ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ 3 ನೇ ಅಲೆ ಭೀತಿ: 11 ವಾರಗಳ ಕುಸಿತದ ನಂತರ ದೇಶದಲ್ಲಿ ಪ್ರಕರಣಗಳು ಶೇ.7.5 ಏರಿಕೆ

|
Google Oneindia Kannada News

ನವದೆಹಲಿ, ಆ.02: ಭಾರತದಲ್ಲಿ ಹೊಸ ಕೋವಿಡ್‌ ಪ್ರಕರಣಗಳು ಮೇ ವಾರದಲ್ಲಿ ಅಂದರೆ ಕೋವಿಡ್‌ನ ಎರಡನೇ ಅಲೆಯಲ್ಲಿ ಭಾರೀ ಏರಿಕೆಯಾಗಿತ್ತು. ಆ ನಂತರ ಕಳೆದ 11 ವಾರಗಳ ಹಿಂದೆ ಕೊಂಚ ಕಡಿಮೆಯಾಗಿತ್ತು. ಆದರೆ ಕಳೆದ 12 ವಾರಗಳಲ್ಲಿ ಮೊದಲ ಬಾರಿಗೆ ವಾರದಿಂದ ವಾರಕ್ಕೆ ಕೊರೊನಾ ವೈರಸ್‌ ಪ್ರಕರಣಗಳು ಏರಿಕೆಯನ್ನು ದಾಖಲಿಸಿವೆ.

ಇನ್ನು ಈ ಕೋವಿಡ್‌ ಪ್ರಕರಣಗಳ ಏರಿಕೆಯು ದೇಶದಲ್ಲಿ ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗದ ಮತ್ತೊಂದು ಅಲೆಯ ಆರಂಭಿಕ ಚಿಹ್ನೆಯಾಗಿರಬಹುದು ಎಂದು ಹೇಳಲಾಗಿದೆ. ಆದರೆ ಈ ಕೋವಿಡ್‌ ಪ್ರಕರಣಗಳು ಮುಖ್ಯವಾಗಿ ಕೇರಳಕ್ಕೆ ಹೆಚ್ಚು ಸೀಮಿತವಾಗಿದೆ. ಹಾಗೆಯೇ ಇತ್ತೀಚೆಗೆ ಕರ್ನಾಟಕ ಮತ್ತು ತಮಿಳುನಾಡಿನಲ್ಲೂ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿದೆ.

ಈ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್‌ ವರದಿ ಕಡ್ಡಾಯಈ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್‌ ವರದಿ ಕಡ್ಡಾಯ

ಭಾನುವಾರ ಕೊನೆಗೊಂಡ ಪ್ರಸಕ್ತ ವಾರದಲ್ಲಿ (ಜುಲೈ 26-ಆಗಸ್ಟ್ 1) ಭಾರತವು 2.86 ಲಕ್ಷ ಹೊಸ ಕೋವಿಡ್‌ ಪ್ರಕರಣಗಳನ್ನು ದಾಖಲಿಸಿದೆ. ಇದು ಹಿಂದಿನ ವಾರದ 2.66 ಲಕ್ಷಕ್ಕಿಂತ 7.5% ಏರಿಕೆಯಾಗಿದೆ. ಮೇ 3-9ರ ನಂತರ ಎರಡನೇ ಅಲೆಯ ಉತ್ತುಂಗಕ್ಕೇರಿದ ನಂತರ ದೇಶದಲ್ಲಿ ಕೋವಿಡ್‌ ಪ್ರಕರಣಗಳ ವಾರದ ಲೆಕ್ಕಾಚಾರದಲ್ಲಿ ಮೊದಲ ಬಾರಿಗೆ ಏರಿಕೆ ಕಂಡು ಬಂದಿದೆ. ಕೋವಿಡ್‌ ಪ್ರಕರಣಗಳ ಕುಸಿತವು ಶೇ.1.4% ಕ್ಕೆ ಇಳಿದಿದ್ದರೂ, ಕಳೆದ ವಾರದವರೆಗೂ ಮುಂದುವರೆಯಿತು.

