ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮರನಾಥ ಯಾತ್ರೆಗೆ ನೋಂದಣಿ ಮಾಡಿಕೊಳ್ಳುವುದು ಹೇಗೆ?

|
Google Oneindia Kannada News

ಜಮ್ಮು, ಮಾರ್ಚ್ 29: ಜೂನ್ 28ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಗೆ ಏಪ್ರಿಲ್ 1ರಿಂದ ಯಾತ್ರೆಗೆ ನೋಂದಣಿ ಕಾರ್ಯ ಆರಂಭವಾಗಲಿದೆ. 56 ದಿನಗಳ ಈ ಯಾತ್ರೆಯು ಇದೇ ಜೂನ್ 28ರಿಂದ ಆರಂಭಗೊಳ್ಳುತ್ತಿದ್ದು, ಆಗಸ್ಟ್‌ 22ಕ್ಕೆ ಕೊನೆಯಾಗಲಿದೆ.

2020ನೇ ಸಾಲಿನಲ್ಲಿ ಜೂನ್ 23 ರಿಂದ ಆಗಸ್ಟ್ 3ರ ತನಕ ನಡೆಯಬೇಕಿದ್ದ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು. ಈ ಬಾರಿ ಮತ್ತೆ ಯಾತ್ರೆ ಆರಂಭಗೊಳ್ಳುತ್ತಿದ್ದು, ಅನಂತ್ ನಾಗ್ ಜಿಲ್ಲೆಯ ಪಹಲ್ ಗಾಮ್ ನಿಂದ ಹಾಗೂ ಗಂದರ್ಬಾಲ್ ಜಿಲ್ಲೆಯ ಬಾಲ್ಟಲ್ ಎರಡು ಮಾರ್ಗಗಳಿಂದ ಮಾತ್ರ ತೆರಳಲು ಅನುಮತಿ ನೀಡಲಾಗಿದೆ.

ಅಮರನಾಥ ಯಾತ್ರೆಗೆ ಏಪ್ರಿಲ್ 1ರಿಂದ ನೋಂದಣಿ ಆರಂಭಅಮರನಾಥ ಯಾತ್ರೆಗೆ ಏಪ್ರಿಲ್ 1ರಿಂದ ನೋಂದಣಿ ಆರಂಭ

ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಯಾತ್ರೆ ನಡೆಸಲಾಗುತ್ತದೆ ಎಂದು ಈ ತಿಂಗಳ ಆರಂಭದಲ್ಲಿ ಸಭೆ ನಡೆಸಿದ ಅಧಿಕಾರಿಗಳು ತಿಳಿಸಿದ್ದರು. ಯಾತ್ರೆ ತೆರಳಲಿರುವ ಜಮ್ಮು-ಪಹಲ್ಗಾಮ್ ಮಾರ್ಗ ಮತ್ತು ಜಮ್ಮು-ಬಲ್ತಾಲ್ ರಸ್ತೆಯ ದಾರಿಯುದ್ದಕ್ಕೂ 40,000ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಸಿಆರ್ ಪಿಎಫ್ ಮತ್ತು ರಾಜ್ಯ ಪೊಲೀಸರನ್ನು ಪಹರೆ ನಿಲ್ಲಿಸಲಾಗುತ್ತದೆ ಎಂದು ತಿಳಿದುಬಂದಿದೆ.

 Amarnath Yatra Registration To Start From April 1

ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಹಾಗೂ ಕಾಶ್ಮೀರ ಬ್ಯಾಂಕ್, ಯೆಸ್ ಬ್ಯಾಂಕ್‌ನ ದೇಶದ ಎಲ್ಲಾ ಶಾಖೆಗಳ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಅಮರನಾಥ ಯಾತ್ರೆ ಮಂಡಳಿ ಮುಖ್ಯಸ್ಥ ನಿತಿಶ್ವರ್ ಕುಮಾರ್ ತಿಳಿಸಿದ್ದಾರೆ. ನೋಂದಣಿ ಪ್ರಕ್ರಿಯೆ, ಅರ್ಜಿ ಹಾಗೂ ರಾಜ್ಯಾವಾರು ಬ್ಯಾಂಕ್ ಶಾಖೆಗಳ ಸಂಪೂರ್ಣ ವಿವರವು ಮಂಡಳಿಯ ವೆಬ್ ಸೈಟ್‌ನಲ್ಲಿ ಲಭ್ಯವಿದೆ.

ಯಾತ್ರೆಗೆ ಮಾರ್ಚ್ 15ರಂದು ನೀಡುವ ಆರೋಗ್ಯ ಪ್ರಮಾಣಪತ್ರ ಕಡ್ಡಾಯ. 13 ವರ್ಷಕ್ಕಿಂತ ಚಿಕ್ಕವರು, 75 ವರ್ಷಕ್ಕೂ ಅಧಿಕ ವಯಸ್ಸಿನ ಹಿರಿಯರು, 6 ತಿಂಗಳ ಗರ್ಭಿಣಿಯರಿಗೆ ನೋಂದಣಿ ನಿರ್ಬಂಧಿಸಲಾಗಿದೆ ಎಂದು ಅಮರನಾಥ್ ಯಾತ್ರೆ ಮಂಡಳಿ ಪ್ರಕಟಿಸಿದೆ. ನೋಂದಣಿ ಮಾಡಲು ಬಯಸುವವರು www.shriamarnathjishrine.comಗೆ ಭೇಟಿ ನೀಡಬಹುದಾಗಿದೆ.

ಯಾತ್ರೆಗೆ ಏನೆಲ್ಲಾ ಅವಶ್ಯಕ? ಇಲ್ಲಿದೆ ಮಾಹಿತಿ...
* ಆರೋಗ್ಯ ಪ್ರಮಾಣಪತ್ರ ಹಾಗೂ ಫೋಟೊಗಳು ಒಳಗೊಂಡಂತೆ ಪ್ರಮುಖ ದಾಖಲೆಗಳು.
* ನೋಂದಣಿ ಅರ್ಜಿ ತುಂಬಿಸಿ ಅಪ್‌ಲೋಡ್ ಮಾಡುವುದು.
* ಮೊಬೈಲ್ ನಂಬರ್ ಪರಿಶೀಲನೆ.
* ಅರ್ಜಿ ಪ್ರಕ್ರಿಯೆ ಮುಗಿದ ನಂತರ ಮೊಬೈಲ್‌ಗೆ ಯಾತ್ರೆಯ ದೃಢೀಕರಣ ಸಂದೇಶ ಬರುತ್ತದೆ.
* ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಸಲ್ಲಿಸಬೇಕು.
* ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಯಾತ್ರಾ ಪರ್ಮಿಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

English summary
The annual 56-day Amarnath yatra will commence on June 28 and registration to start from april 1
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X