• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಮಾಜಿಕ ನ್ಯಾಯದ ಹರಿಕಾರ ಬಾಬಾ ಸಾಹೇಬ್ ಗೆ ಗಣ್ಯರ ನಮನ

|

ನವದೆಹಲಿ, ಏಪ್ರಿಲ್ 14: ಸಾಮಾಜಿಕ ಅಸಮತೋಲನದ ವಿರುದ್ಧ ಹೋರಾಡಿದ, ಜಾತ್ಯಾತೀತ ನಾಯಕ ಡಾ. ಭೀಮರಾವ್ ಅಂಬೇಡ್ಕರ್(14 ಏಪ್ರಿಲ್ 1891 - 6 ಡಿಸೆಂಬರ್ 1956) ಅವರ ಜನ್ಮದಿನವನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಅಂಬೇಡ್ಕರ್ ಗೆ ಗೌರವ ಸಲ್ಲಿಸುವ ಒಂದಾದರೂ ಕೆಲಸ ಕಾಂಗ್ರೆಸ್ ಮಾಡಿದೆಯಾ?

ಭಾರತೀಯ ಸಂವಿಧಾನದ ನಿರ್ಮಾತೃರಾಗಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಇನ್ನು ಕೆಲವೇ ಮತ, ಜಾತಿಯ ಸ್ವತ್ತು ಎಂಬಂತೆ ನೋಡುತ್ತಿರಬಹುದು. ಆದರೆ ಅವರು ಯಾವೊಂದು ಜಾತಿಗೂ, ಮತಕ್ಕೂ ಸೀಮತಿತರಲ್ಲ. ಒಬ್ಬ ಸಂವಿಧಾನ ಶಿಲ್ಪಿಯಾಗಿ, ಕಡುಬಡತನದಲ್ಲೂ ಓದಿ ಸ್ನಾತಕೋತ್ತರ ಪದವಿ ಗಳಿಸಿ, ಅದಮ್ಯ ಪುಸ್ತಕ ಪ್ರೇಮಿಯಾಗಿ, ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದುನಿಂತ ಹೋರಾಟಗಾರರಾಗಿ, ಅಸ್ಪೃಶ್ಯತೆಯೆಂಬ ಅನಿಷ್ಟವನ್ನು ಹೊಡೆದೋಡಿಸಲು ಕಂಕಣಬದ್ಧರಾದ ಸಾಮಾಜಿಕ ಸುಧಾರಕರಾಗಿ ಅವರು ಇಡೀ ದೇಶದ ಸ್ವತ್ತು.

ಅಂಬೇಡ್ಕರ್ 'ನೀಲಿ' ಪ್ರತಿಮೆ ಈಗ ಪಂಜರದಲ್ಲಿ!

ಇಂದು ದೇಶದಾದ್ಯಂತ ಅಂಬೇಡ್ಕರ್ ಪ್ರತಿಮೆಯನ್ನು ದ್ವಂಸಮಾಡುವಂಥ ಘಟನೆಗಳು ಹಲವೆಡೆ ನಡೆದಿವೆ. ಒಂದು ಜಾತಿ, ಪಂಥದ ನಾಯಕ ಎಂಬಂತೆ ಅವರನ್ನು ಬಿಂಬಿಸುವ, ಅಥವಾ ಅವರ ಕೊಡುಗೆಯನ್ನು ಪೂರ್ವಗ್ರಹದ ತಕ್ಕಡಿಯಲ್ಲಿಟ್ಟು ತೂಗುವ ಪ್ರಯತ್ನ ಮಾಡದೆ ಮಹಾನ್ ನಾಯಕನನ್ನು ಪ್ರತಿಯೊಬ್ಬರೂ ಗೌರವಿಸುವ ಅಗತ್ಯವಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಬಹುಮುಖಿ ವ್ಯಕ್ತಿತ್ವದ ಬಾಬಾ ಸಾಹೇಬ್

