೂರಾಮ್ ಗೋಡ್ಸೆ ಬಗೆಗಿನ ಹೇಳಿಕೆ ತಿದ್ದಿಕೊಂಡ ಸಾದ್ವಿ ಪ್ರಜ್ಞಾ

ಕ್ಷಮೆ ಕೋರಿದ ನಳೀನ್ ಕುಮಾರ್ ಕಟೀಲ್

ಸಂಸದ ನಳೀನ್ ಕುಮಾರ್ ಕಟೀಲ್ ಅವರು ಟ್ವೀಟ್ ಮಾಡಿ, ನಾಥೂರಾಮ್ ಗೋಡ್ಸೆ ಒಬ್ಬರನ್ನು ಕೊಂದರು, ಅಫ್ಜಲ್ ಗುರು 72 ಜನರನ್ನು ಕೊಂದ, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17000 ಜನರನ್ನು, ಹೇಳಿ ಯಾರು ಕೊಲೆಗಾರ ಎಂದು ಟ್ವೀಟ್ ಮಾಡಿದ್ದರು, ಆ ನಂತರ ಅದನ್ನು ಡಿಲೀಟ್ ಮಾಡಿ ಕ್ಷಮೆ ಕೋರಿದರು.

ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ: ಸಾಧ್ವಿ ಪ್ರಜ್ಞಾ ಸಿಂಗ್ ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ: ಸಾಧ್ವಿ ಪ್ರಜ್ಞಾ ಸಿಂಗ್

ಟ್ವಿಟ್ಟರ್ ಹ್ಯಾಕ್ ಆಗಿತ್ತು ಎಂದ ಅನಂತ್‌ಕುಮಾರ್ ಹೆಗಡೆ

ಕೇಂದ್ರ ಬಿಜೆಪಿ ಮಂತ್ರಿ ಅನಂತ್‌ಕುಮಾರ್ ಹೆಗಡೆ ಸಹ ನಾಥೂರಾಮ್ ಗೋಡ್ಸೆ ಪರ ಟ್ವೀಟ್ ಮಾಡಿದ್ದರು, ಆದರೆ ಇಂದು ಬೆಳಿಗ್ಗೆ ಮತ್ತೆ ಟ್ವೀಟ್ ಮಾಡಿರುವ ಅವರು, ನನ್ನ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು, ಗಾಂಧಿ ಅವರ ಕೊಲೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ, ಗಾಂಧಿಯನ್ನು ಕೊಂದವರಿಗೆ ಸಿಂಪತಿಯಾಗಲಿ, ಸಮರ್ಥನೆಯಾಗಲಿ ನೀಡುವುದು ಸಾಧ್ಯವೇ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.

English summary
BJP president Amit Shah condemn pro Nathuram Godse statements of BJP MP Naleen Kumar Kateel, Pragya Thakur, Ananth Kumar Hegde. He said statement will sent to disciplinary committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X