ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲೋಕ್ ವರ್ಮಾ ಮಹಾನಿರ್ಗಮನದ ಹಿಂದೆ ನಡೆದಿದ್ದು ಏನು?

|
Google Oneindia Kannada News

ನವದೆಹಲಿ, ಜನವರಿ 11: ಎಪ್ಪತ್ತೆರಡು ದಿನಗಳ ಹೋರಾಟದ ನಂತರ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಮರಳಿದ ಒಂದೇ ದಿನದಲ್ಲಿ ಅಲೋಕ್ ವರ್ಮಾ ಅವರಿಗೆ ಮತ್ತೆ ಗೇಟ್ ಪಾಸ್ ನೀಡಲಾಗಿದೆ. ಅವರನ್ನು ಬೇರೆಯ ಇಲಾಖೆಗೆ ನಿರ್ದೇಶಕರಾಗಿ ನೇಮಿಸಲಾಗಿದೆ.

ಕೇಂದ್ರ ಸರ್ಕಾರವು ಕಡ್ಡಾಯ ರಜೆಯ ಮೇಲೆ ಕಳುಹಿಸಿದ್ದ ಅಲೋಕ್ ವರ್ಮಾ ಅವರನ್ನು ಸುಪ್ರಿಂಕೋರ್ಟ್ ಮೊನ್ನೆಯಷ್ಟೆ ಸಿಬಿಐ ನಿರ್ದೇಶಕರಾಗಿ ಮರುನಿಯೋಜನೆಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ನಿನ್ನೆ ಪ್ರಧಾನಿ ಮೋದಿ, ನ್ಯಾಯಾಧೀಶ ಎಕೆ ಸಿಖ್ರಿ, ಕಾಂಗ್ರೆಸ್‌ನ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ವಿಶೇಷ ಸಮಿತಿಯು ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿ ಬೇರೆ ಇಲಾಖೆಗೆ ವರ್ಗ ಮಾಡಿತ್ತು.

ಸಿಬಿಐ ಸಮಗ್ರತೆ ಎತ್ತಿಹಿಡಿಯಲು ಪ್ರಯತ್ನಿಸಿದ್ದೆ: ಮೌನ ಮುರಿದ ವರ್ಮಾಸಿಬಿಐ ಸಮಗ್ರತೆ ಎತ್ತಿಹಿಡಿಯಲು ಪ್ರಯತ್ನಿಸಿದ್ದೆ: ಮೌನ ಮುರಿದ ವರ್ಮಾ

ಬುಧವಾರವೇ ಈ ಸಮಿತಿ ಸಭೆ ಸೇರಿತ್ತು ಆದರೆ ಯಾವುದೇ ನಿರ್ಣಯಕ್ಕೆ ಬಂದಿರಲಿಲ್ಲ. ನಂತರ ಗುರುವಾರ ಸಭೆ ಸೇರಲಾಗಿ ಸಭೆಯ ಮುಂದೆ ಸಿವಿಸಿ (ಕೇಂದ್ರ ವಿಚಕ್ಷಣಾ ಸಮತಿ)ಯ ವರದಿಗಳನ್ನು ಇಡಲಾಯಿತು. ವರದಿ ಅವಲೋಕಿಸಿದ ಬಳಿಕ ಸುಪ್ರಿಂಕೋರ್ಟ್‌ ನ್ಯಾಯಾಧೀಶ ಎಕೆ ಸಿಖ್ರಿ ಅವರು ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ಸರಿಸಲು ಒಪ್ಪಿಗೆ ಸೂಚಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ವಿರೋಧ

ಮಲ್ಲಿಕಾರ್ಜುನ ಖರ್ಗೆ ವಿರೋಧ

ಆದರೆ ಇದಕ್ಕೆ ಆಕ್ಷೇಪಣೆ ಸಲ್ಲಿಸಿದ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರು, 'ಎಲ್ಲಿವೆ ಆರೋಪಗಳು?' ಸಿವಿಸಿ ಸಲ್ಲಿಸಿರುವ ವರದಿಯಲ್ಲಿನ ಆರೋಪಗಳಿಗೆ ಗಟ್ಟಿ ಆಧಾರಗಳಿಲ್ಲ ಎಂದ ಅವರು, ಅಲೋಕ್ ವರ್ಮಾ ಅವರನ್ನು ನಿರ್ದೇಶಕ ಸ್ಥಾನದಿಂದ ಸರಿಸುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.

ಅಲೋಕ್ ವರ್ಮಾರನ್ನು ಅಮಾನತು ಮಾಡಿಲ್ಲ, ವಜಾನೂ ಮಾಡಿಲ್ಲ! ಅಲೋಕ್ ವರ್ಮಾರನ್ನು ಅಮಾನತು ಮಾಡಿಲ್ಲ, ವಜಾನೂ ಮಾಡಿಲ್ಲ!