 ಕೇರಳದಲ್ಲಿ ಕೋವಿಡ್‌ ಆಘಾತ

ಕೇರಳದಲ್ಲಿ ಕೋವಿಡ್‌ ಆಘಾತ

ಭಾರತದಲ್ಲಿ ಪ್ರಸ್ತುತ ಸಾಂಕ್ರಾಮಿಕದ ಕೇಂದ್ರಬಿಂದುವಾಗಿರುವ ಕೇರಳ, ಪ್ರಸ್ತುತ ವಾರದಲ್ಲಿ 1.4 ಲಕ್ಷ ಕೋವಿಡ್‌ ಪ್ರಕರಣಗಳನ್ನು ದಾಖಲಿಸಿದೆ. ಇದು ಹಿಂದಿನ ವಾರದ 1.1 ಲಕ್ಷಕ್ಕಿಂತ 26.5% ಹೆಚ್ಚಳವಾಗಿದೆ. ಕಳೆದ ಏಳು ದಿನಗಳಲ್ಲಿ ದೇಶದ ಎಲ್ಲಾ ಹೊಸ ಕೋವಿಡ್‌ ಪ್ರಕರಣಗಳಲ್ಲಿ ಕೇರಳ ರಾಜ್ಯವು ಅರ್ಧದಷ್ಟು (49%), ದೈನಂದಿನ ಸರಾಸರಿ 20,000 ಹೊಸ ಪ್ರಕರಣಗಳನ್ನು ಹೊಂದಿದೆ. ಕೇರಳದಲ್ಲಿ ಭಾನುವಾರ 20,728 ಪ್ರಕರಣಗಳು ದಾಖಲಾಗಿದೆ. ಇದು ಆರನೇ ದಿನವಾಗಿದ್ದು, ದೈನಂದಿನ ಎಣಿಕೆ 20,000 ಕ್ಕಿಂತ ಹೆಚ್ಚಾಗಿದೆ.

ಆತಂಕದ ಸಂಗತಿಯೆಂದರೆ, ಕೇರಳದ ಕೋವಿಡ್ ಉಲ್ಬಣವು ಅದರ ನೆರೆಯ ರಾಜ್ಯಗಳಿಗೆ ಪರಿಣಾಮ ಬೀರುವ ಲಕ್ಷಣಗಳು ಈಗಾಗಲೇ ಕಂಡು ಬಂದಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಕರ್ನಾಟಕವು ಹೊಸ ಪ್ರಕರಣಗಳಲ್ಲಿ 17.3% ಹೆಚ್ಚಳವನ್ನು ದಾಖಲಿಸಿದೆ. ಕರ್ನಾಟಕವು ಪ್ರಸಕ್ತ ವಾರದಲ್ಲಿ 12,442 ಪ್ರಕರಣಗಳನ್ನು ವರದಿ ಮಾಡಿದ್ದು, ಹಿಂದಿನ ಏಳು ದಿನಗಳಲ್ಲಿ 10,610 ಪ್ರಕರಣಗಳನ್ನು ದಾಖಲಿಸಿದೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಕೇರಳ ಹಾಗೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವುದನ್ನು ನಿರ್ಬಂಧಿಸಿದೆ. ಕೋವಿಡ್‌ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯಗೊಳಿಸಿದೆ.

 ಮಹಾರಾಷ್ಟ್ರ, ಕೇರಳದಲ್ಲಿ ಝಿಕಾ ವೈರಸ್‌ ಭೀತಿ: ಕೋವಿಡ್‌ ಸೋಂಕಿಗೂ ಝಿಕಾಗೂ ಏನಿದೆ ನಂಟು? ಮಹಾರಾಷ್ಟ್ರ, ಕೇರಳದಲ್ಲಿ ಝಿಕಾ ವೈರಸ್‌ ಭೀತಿ: ಕೋವಿಡ್‌ ಸೋಂಕಿಗೂ ಝಿಕಾಗೂ ಏನಿದೆ ನಂಟು?

