ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಘಾಲಯದ ನೂರು ಹಳ್ಳಿಗಳನ್ನು ದತ್ತು ಪಡೆಯಲಿದೆ ಬರ್ಕ್ ಲಿ ವಿವಿ

By ಅನಿಲ್ ಆಚಾರ್
|
Google Oneindia Kannada News

ಅಮೆರಿಕ ಮೂಲದ ಬರ್ಕ್ ಲಿ ವಿಶ್ವವಿದ್ಯಾಲಯವು ಮೇಘಾಲಯ ರಾಜ್ಯದ ನೂರು ಹಳ್ಳಿಗಳನ್ನು ದತ್ತು ತೆಗೆದುಕೊಳ್ಳಲಿದ್ದು, ಅವುಗಳನ್ನು 'ಸ್ಮಾರ್ಟ್ ವಿಲೇಜ್'ಗಳನ್ನಾಗಿ ಮಾಡಲಿದೆ. ಪರಿಸರ ಸಮಸ್ಯೆಯ ಕಾರಣಕ್ಕೆ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಹೀಗೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಕೋನಾರ್ಡ್ ಕೆ ಸಂಗ್ಮಾ ಶುಕ್ರವಾರ ಹೇಳಿದ್ದಾರೆ.

ಸ್ವಿಟ್ಜರ್ ಲೆಂಡ್ ನ ಮಾಂಟ್ರೆಕ್ಸ್ ನಲ್ಲಿ ಕಾಕ್ಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ವಿಲೇಜ್ ಗಳ ನಿರ್ಮಾಣದ ಮೂಲಕ ಜನರನ್ನು ಉತ್ತೇಜಿಸುವ, ಸಿದ್ಧಗೊಳಿಸುವ ಹಾಗೂ ಬೆಸೆಯುವ ಉದ್ದೇಶ ಇದೆ. ಗುಂಪು ಹಾಗೂ ಸಂಘಟನೆಗಳಿಗೆ ಶಾಂತಿಯುತವಾದ ಪ್ರಪಂಚದ ಸೃಷ್ಟಿಯ ಗುರಿ ಇದೆ ಎಂದು ಅವರು ಹೇಳಿದ್ದಾರೆ.

ಕಾಶ್ಮೀರಿ ಸರಕುಗಳನ್ನು ಬಹಿಷ್ಕರಿಸಿ ಎಂದ ಮೇಘಾಲಯ ರಾಜ್ಯಪಾಲ ಕಾಶ್ಮೀರಿ ಸರಕುಗಳನ್ನು ಬಹಿಷ್ಕರಿಸಿ ಎಂದ ಮೇಘಾಲಯ ರಾಜ್ಯಪಾಲ

ಈ ವರ್ಷದ ಸೆಪ್ಟೆಂಬರ್ ನಲ್ಲಿ ಮೇಘಾಲಯ ರಾಜ್ಯ ಸರಕಾರವು ಈ ಸಂಬಂಧ ಬರ್ಕ್ ಲಿ ವಿಶ್ವವಿದ್ಯಾಲಯದ ಜತೆಗೆ ಒಪ್ಪಂದಕ್ಕೆ ಸಹಿ ಹಾಕಲಿದೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಸ್ಮಾರ್ಟ್ ವಿಲೇಜ್ ಗಳಿವೆ. ಇದರಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವ ಪ್ರಮಾಣ ಹಾಗೂ ಪರಿಸರದ ಸಮಸ್ಯೆಗಳು ಕಡಿಮೆ ಆಗುತ್ತಿವೆ ಎಂದು ಅವರು ಹೇಳಿದ್ದಾರೆ.

America based Berkley university will adopt 100 villages in Meghlaya

ನಮ್ಮ ರಾಜ್ಯದಲ್ಲಿ ಇರುವ ಜೀವಂತ ಬೇರಿನ ಸೇತುವೆ ಬಗ್ಗೆ ಇಡೀ ಜಗತ್ತಿಗೆ ಗೊತ್ತಿರುವುದು ಹೆಮ್ಮೆಯ ಸಂಗತಿ. ನಮ್ಮ ಸರಕಾರ ದೇಸಿ ಜ್ಞಾನಕ್ಕೆ ಪ್ರಾಶಸ್ತ್ಯ ನೀಡಿದೆ. ಸರಕಾರಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸುವುದನ್ನು ನಾವು ಪ್ರೋತ್ಸಾಹಿಸುತ್ತಿದ್ದೇವೆ ಎಂದಿದ್ದಾರೆ.

ಉತ್ತರ ಕರ್ನಾಟಕದ ಸರ್ಕಾರಿ ಶಾಲೆ ದತ್ತು ಪಡೆದ ಪ್ರಜ್ವಲ್ ದೇವರಾಜ್

ಮೂವತ್ಮೂರು ಲಕ್ಷ ಜನಸಂಖ್ಯೆ ಇರುವ ಮೇಘಾಲಯ ರಾಜ್ಯವು ಜಗತ್ತಿನಲ್ಲೇ ಆತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂದು ಪ್ರಸಿದ್ಧಿ ಪಡೆದಿದೆ. ಇನ್ನು ಮೇಘಾಲಯದಲ್ಲಿ ಆರೂವರೆ ಸಾವಿರ ಹಳ್ಳಿಗಳಿವೆ ಎಂದು ಅವರು ಹೇಳಿದ್ದಾರೆ.

English summary
America based Berkley university will adopt 100 villages in Meghlaya to improve it as smart villages, to avoid urban migration and environment issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X