ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಲಡಾಖ್ ಗಡಿಯಲ್ಲಿ ಭಾರತೀಯ ಸೇನಾ ಟ್ಯಾಂಕ್

|
Google Oneindia Kannada News

ನವದೆಹಲಿ, ಸಪ್ಟೆಂಬರ್.27: ಭಾರತ ಮತ್ತು ಚೀನಾ ಪೂರ್ವದ ಲಡಾಖ್ ಗಡಿ ಪ್ರದೇಶದಲ್ಲಿ ಭಾರತೀಯ ಸೇನೆಯ ಭೀಷ್ಮ ಟ್ಯಾಂಕ್ ಮತ್ತು ಸೇನೆ ನಿಯೋಜಿಸಿರುವ ಬಗ್ಗೆ ಕೇಂದ್ರ ಸರ್ಕಾರವು ವಿಡಿಯೋವೊಂದನ್ನು ಭಾನುವಾರ ಬಿಡುಗಡೆ ಮಾಡಿದೆ.

ಚುಮರ್-ದೆಮ್ ಚೊಕ್ ಪ್ರದೇಶದಲ್ಲಿ ಟಿ-90 ಟ್ಯಾಂಕರ್ ಮತ್ತು ಬಿಎಂಪಿ ವಾಹನವನ್ನು ನಿಯೋಜಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷದ ಬಳಿಕ ಉಭಯ ರಾಷ್ಟ್ರಗಳು ಲಡಾಖ್ ಗಡಿಯಲ್ಲಿ ಭಾರಿ ಸೇನೆಯನ್ನು ನಿಯೋಜಿಸುತ್ತಿದೆ.

ಭಾರತ-ಚೀನಾ ಸಂಘರ್ಷದ ಮಧ್ಯೆ ಚಳಿಗಾಲದ ಭದ್ರತೆಗೆ ಸೇನೆ ಸನ್ನದ್ಧಭಾರತ-ಚೀನಾ ಸಂಘರ್ಷದ ಮಧ್ಯೆ ಚಳಿಗಾಲದ ಭದ್ರತೆಗೆ ಸೇನೆ ಸನ್ನದ್ಧ

"ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಭಾರತೀಯ ಸೈನ್ಯದ ಏಕೈಕ ರಚನೆಯಾಗಿದೆ. ಪ್ರಪಂಚದಲ್ಲಿ ಇಂತಹ ಕಠಿಣ ಭೂಪ್ರದೇಶಗಳಲ್ಲಿ ಯಾಂತ್ರಿಕೃತ ಪಡೆ ನಿಯೋಜಿಸಲಾಗಿದೆ. ಅಸಲಿಗೆ ಈ ಭೂಪ್ರದೇಶದಲ್ಲಿ ಟ್ಯಾಂಕರ್, ಕಾಲಾಳುಪಡೆ, ಯುದ್ಧ ವಾಹನ ಮತ್ತು ಭಾರೀ ಬಂದೂಕುಗಳ ನಿರ್ವಹಣೆ ಒಂದು ಸವಾಲಾಗಿದೆ" ಮೇಜರ್ ಜನರಲ್ ಅರವಿಂದ್ ಕಪೂರ್ ತಿಳಿಸಿದ್ದಾರೆ.

 Amid Conflict Between India And China, Video Shows Army Tanks Near LAC

ಭಾರತ-ಚೀನಾ ಗಡಿಯಲ್ಲಿ ಸೇನೆ ಸಿದ್ಧ:

ಚಳಿಗಾಲ ಸಂದರ್ಭದಲ್ಲಿ ಭಾರತ-ಚೀನಾ ಗಡಿ ನಿಯಂತ್ರಣ ರೇಖೆಯ ಪ್ರದೇಶದ ಉದ್ದಕ್ಕೂ ಸೇನೆ ನಿಯೋಜನೆಗೆ ಎರಡೂ ಕಡೆಗಳಲ್ಲಿ ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ. ಎರಡು ಭಾಗಗಳಲ್ಲೂ ಕನಿಷ್ಠ 50,000 ಯೋಧರನ್ನು ನಿಯೋಜಿಸಲು ಉಭಯ ಸೇನೆಗಳು ಸಿದ್ಧವಾಗಿವೆ. ವಾಸ್ತವಿಕ ಗಡಿ ರೇಖೆಯ ಉದ್ದಕ್ಕೂ ಚಳಿಗಾಲದಲ್ಲೂ ಸೇನಾ ಪ್ರಮಾಣವನ್ನು ಹೆಚ್ಚಿಸಬೇಕೇ ಬೇಡವೇ ಎನ್ನುವ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಚಳಿಗಾಲ ಆರಂಭಕ್ಕೂ ಮೊದಲೇ ಗಡಿಯಲ್ಲಿ ಉದ್ವಿಗ್ನತೆಯನ್ನು ನಿವಾರಿಸಿ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಭೆಗಳನ್ನೂ ನಡೆಸಲಾಯಿತು.

50 ದಿನಗಳಿಂದ ಸಾಲು ಸಾಲಾಗಿ ಸೇನಾ ಕಮಾಂಡರ್ ಹಂತದಲ್ಲಿ ಶಾಂತಿ ಮಾತುಕತೆ ನಡೆಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ತಿಳಿಸಿದ್ದರು. ಇದರ ಬೆನ್ನಲ್ಲೇ 6ನೇ ಸೇನಾ ಕಮಾಂಡರ್ ಹಂತದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಜಂಟಿ ಹೇಳಿಕೆ ಬಿಡುಗಡೆಗೊಳಿಸಲಾಗಿತ್ತು.

English summary
Amid Conflict Between India And China, Video Shows Army Tanks Near LAC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X