 ತಮಿಳುನಾಡಿನಲ್ಲಿ ಹೇಗಿದೆ ಕೋವಿಡ್‌ ಸ್ಥಿತಿಗತಿ

ತಮಿಳುನಾಡಿನಲ್ಲಿ ಹೇಗಿದೆ ಕೋವಿಡ್‌ ಸ್ಥಿತಿಗತಿ

ತಮಿಳುನಾಡಿನಲ್ಲಿ, ವಾರದ ಪ್ರಕರಣಗಳ ಎಣಿಕೆ ಹಿಂದಿನ ವಾರದಂತೆಯೇ ಇತ್ತು. ಹಿಂದಿನ ವಾರದಲ್ಲಿ 13,095 ಕ್ಕೆ ಹೋಲಿಸಿದರೆ 13,090 ಪ್ರಕರಣಗಳು ಈ ವಾರ ದಾಖಲಾಗಿದೆ. ಇದು ರಾಜ್ಯದಲ್ಲಿ ಒಂಬತ್ತು ವಾರಗಳವರೆಗೆ ಇದ್ದ ಪ್ರಕರಣಗಳ ಸಂಖ್ಯೆಯನ್ನು ಕುಸಿಯುವ ಪ್ರವೃತ್ತಿಯನ್ನು ಮುರಿವರಿಯುವ ಸೂಚನೆ ನೀಡಿದೆ. ಸತತ ನಾಲ್ಕು ದಿನಗಳವರೆಗೆ ತಮಿಳುನಾಡಿನಲ್ಲಿ ದೈನಂದಿನ ಪ್ರಕರಣಗಳ ಎಣಿಕೆ ಸ್ವಲ್ಪ ಹೆಚ್ಚಾಗಿದ್ದು, ಬುಧವಾರ 1,756 ರಿಂದ ಭಾನುವಾರ 1,990 ಕ್ಕೆ ಏರಿಕೆಯಾಗಿದೆ.

 ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಶೇಕಡವಾರು ಎಷ್ಟಿದೆ?

ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಶೇಕಡವಾರು ಎಷ್ಟಿದೆ?

ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ವಾರದ ಕೋವಿಡ್‌ ಪ್ರಕರಗಳು ಹಿಂದಿನ ವಾರದಲ್ಲಿ ಶೇ.10 ಇಳಿಕೆ ಕಂಡಿತ್ತು. ಈ ವಾರದಲ್ಲಿ ಶೇ.6.2 ರಷ್ಟು ಕೋವಿಡ್‌ ಪ್ರಕರಣಗಳು ಇಳಿಕೆಯಾಗಿದೆ. ರಾಜ್ಯದಲ್ಲಿ ಈ ವಾರ 45,272 ಹೊಸ ಪ್ರಕರಣಗಳು ದಾಖಲಾಗಿದೆ. ಈ ಹಿಂದಿನ ವಾರದಲ್ಲಿ 48,253 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಈಶಾನ್ಯದಲ್ಲಿನ ಕೋವಿಡ್‌ ಪ್ರಕರಣಗಳನ್ನು ಹೆಚ್ಚಳ ಕಂಡ ಇನ್ನೊಂದು ರಾಜ್ಯದಲ್ಲಿ ಈ ವಾರ ಕೋವಿಡ್‌ ಪ್ರಕರಣ ಕಡಿಮೆಯಾದಂತೆ ಕಂಡುಬಂದಿದೆ.

ರಾಜ್ಯಕ್ಕೆ ಶುರುವಾಯ್ತು ಕೊರೊನಾ 3ನೇ ಅಲೆ ಆತಂಕ: ಕರ್ನಾಟಕಕ್ಕೆ ಬರುವವರು ಕಡ್ಡಾಯವಾಗಿ ಗಮನಿಸಿ!ರಾಜ್ಯಕ್ಕೆ ಶುರುವಾಯ್ತು ಕೊರೊನಾ 3ನೇ ಅಲೆ ಆತಂಕ: ಕರ್ನಾಟಕಕ್ಕೆ ಬರುವವರು ಕಡ್ಡಾಯವಾಗಿ ಗಮನಿಸಿ!

