ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಗಣತಿಯ ಡಿಜಿಟೀಕರಣ ಯೋಜನೆ ಘೋಷಿಸಿದ ಅಮಿತ್ ಶಾ

|
Google Oneindia Kannada News

ಅಸ್ಸಾಂ, ಮೇ 10: ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂಬರುವ ಜನಗಣತಿಯನ್ನು ಡಿಜಿಟೀಕರಣ (Census Digitisation) ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ. ಅಸ್ಸಾಂ ರಾಜ್ಯದ ಅಮೀನ್‌ಗಾವೋ ಬಳಿ ನೂತನ ಸೆನ್ಸಸ್ ಕಚೇರಿಯ ಉದ್ಘಾಟನೆ ಮಾಡಿದ ಅವರು, ಮುಂದಿನ ಜನಗಣತಿ ಇ-ಸೆನ್ಸಸ್ ಅಗಿರಲಿದೆ ಎಂದಿದ್ದಾರೆ.

"ಸರಕಾರದ ನೀತಿನಿರ್ಧಾರದಲ್ಲಿ ಜನಗಣತಿ ಪಾತ್ರ ಬಹಳ ಮುಖ್ಯ ಇದೆ. ಹೀಗಾಗಿ, ಸೆನ್ಸಸ್ ಅನ್ನು ಆಧುನಿಕ ತಂತ್ರಜ್ಞಾನ ಮೂಲಕ ಬಹು ಆಯಾಮ, ವೈಜ್ಞಾನಿಕ ಮತ್ತು ನಿಖರವಾಗಿ ಜನಗಣತಿಯನ್ನು ಮಾಡಲಾಗುವುದು. ಈ ಸೆನ್ಸಸ್ ಮಾಹಿತಿಯನ್ನು ವಿಶ್ಲೇಷಿಸುವ ಸಮರ್ಪಕ ವ್ಯವಸ್ಥೆ ಕೂಡ ಮಾಡಲಾಗುವುದು" ಎಂದು ಅಮಿತ್ ಶಾ ಹೇಳಿದ್ದಾರೆ. ಇ-ಸೆನ್ಸಸ್ ಬಹಳ ನಿಖರವಾಗಿರಲಿದ್ದು, ಇದರ ಆಧಾರದ ಮೇಲೆ ಮುಂದಿನ 25 ವರ್ಷಗಳಲ್ಲಿ ದೇಶದ ಅಭಿವೃದ್ಧಿಯ ನಕ್ಷೆ ಮಾಡಲಾಗುವುದು.

ಅಮಿತ್ ಶಾ ಮೇ ತಿಂಗಳಲ್ಲಿ 7 ರಾಜ್ಯಗಳಿಗೆ ಭೇಟಿ: ಯಾಕೆ ಗೊತ್ತಾ?ಅಮಿತ್ ಶಾ ಮೇ ತಿಂಗಳಲ್ಲಿ 7 ರಾಜ್ಯಗಳಿಗೆ ಭೇಟಿ: ಯಾಕೆ ಗೊತ್ತಾ?

"ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಸೆನ್ಸಸ್ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಈಗ ಇ-ಸೆನ್ಸಸ್ ಕಾರ್ಯ ಕೈಗೊಳ್ಳುತ್ತೇವೆ. ಇದು ಬಹಳ ಕರಾರುವಾಕ್ ಆಗಿರುವ ಜನಗಣತಿಯಾಗಿರುತ್ತದೆ" ಎಂದು ಕೇಂದ್ರ ಗೃಹ ಸಚಿವ ಹಾಗು ಸಹಕಾರ ಖಾತೆ ಸಚಿವರೂ ಆದ ಅಮಿತ್ ಶಾ ತಿಳಿಸಿದ್ದಾರೆ.