2:1 ಮತಗಳಿಂದ ನಿರ್ಣಯ

2:1 ಮತಗಳಿಂದ ನಿರ್ಣಯ

ಆ ನಂತರ ಸಮಿತಿಯ ನೇತೃತ್ವ ವಹಿಸಿದ್ದ ಪ್ರಧಾನಿ ಮೋದಿ ಅವರು ಹಾಗೂ ಸಿಖ್ರಿ ಅವರು ಅಲೋಕ್ ವರ್ಮಾ ಅವರನ್ನು ನಿರ್ದೇಶಕ ಸ್ಥಾನದಿಂದ ಕೈಬಿಡಲು ಒಪ್ಪಿಗೆ ಸೂಚಿಸಿದ್ದಾರೆ. ಅಂತಿಮವಾಗಿ 2:1 ಮತಗಳ ಆಧಾರದ ಮೇಲೆ ಅಲೋಕ್ ವರ್ಮಾ ಅವರನ್ನು ನಿರ್ದೇಶಕ ಸ್ಥಾನದಿಂದ ಕೆಳಗಿಳಿಸಿ ಬೇರೆ ಇಲಾಖೆಗೆ ವರ್ಗ ಮಾಡಲಾಗಿದೆ.

ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ವಜಾ ಹೈಡ್ರಾಮಾ ಸುತ್ತ... ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ವಜಾ ಹೈಡ್ರಾಮಾ ಸುತ್ತ...

ಬೇರೆ ಇಲಾಖೆಗೆ ಅಲೋಕ್ ವರ್ಮಾ ವರ್ಗ

ಬೇರೆ ಇಲಾಖೆಗೆ ಅಲೋಕ್ ವರ್ಮಾ ವರ್ಗ

ಅಲೋಕ್ ವರ್ಮಾ ಅವರನ್ನು ಅಗ್ನಿಶಾಮಕ, ಸಾಗರೀಕ ಸಂರಕ್ಷಣೆ ಮತ್ತು ಹೋಮ್ ಗಾರ್ಡ್ ವಿಭಾಗಕ್ಕೆ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ನಾಗೇಶ್ವರ ರಾವ್ ಅವರು ಮತ್ತೆ ಸಿಬಿಐನ ಪ್ರಭಾರಿ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

3 ತಿಂಗಳ ಬಳಿಕ ಕಚೇರಿಗೆ ಮರಳಿದ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ 3 ತಿಂಗಳ ಬಳಿಕ ಕಚೇರಿಗೆ ಮರಳಿದ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ

'ಪೂರ್ವನಿಯೋಜಿತ ಮಾದರಿಯ ಸಭೆ'

'ಪೂರ್ವನಿಯೋಜಿತ ಮಾದರಿಯ ಸಭೆ'

ಸಭೆಯ ನಂತರ ಮಾತನಾಡಿದ ಖರ್ಗೆ ಅವರು, ಪೂರ್ವನಿಯೋಜಿತ ರೀತಿಯಲ್ಲಿ ಸಭೆಯಲ್ಲಿ ವಿಚಾರಳನ್ನು ಮಂಡಿಸಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿ ಸಿಖ್ರಿ ಬಗ್ಗೆ ಕೇಳಲಾದ ಪ್ರಶ್ನೆಗೆ 'ಅವರು ರಂಜನ್ ಗೊಗಾಯ್ ಅವರ ಪ್ರತಿನಿಧಿಯಾಗಿ ಸಭೆಯಲ್ಲಿ ಇದ್ದರೆ ಹೊರತು, ನ್ಯಾಯಮೂರ್ತಿಯಾಗಿ ಅಲ್ಲ' ಎಂದು ಖಾರವಾದ ಉತ್ತರ ನೀಡಿದ್ದಾರೆ.

ಬಿಜೆಪಿ ಸ್ವಾಗತ, ಕಾಂಗ್ರೆಸ್ ವಿರೋಧ

ಬಿಜೆಪಿ ಸ್ವಾಗತ, ಕಾಂಗ್ರೆಸ್ ವಿರೋಧ

ಉನ್ನತ ಸಮಿತಿಯ ನಿರ್ಣಯವನ್ನು ಬಿಜೆಪಿ ಸ್ವಾಗತಿಸಿದ್ದರೆ ಕಾಂಗ್ರೆಸ್ ವಿರೋಧಿಸಿದೆ. ಹೊಸ ಸಿಬಿಐ ನಿರ್ದೇಶಕರನ್ನು ನೇಮಕ ಮಾಡುವ ಅಧಿಕಾರಿ ಇದೇ ಉನ್ನತ ಸಮಿತಿಗೆ ಇದ್ದು ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಹಾಗಾಗಿ ಹೊಸ ನಿರ್ದೇಶಕರ ನೇಮಕ ಬಿಜೆಪಿಗೆ ಸವಾಲಾಗಿರಲಿದೆ.

ಬಿಜೆಪಿಗೆ ಕಾಡಿದ್ದ ಭಯ

ಬಿಜೆಪಿಗೆ ಕಾಡಿದ್ದ ಭಯ

ಸುಪ್ರಿಂ ಆದೇಶದಂತೆ ಮತ್ತೆ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಏರಿದ ಅಲೋಕ್ ವರ್ಮಾ ಕೆಲವೇ ಗಂಟೆಗಳಲ್ಲಿ ತಮ್ಮ ಆಪ್ತರ ವರ್ಗಾವಣೆ ಆದೇಶವನ್ನು ರದ್ದು ಗೊಳಿಸಿದರು. ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರನ್ನು ಬಂಧಿಸುವ ಸಾಧ್ಯತೆಯು ಇದೆ ಎಂಬ ಅನುಮಾನ ಬಿಜೆಪಿಗೆ ಇತ್ತು ಹಾಗಾಗಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ.

English summary
Alok Verma has been removed from CBI director post by high commity which includes Narendra Modi justice AK Sikhri and Congress leader Mallikarjun Kharge. Kharge oppossed removel of Alok Verma but Modi and Sikhri agreed to remove Alok Verma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X