 ದೇಶದಲ್ಲಿ ಸಕ್ರಿಯ ಕೋವಿಡ್‌ ಪ್ರಕರಣಗಳ ಏರಿಕೆ

ದೇಶದಲ್ಲಿ ಸಕ್ರಿಯ ಕೋವಿಡ್‌ ಪ್ರಕರಣಗಳ ಏರಿಕೆ

ಸೋಂಕುಗಳ ಹೆಚ್ಚಳಕ್ಕೆ ಅನುಗುಣವಾಗಿ, ಕಳೆದ ಆರು ದಿನಗಳಲ್ಲಿ ದೇಶದಲ್ಲಿ ಸಕ್ರಿಯ ಪ್ರಕರಣಗಳು 14,000 ಹೆಚ್ಚಾಗಿದೆ. ಒಂದು ವಾರದ ಹಿಂದೆ ಕೋವಿಡ್‌ ಸಕ್ರಿಯ ಸಂಖ್ಯೆಯು 4 ಲಕ್ಷಕ್ಕಿಂತ ಕಡಿಮೆಯಿತ್ತು. ಆದರೆ ಭಾನುವಾರದ ವೇಳೆಗೆ ಮತ್ತೆ 4.15 ಲಕ್ಷಕ್ಕೆ ಏರಿದೆ. ವಾರದ ಆರನೇ ದಿನದಲ್ಲಿ ಭಾರತವು ಭಾನುವಾರ 40,000 ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿದೆ. ದಿನದ ಮೊತ್ತ 40,800 ಕ್ಕೆ ತಲುಪಿದೆ. ಆ ದಿನ 418 ಸಾವುಗಳು ವರದಿಯಾಗಿವೆ.

ಕಳೆದ ವಾರದಲ್ಲಿ, ಭಾರತವು 3,805 ಹೊಸ ಸಾವುಗಳನ್ನು ದಾಖಲಿಸಿದೆ. ಹಿಂದಿನ ವಾರದ ಸಂಖ್ಯೆ 6,848 ಕ್ಕೆ ಹೋಲಿಸಿದರೆ ಶೇ. 44 ರಷ್ಟು ತೀವ್ರ ಕುಸಿತ ಕಂಡು ಬಂದಿದೆ. ಆದರೆ ಹಿಂದಿನ ವಾರ, ಮಹಾರಾಷ್ಟ್ರದಿಂದ ಕೋವಿಡ್‌ ಪ್ರಕರಣ, ಸಾವುಗಳ ದತ್ತಾಂಶ ಪರಿಷ್ಕರಣೆ ಮಾಡಿ, 3,500 ಕ್ಕೂ ಹೆಚ್ಚು ಹಳೆಯ ಸಾವುಗಳನ್ನು ದಾಖಲು ಮಾಡಲಾಯಿತು. ಇದರಿಂದಾಗಿ ಈ ವಾರದಲ್ಲಿ ಕೋವಿಡ್‌ ಸಾವು ಪ್ರಕರಣಗಳು ಅಧಿಕವಾಗಿದೆ.

ಇನ್ನು ಕೋ ವಿನ್‌ ಪ್ರಕಾರ, ಭಾನುವಾರ 17.02 ಲಕ್ಷ ಕೋವಿಡ್‌ ಲಸಿಕೆಗಳನ್ನು ನೀಡಲಾಗಿದ್ದು, ಇದರಿಂದಾಗಿ ದೇಶದಲ್ಲಿ ಒಟ್ಟು ಕೋವಿಡ್‌ ಲಸಿಕೆ ನೀಡಿದ ಸಂಖ್ಯೆ 46.78 ಕೋಟಿಗೆ ಏರಿಕೆಯಾಗಿದೆ. ಹಾಗೆಯೇ 10.27 ಕೋಟಿ ಮಂದಿ ಸಂಪೂರ್ಣ ಕೋವಿಡ್‌ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Amid fear of Covid third wave Covid cases see 7.5% surge After 11 weeks of decline. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X