ಆಧುನಿಕ ಭಾರತವನ್ನು ಜಾತಿ ಮತ್ತು ಪೂರ್ವಗ್ರಹದಿಂದ ಮುಕ್ತವಾಗಿಸಲು ಜೀವನದುದ್ದಕ್ಕೂ ಸಾಕಷ್ಟು ಬೆಲೆತೆತ್ತ ಬಹುಮುಖೀ ವ್ಯಕ್ತಿತ್ವ ಬಾಬಾ ಸಾಹೇಬ್ ಅವರದು. ಸೌಲಭ್ಯವಂಚಿತರಿಗೆ ಮತ್ತು ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಗುರಿಯೂ ಅವರ ಮನಸ್ಸಿನಲ್ಲಿತ್ತು. ಅಂಥ ಅಮೋಘ ವ್ಯಕ್ತಿಯ ಜನ್ಮದಿನದಂದು ಅವರಿಗೆ ನನ್ನ ನಮನ ಎಂದಿದ್ದಾರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್.

ನಾವು ಅವರ ಋಣದಲ್ಲಿದ್ದೇವೆ

ಪೂಜ್ಯ ಬಾಬಾ ಸಾಹೇಬ್ ಅವರು ಈ ಸಮಾಜದ ಕಡುಬಡವ ಮತ್ತು ಸಾಧಾರಣ ವರ್ಗದ ಜನರಿಗೆ ಹೊಸ ಭರವಸೆಯನ್ನು ನೀಡಿದವರು. ನಮ್ಮ ಸಂವಿಧಾನವನ್ನು ನಿರ್ಮಿಸುವಲ್ಲಿ ಅವರು ನೀಡಿದ ಅನನ್ಯ ಕೊಡುಗೆಯನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ನಾವು ಅವರ ಋಣದಲ್ಲಿದ್ದೇವೆ. ಅಂಬೇಡ್ಕರ್ ಜಯಂತಿಯ ಶುಭಾಶಯಗಳು ಎಂದು ಬಾಬಾ ಸಾಹೇಬ್ ರನ್ನು ತುಂಬು ಮನಸ್ಸಿನಿಂದ ನೆನೆದಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಸಾಮಾಜಿಕ ನ್ಯಾಯದ ಹರಿಕಾರ

ಬಾಬಾಸಾಹೇಬ್ ಅಂಬೇಡ್ಕರ್ ಸಾಮಾಜಿಕ ನ್ಯಾಯದ ಹರಿಕಾರ, ಅನ್ಯಾಯ, ಅಸಮಾನತೆ ಮತ್ತು ಶೋಷಣೆಯ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿ . ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಮಂತ್ರಗಳನ್ನು ಶೋಷಿತ ವರ್ಗಕ್ಕೆ ನೀಡಿದ ಯುಗಪುರುಷ. ಈ ಕಾರಣಕ್ಕಾಗಿಯೇ ಇಂದು ಜಗತ್ತು ಅಂಬೇಡ್ಕರ್ ಅವರಿಗೆ ತಲೆಬಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಜನಮಾನಸದಲ್ಲಿ ಅವರು ಜೀವಂತ

ಡಾ.ಬಿ ಆರ್ ಅಂಬೇಡ್ಕರ್ ಅವರ ಜಯಂತಿಯಂದು ನಾನು ಅವರಿಗೆ ತಲೆಬಾಗುತ್ತೇನೆ. ಸಮಾಜದ ಬಡ ಮತ್ತು ಸಾಮಾನ್ಯ ವರ್ಗದ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಸಂವಿಧಾನ ಶಿಲ್ಪಿಗೆ ನನ್ನ ನಮನ. ಅವರು ತಮ್ಮ ಸೇವಾಕಾರ್ಯದಿಂದ ಕೋಟಿ ಕೋಟಿ ಭಾರತೀಯರ ಹೃದಯದಲ್ಲಿ ಇಂದಿಗೂ ಜೀವಂತವಾಗಿದ್ದಾರೆ ಎಂದಿದ್ದಾರೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Founder of Indian constitution, Dr B R Ambedkar's birthday today. Whole country is celebrating Baba Saheb's birthday as Ambedkar jayanti. Prime minister Narendra Modi, President Ramnath Kovind and other leaders remember the great soul of this nation on twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more