ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃತಕ ಬುದ್ದಿಮತ್ತೆ ಮನುಕುಲಕ್ಕೆ ಹಾನಿಕಾರಕ : ಸ್ಟಿಫನ್ ಹಾಕಿಂಗ್

By Manjunatha
|
Google Oneindia Kannada News

ನ್ಯೂಸ್ ಇಂಡಿಯಾ, ನವೆಂಬರ್ 29 : ಈಗ ಎಲ್ಲೆಲ್ಲೂ ಕೃತಕ ಬುದ್ದಿಮತ್ತೆಯದ್ದೆ ಮಾತು, ಗೂಗಲ್, ಫೆಸ್ ಬುಕ್, ಜಪಾನಿನ ಹಲವು ಪ್ರತಿಷ್ಟಿತ ಕಂಪೆನಿಗಳು ಕೃತಕ ಬುದ್ದಿಮತ್ತೆಯ (ಎ.ಐ) ಹಿಂದೆ ಬಿದ್ದಿವೆ.

ಹುಷಾರ್... ಅನ್ಯಗ್ರಹ ಜೀವಿ ಭೂಮಿಗೆ ಬಂದ್ರೆ ಅನಾಹುತಹುಷಾರ್... ಅನ್ಯಗ್ರಹ ಜೀವಿ ಭೂಮಿಗೆ ಬಂದ್ರೆ ಅನಾಹುತ

ಇತ್ತೀಚೆಗೆ ಫೇಸ್ ಬುಕ್ ಕೃತಕ ಬುದ್ದಿಮತ್ತೆ ಯಂತ್ರವೊಂದನ್ನು ಪರೀಕ್ಷೆ ನಡೆಸುವ ಸಂದರ್ಭ ಯಂತ್ರದ ಕಾರ್ಯಾಚರಣ ವ್ಯವಸ್ಥೆ ಹೊಸದೆ ಭಾಷೆಯನ್ನು ತನ್ನಷ್ಟಕ್ಕೆ ತಾನೇ ಸೃಷ್ಠಿಮಾಡಿಸಿಕೊಂಡಿದ್ದು, ಕೃತಕ ಬುದ್ದಿಮತ್ತೆ ಹಿಂದೆ ಬಿದ್ದಿದ್ದ ವಿಜ್ಞಾನಿಗಳಲ್ಲಿ ಗಾಬರಿ ಹುಟ್ಟಿಸಿದೆ. ಜನರಲ್ಲಿಯೂ ಕೃತಕ ಬುದ್ದಿಮತ್ತೆಯ ಬಗ್ಗೆ ಭಯ ಮೂಡಲು ಪ್ರಾರಂಭಿಸಿದೆ.

Alternative inteligence may cause damage tu humans : Stephen Hawking

ಕೃತಕ ಬುದ್ದಿಮತ್ತೆ ಹೊಂದಿದ ಯಂತ್ರಗಳು ಅಥವಾ ರೊಬಾಟ್ ಗಳು ತನ್ನ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತವೆ. ಹಾಗಾಗಿ ಅವುಗಳ ಮೇಲೆ ಮಾನವರ ಹಿಡಿತ ಇರುವುದಿಲ್ಲ ಇದೆ ವಿಜ್ಞಾನಿಗಳ ಭಯಕ್ಕೆ ಮೂಲ ಕಾರಣ. ಆದರೆ ಇದು ಮಾನವನ ಕೆಲಸವನ್ನು ವಿಪರೀತ ಸರಳ ಮಾಡಿಬಿಡಬಲ್ಲದು ಎಂಬುದು ಕೃತಕ ಬುದ್ದಿಮತ್ತೆ ಯಂತ್ರಗಳ (ಎ.ಐ) ಪರವಾಗಿರುವವರ ವಾದ.

ಆದರೆ ಜಗತ್ತಿನಲ್ಲಿನ ಎಲ್ಲ ವಿಜ್ಞಾನಿಗಳು ಗೌರವಿಸುವ, ಪ್ರಸ್ತುತ ಭೂಮಿಮೇಲೆ ಬದುಕಿರುವ ನಂ.1 ವಿಜ್ಞಾನಿ ಎಂದೇ ಕರೆಯಲ್ಪಡುವ ಸ್ಟಿಫನ್ ಹಾಕಿಂಗ್ ಅವರು ಕೃತಕ ಬುದ್ದಿಮತ್ತೆ ಬಗ್ಗೆ ನಿರಾಶಾದಾಯಕ ಮಾತುಗಳನ್ನಾಡಿದ್ದಾರೆ.

ಕೃತಕ ಬುದ್ದಿಶಕ್ತಿ ಸಣ್ಣ ಪುಟ್ಟ ಸಹಾಯವನ್ನು ಮನುಕುಲಕ್ಕೆ ಮಾಡಬಹುದು, ಆದರೆ ಅದು ಮಾಡುವ ಕೆಡುಕುಗಳು ಬಹಳಷ್ಟು ಎಂದು ತಾರ್ಕಿಕ ಭವಿಷ್ಯ ನುಡಿದಿದ್ದಾರೆ.

ಲಿಸ್ಬಾನ್ ನಲ್ಲಿ ನಡೆದ ಅಂತರರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೃತಕ ಬುದ್ದಿಮತ್ತೆಯನ್ನು ನಿಯಂತ್ರಿಸುವ ಸಾಧನ ತಯಾರಿಸದೆ ಕೃತಕ ಬುದ್ದಿಮತ್ತೆ ತಯಾರಿಸುವುದು ಅಪಾಯಕಾರಿ ಎಂದ ಅವರು 'ಕೃತಕ ಬುದ್ದಿಮತ್ತೆ ಸಾಧನಗಳು ಮನುಷ್ಯನ ಬುದ್ದಿವಂತಿಕೆಯನ್ನು ಅನುಸರಿಸಿ ಅದನ್ನು ಮೀರಲು ಪ್ರಯತ್ನಿಸುತ್ತವೆ ಇದು ಬಹು ದೊಡ್ಡ ಅಪಾಯ ಎಂದು ಅವರು ಎಚ್ಚರಿಸಿದ್ದಾರೆ.

ಸ್ಟಿಫನ್ ಹಾಕಿಂಗ್ ಅವರ ಎಚ್ಚರಿಕೆಯಿಂದ ಕೃತಕ ಬುದ್ದಿಮತ್ತೆ ಸಂಶೋದನೆಗೆ ಹಿನ್ನಡೆ ಆಗಲಿದೆ.

English summary
Stephen Hawking believes that while AI can do some good, it can do a lot of harm and we need to be prepared for the risks involved.Stephen Hawking’s outlook on the future of AI isn’t so optimistic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X