ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ವಿರುದ್ಧ ಕಾರ್ಯಾಚರಣೆಗೆ ಬೋಫೋರ್ಸ್ ಗನ್ ಬಳಕೆ

|
Google Oneindia Kannada News

ನವದೆಹಲಿ, ಸಪ್ಟೆಂಬರ್.16: ಭಾರತ-ಚೀನಾ ಪೂರ್ವ ಭಾಗದ ಲಡಾಖ್ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಇದರ ನಡುವೆ ಭಾರತೀಯ ಸೇನೆಯು ಬೋಫೋರ್ಸ್ ಹೂವಿಟ್ಜರ್ ಗಳನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲು ಮುಂದಾಗಿದೆ.

1980ರ ದಶಕದ ಮಧ್ಯಭಾಗದಲ್ಲಿ ಫಿರಂಗಿದಳದ ರೆಜಿಮೆಂಟ್ ‌ಗೆ ಸೇರ್ಪಡೆಗೊಂಡ ಬೋಫೋರ್ಸ್ ಗನ್, ಕಡಿಮೆ ಮತ್ತು ಹೆಚ್ಚಿನ ಕೋನಗಳಲ್ಲಿ ಗುಂಡು ಹಾರಿಸುವ ಸಾಮರ್ಥ್ಯ ಹೊಂದಿದೆ.

ಪೂರ್ವ ಲಡಾಖ್‌ನಲ್ಲಿ ಯುದ್ಧಕ್ಕೆ ಭಾರತೀಯ ಸೇನೆ ಸರ್ವ ಸನ್ನದ್ಧಪೂರ್ವ ಲಡಾಖ್‌ನಲ್ಲಿ ಯುದ್ಧಕ್ಕೆ ಭಾರತೀಯ ಸೇನೆ ಸರ್ವ ಸನ್ನದ್ಧ

ಲಡಾಖ್ ಆರ್ಮಿ ಎಂಜಿನಿಯರ್‌ಗಳು ಒಂದು ಬೊಫೋರ್ಸ್ ಗನ್ ‌ಘರ್ಜಿಸಲು ಸಿದ್ಧವಾಗಲಿದೆ ಎಂದು ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಬೋಫೋರ್ಸ್ ಗನ್ ನಿಯತಕಾಲಿಕ ಸೇವೆ ಮತ್ತು ನಿರ್ವಹಣೆಗಾಗಿ ಅಗತ್ಯವಿರುವ ತಂತ್ರಜ್ಞರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Amid India China Conflict Indian Army Using The Bofors Guns For Operations

ಆಪರೇಷನ್ ವಿಜಯ್ ನಲ್ಲಿ ಬೋಫೋರ್ಸ್:

ಜಮ್ಮು-ಕಾಶ್ಮೀರದ ಡ್ರಾಸ್ ‌ನಲ್ಲಿ ಇತ್ತೀಚೆಗೆ ನಡೆಸಿದ ಆಪರೇಷನ್ ವಿಜಯ್‌ನ ಸೇರಿದಂತೆ ಅನೇಕ ಯುದ್ಧಗಳಲ್ಲಿ ದಿಗ್ವಿಜಯ ಸಾಧಿಸುವಲ್ಲಿ ಬೋಫೋರ್ಸ್ ಪ್ರಮುಖ ಪಾತ್ರ ವಹಿಸಿದೆ. ಅಗತ್ಯವಾದ ತುರ್ತು ಸಂದರ್ಭಗಳಲ್ಲಿ ಶಸ್ತ್ರಾಸ್ತ್ರಗಳ ನಿರ್ವಹಣೆ ಹೊಣೆಯು ಸೇನಾ ಇಂಜಿನಿಯರ್ ಗಳದ್ದು ಎಂದು ತಿಳಿಸಿದೆ.

"ಫೈರಿಂಗ್ ಪಿನ್‌ನಿಂದ ಟ್ಯಾಂಕ್‌ನ ಎಂಜಿನ್ ಜೋಡಣೆವರೆಗೆ, ಎಲ್ಲ ರೀತಿಯ ತಾಂತ್ರಿಕ ಕಾರ್ಯಗಳನ್ನು ಒದಗಿಸಲಾಗುತ್ತದೆ. ಈ ವಾಹನದ ಬಿಡಿಭಾಗಗಳನ್ನು ರವಾನಿಸುವುದೇ ಆಗಿದ್ದು, ಇದರ ಮೂಲಕವೇ ನಾವು ತಂತ್ರಜ್ಞರನ್ನು ಬಳಸಿಕೊಂಡು ಅಗತ್ಯ ಮತ್ತು ನಿಗದಿತ ಪ್ರದೇಶಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತದೆ" ಎಂದು ಲೆಫ್ಟಿನೆಂಟ್ ಕರ್ನಲ್ ಪ್ರೀತಿ ಕನ್ವರ್ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

English summary
Amid India China Conflict Indian Army Using The Bofors Guns For Operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X