ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿರೂಪಗೊಂಡ ಭಾರತದ ಭೂಪಟ ಬಳಕೆ, ಅಮೆಜಾನ್ ಗೆ ಮತ್ತೆ ಸಂಕಷ್ಟ

ಅನ್ ಲೈನ್ ಮಾರಾಟ ಸಂಸ್ಥೆ ಅಮೆಜಾನ್ ಮತ್ತೊಮ್ಮೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ವಿರೂಪಗೊಂಡ ಭಾರತದ ಭೂಪಟ ಬಳಕೆ ಮಾಡಿರುವ ಅಮೆಜಾನ್ ವಿರುದ್ಧ ಬಿಜೆಪಿ ಮುಖಂಡರೊಬ್ಬರು ಕಿಡಿಕಾರಿದ್ದಾರೆ.

By Mahesh
|
Google Oneindia Kannada News

ನವದೆಹಲಿ, ಮೇ 09: ಡೋರ್ ಮ್ಯಾಟ್ ವಿವಾದದ ನಂತರ ಪಾಠ ಕಲಿಯದ ಆಮೆಜಾನ್ ಸಂಸ್ಥೆ ಈಗ ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿದೆ.

ವಿವಾದಿತ ಭೂಪ್ರದೇಶಗಳಿಲ್ಲದೆ ವಿರೂಪಗೊಂಡಿರುವ ಭಾರತದ ಭೂಪಟವನ್ನು ಬಳಕೆ ಮಾಡಿ ವಸ್ತುವೊಂದನ್ನು ಮಾರಾಟಕ್ಕಿಟ್ಟಿದೆ. ಅಮೆಜಾನ್ ಕೆನಡಾ ಪೇಜ್ ನಲ್ಲಿ ಕಂಡು ಬಂದ ಈ ಪ್ರಮಾದವನ್ನು ಖಂಡಿಸಿ, ಬಿಜೆಪಿ ದೆಹಲಿ ಘಟಕದ ಮುಖಂಡರೊಬ್ಬರು ತಿರುಗಿಬಿದ್ದಿದ್ದಾರೆ.

Amazon in trouble again for selling Indian map without disputed territories

ತಪ್ಪು ತಿದ್ದುಕೊಂಡು ಸರಿಯಾದ ಭೂಪಟ ಬಳಸುವಂತೆ ಅಮೆಜಾನ್ ಸಂಸ್ಥೆಗೆ ಆಗ್ರಹಿಸಿ, ಬಿಜೆಪಿ ದೆಹಲಿ ಘಟಕದ ವಕ್ತಾರ ತಾಜಿಂದರ್‌ ಪಾಲ್ ಟ್ವೀಟ್ ಮಾಡಿದ್ದಾರೆ.

DIY ಥಿಂಕರ್ ಎಂಬ ಹೆಸರಿನ ವ್ಯಕ್ತಿಯ ಐಡಿಯಿಂದ ಈ ಪೋಸ್ಟ್ ಹಾಕಲಾಗಿದೆ. ಈ ವೆಬ್‌ ಸೈಟ್‌ನಲ್ಲಿ ಇತ್ತೀಚೆಗೆ ನೋಂದಣಿ ಮಾಡಿಕೊಂಡಿರುವ ಈ ಖಾತೆ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಈ ಭೂಪಟಕ್ಕೆ 25.35 ಡಾಲರ್ ಬೆಲೆ ನಮೂದಿಸಿದ್ದಾನೆ. ಇದು ಭೂಆಕಾಶ ಮಾಹಿತಿ ನಿಯಂತ್ರಣ ಕಾಯ್ದೆ 2016ರ ಉಲ್ಲಂಘನೆಯಾಗಿದೆ.

ಈ ಕಾಯ್ದೆಯ ಪ್ರಕಾರ ಭಾರತದ ಯಾವುದೇ ಭೂಮಿ ಅಥವಾ ಆಕಾಶದ ಪ್ರದೇಶದ ಬಗ್ಗೆ ಲೇಖನ ಅಥವಾ ಚಿತ್ರ ಪ್ರಕಟಿಸುವ ಮುನ್ನ ಸರಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದನ್ನು ಉಲ್ಲಂಘಿಸಿದವರಿಗೆ 7 ವರ್ಷ ಜೈಲುಶಿಕ್ಷೆ ಅಥವಾ 1ರಿಂದ 100 ಕೋಟಿ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಭಾರತದ ನಕ್ಷೆ ಅಥವಾ ಧ್ವಜಕ್ಕೆ ಅವಮಾನವಾಗುವಂತೆ ವಿರೂಪಗೊಳಿಸಿರುವ ವಸ್ತುಗಳನ್ನು ಈ ಹಿಂದೆಯೂ ಹಲವು ಬಾರಿ ಅಮೆಜಾನ್ ಸಂಸ್ಥೆ ಮಾರಾಟ ಮಾಡಿ ವಿವಾದಕ್ಕೆ ಕಾರಣವಾಗಿತ್ತು.

English summary
Amazon in trouble again for selling Indian map without disputed territories. Amazon Canada has been slammed by spokesperson of BJP, Tajinder Pal S Bagga
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X