ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಡಮಾನ್-ನಿಕೋಬಾರ್ ನಲ್ಲಿ ಅಮೆರಿಕ ಪ್ರವಾಸಿಗನ ಹತ್ಯೆ, ಶವಕ್ಕಾಗಿ ಶೋಧ

|
Google Oneindia Kannada News

ಪೋರ್ಟ್ ಬ್ಲೇರ್/ನವದೆಹಲಿ, ನವೆಂಬರ್ 21: ಅಂಡಮಾನ್- ನಿಕೋಬಾರ್ ದ್ವೀಪ ಸಮೂಹದ ಸಂರಕ್ಷಿತ ಬುಡಕಟ್ಟು ಸಮುದಾಯದವರಿಂದ ಅಮೆರಿಕ ಪ್ರವಾಸಿಯೊಬ್ಬರ ಹತ್ಯೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಾನ್ ಆಲೆನ್ ಚೌ ಎಂಬ ಪ್ರವಾಸಿಗರನ್ನು ಏಳು ಮೀನುಗಾರರು ಉತ್ತರ ಸೆಂಟಿನೆಲ್ ದ್ವೀಪಕ್ಕೆ ಕರೆದೊಯ್ದಿದ್ದರು. ಅಲ್ಲಿ ಸ್ಥಳೀಯರಾದ ಸೆಂಟಿನಿಲಿ ಜನರು ವಾಸಿಸುತ್ತಾರೆ. 2011ರ ಗಣತಿ ಪ್ರಕಾರ ಈ ಸಮುದಾಯದವರ ಸಂಖ್ಯೆ 40 ಮಾತ್ರ. ಅವರಿಗೆ ಹೊರಜಗತ್ತಿನ ಜನರ ಜತೆಗೆ ಸಂಪರ್ಕ ಬೆಳೆಸಿಕೊಳ್ಳುವುದು ಸುತಾರಾಂ ಇಷ್ಟವಿಲ್ಲ.

ಚಿಕಾಗೋ ಆಸ್ಪತ್ರೆಯಲ್ಲಿ ಶೂಟೌಟ್: ಗನ್ ಮ್ಯಾನ್ ಸೇರಿ ಇಬ್ಬರ ಹತ್ಯೆ ಚಿಕಾಗೋ ಆಸ್ಪತ್ರೆಯಲ್ಲಿ ಶೂಟೌಟ್: ಗನ್ ಮ್ಯಾನ್ ಸೇರಿ ಇಬ್ಬರ ಹತ್ಯೆ

ನವೆಂಬರ್ 16ನೇ ತಾರೀಕು ಆ ದ್ವೀಪಕ್ಕೆ ತೆರಳಿದಾಗ ಪ್ರವಾಸಿಗ ಜಾನ್ ಆಲೆನ್ ಚೌನನ್ನು ನೋಡಿದ್ದೇ ಕೊನೆ. ಅವರ ಮೇಲೆ ಬಾಣಗಳಿಂದ ದಾಳಿ ನಡೆಸಲಾಯಿತು. ಬುಡಕಟ್ಟು ಸಮುದಾಯದವರು 27 ವರ್ಷದ ಅಮೆರಿಕ ಪ್ರವಾಸಿಗನನ್ನು ಕಡಲ ಕಡೆಗೆ ಎಳೆದೊಯ್ದರು ಎಂದು ಮೀನುಗಾರರು ಮಾಹಿತಿ ನೀಡಿದ್ದಾರೆ.

American tourist killed by protected tribe in Andaman islands

ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳು ಹೆಲಿಕಾಪ್ಟರ್ ಮೂಲಕ ಶವಕ್ಕಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನು ಆ ದ್ವೀಪದಲ್ಲಿ ಹೆಲಿಕಾಪ್ಟರ್ ಇಳಿಸುವುದು ಕೂಡ ಅಪಾಯಕಾರಿ. ಏಕೆಂದರೆ ಸೆಂಟಿನಿಲಿಗಳನ್ನು ಸಂಪರ್ಕಿಸಲು ಯತ್ನಿಸಿದರೆ ಪ್ರತಿಯಾಗಿ ಏನು ಬೇಕಾದರೂ ಮಾಡಬಹುದು ಎಂದು ಹೇಳಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಆಗಂತುಕನಿಂದ ಗುಂಡಿನ ದಾಳಿ, 13 ಜನರ ಹತ್ಯೆಕ್ಯಾಲಿಫೋರ್ನಿಯಾದಲ್ಲಿ ಆಗಂತುಕನಿಂದ ಗುಂಡಿನ ದಾಳಿ, 13 ಜನರ ಹತ್ಯೆ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ ಬಹಳ ಸೂಕ್ಷ್ಮವಾದ ಪ್ರದೇಶ. ಇಲ್ಲಿ ಪ್ರವೇಶಿಸುವುದಕ್ಕೆ ಪೂರ್ವಾನುಮತಿ ಅಗತ್ಯ. ಬುಡಕಟ್ಟು ಸಮುದಾಯದ ಸಂರಕ್ಷಣೆ ಮಾತ್ರವಲ್ಲ, ಸೈನ್ಯಕ್ಕೆ ಸಂಬಂಧಿಸಿದ ಮುಖ್ಯವಾದ ನಿಯೋಜನೆ ಇಲ್ಲಿ ಮಾಡಲಾಗಿದೆ.

English summary
An American tourist was killed by a protected tribe in the Andaman and Nicobar Islands, the police said today. Seven fishermen who took the tourist John Allen Chau to North Sentinel Island, where the indigenous Sentinelese people live, have been arrested, the police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X