• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲು; ಹೆಲ್ತ್ ಬುಲೆಟಿನ್

|

ನವದೆಹಲಿ, ಸೆಪ್ಟೆಂಬರ್ 13: ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಪೂರ್ಣ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಏಮ್ಸ್ ಹೇಳಿದೆ. ಶನಿವಾರ ರಾತ್ರಿ ಅಮಿತ್ ಶಾ ಅವರನ್ನು ನವದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲುಮಾಡಲಾಗಿದೆ.

55 ವರ್ಷದ ಅಮಿತ್ ಶಾ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಆಗಸ್ಟ್ 14ರಂದು ಅವರು ಗುಣಮುಖರಾಗಿದ್ದರು. ಆಗಸ್ಟ್ 18ರಂದು ಮತ್ತೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 3ರಂದು ಡಿಸ್ಚಾರ್ಜ್ ಆಗಿದ್ದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೆ ಏಮ್ಸ್‌ಗೆ ದಾಖಲು

ಸೆ.12ರ ಶನಿವಾರ ರಾತ್ರಿ 11 ಗಂಟೆಗೆ ಅವರನ್ನು ಪುನಃ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಏಮ್ಸ್ ಆಸ್ಪತ್ರೆ ಭಾನುವಾರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಸಂಪೂರ್ಣ ವೈದ್ಯಕೀಯ ಪರೀಕ್ಷೆಗಾಗಿ ಅಮಿತ್ ಶಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದೆ.

ಕೊವಿಡ್‌ನಿಂದ ಚೇತರಿಸಿಕೊಂಡಿದ್ದ ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲು

ಅಮಿತ್ ಶಾ ಅವರನ್ನು ಡಿಸ್ಕಾರ್ಜ್ ಮಾಡುವ ಸಂದರ್ಭದಲ್ಲಿ ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಸಲಹೆ ನೀಡಲಾಗಿತ್ತು. ಸಂಸತ್ ಅಧಿವೇಶ ಆರಂಭವಾಗುವ ಹಿನ್ನಲೆಯಲ್ಲಿ ಅವರು ಪೂರ್ಣ ವೈದ್ಯಕೀಯ ಪರೀಕ್ಷಗೆ ಒಳಗಾಗಲಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊರೊನಾ ವರದಿ ನೆಗೆಟಿವ್

ಆಗಸ್ಟ್ 14ರಂದು ಕೋವಿಡ್‌ನಿಂದ ಗುಣಮುಖರಾಗಿದ್ದ ಅಮಿತ್ ಶಾ ಆಗಸ್ಟ್ 18ರಂದು ಆಯಾಸ, ಮೈ ಕೈ ನೋವಿನ ಹಿನ್ನಲೆಯಲ್ಲಿ ಪುನಃ ಆಸ್ಪತ್ರೆಗೆ ದಾಖಲಾಗಿದ್ದರು. 13 ದಿನಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಆಗಸ್ಟ್ 31ರಂದು ಡಿಸ್ಚಾರ್ಜ್ ಆಗಿದ್ದರು.

ಸೆ. 14ರ ಸೋಮವಾರದಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದೆ. ಸಂಸತ್‌ ಅಧಿವೇಶನಕ್ಕೂ ಮೊದಲು ಎಲ್ಲಾ ಸದಸ್ಯರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ. ವೈದ್ಯರ ಸಲಹೆಯಂತೆ ಸಂಪೂರ್ಣ ವೈದ್ಯಕೀಯ ಪರೀಕ್ಷೆ ಬಳಿಕ ಅಮಿತ್ ಶಾ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
Union Home Minister Amit Shah admitted for a complete medical checkup before the parliament session said AIIMS hospital. Amit Shah admitted to hospital on September 12, 2020 night
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X