Amit Shah Announces e-Census, says it will be accurate

ಸೆನ್ಸಸ್‌ನಲ್ಲಿ ಜನನ-ಮರಣ ನೋಂದಣಿ:
"ಎಲ್ಲೆಲ್ಲಿ ಕಡಿಮೆ ಅಭಿವೃದ್ಧಿಯಾಗಿದೆ, ಎಸ್ಸಿ ಎಸ್ಟಿ ಸಮುದಾಯಗಳ ಪರಿಸ್ಥಿತಿ ಹೇಗಿದೆ, ವಿವಿಧ ಪ್ರದೇಶಗಳಲ್ಲಿ ಜನಜೀವನ ಪರಿಸ್ಥಿತಿ ಹೇಗಿದೆ ಎಂಬುದನ್ನಷ್ಟೇ ಸೆನ್ಸಸ್ ತೋರಿಸಬಹುದು. ಆದರೆ, ನಾವು ಇ-ಸೆನ್ಸಸ್‌ನಲ್ಲಿ ಜನನ ಮತ್ತು ಮರಣ ನೊಂದಣಿಯನ್ನು (Birth and Death Register) ಸೇರಿಸುವ ಅವಕಾಶ ನೀಡುವ ಹೊಸ ಸಾಫ್ಟ್‌ವೇರ್ ತಯಾರಿಸಲಿದ್ಧೇವೆ. ಇದನ್ನು ವಿವಿಧ ರೀತಿಯಲ್ಲಿ ನಾವು ಬಳಸಲಿದ್ದೇವೆ. ಮಗು ಜನಸಿದ ಕೂಡಲೇ ಅದರ ಜನ್ಮದಿನಾಂಕ ಸಮೇತ ಮಾಹಿತಿಯು ಜನಗಣತಿ ರಿಜಿಸ್ಟರ್‌ಗೆ ಹೋಗುತ್ತದೆ. ಈ ಮಗುವಿನ ವಯಸ್ಸು 18 ವರ್ಷ ಆಗುತ್ತಲೇ ಮತದಾರನಾಗಿ ನೊಂದಾಯಿತವಾಗುತ್ತದೆ" ಎಂದು ಅಮಿತ್ ಶಾ ವಿವರಿಸಿದ್ದಾರೆ.

ಕೋವಿಡ್ ಕಡಿಮೆಯಾದ ಬಳಿಕ ಸಿಎಎ ಜಾರಿ: ಅಮಿತ್ ಶಾಕೋವಿಡ್ ಕಡಿಮೆಯಾದ ಬಳಿಕ ಸಿಎಎ ಜಾರಿ: ಅಮಿತ್ ಶಾ

ನಾಗರಿಕ ನೊಂದಣಿ ವ್ಯವಸ್ಥೆ (ಸಿಆರ್‌ಎಸ್- Civil Register System) ಯಲ್ಲಿ 2024ರೊಳಗೆ ಪ್ರತಿಯೊಂದು ಜನನ ಮತ್ತು ಮರಣ ದಾಖಲಾಗಬೇಕೆಂಬ ಗುರಿ ಇಟ್ಟುಕೊಳ್ಳಲಾಗಿದೆ. ಈ ಮಾಹಿತಿ ಸೆನ್ಸಸ್‌ನಲ್ಲಿ ಸ್ವಯಂ ಆಗಿ ಸೇರ್ಪಡೆಯಾಗುತ್ತದೆ ಎಂದೂ ಗೃಹ ಸಚಿವರು ಮಾಹಿತಿ ನೀಡಿದ್ಧಾರೆ.

Amit Shah Announces e-Census, says it will be accurate

ಇನ್ನು, ನಿನ್ನೆ ಉದ್ಘಾಟನೆಯಾದ ನೂತನ ಸೆನ್ಸಸ್ ಭವನದಿಂದ ಎಲ್ಲಾ ಈಶಾನ್ಯ ರಾಜ್ಯಗಳಲ್ಲಿ ಜನಗಣತಿ ಕಾರ್ಯ ಸುಲಭವಾಗುತ್ತದೆ. ಪ್ರಮುಖ ದತ್ತಾಂಶಗಳನ್ನ ನಿಖರವಾಗಿ ವಿಶ್ಲೇಷಿಸಲು ಇದು ನೆರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮೊದಲಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

(ಒನ್ಇಂಡಿಯಾ ಸುದ್ದಿ)

English summary
Home Miniser Amit Shah announced that nex census will be an e-census, that will be more scientific and 100 percent perfect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X