ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಯುವ ಮುನ್ನ ನರ್ಸ್ ಲಿನಿ ಹೇಳಿದ ಮಾತುಗಳೇನು!?

By Mahesh
|
Google Oneindia Kannada News

ಬೆಂಗಳೂರು, ಮೇ 22: ಕೇರಳದಲ್ಲಿ ಮಾರಣಾಂತಿಕ ಎನ್ಐವಿ ವೈರಸ್ (ನಿಪಾ) ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 10ಕ್ಕೇರಿದೆ. ಸೋಂಕು ತಗುಲಿದವರ ಆರೈಕೆಯಲ್ಲಿ ತೊಡಗಿದ್ದ ನರ್ಸ್ ಲಿನಿ ಕೂಡಾ ಚಿಕಿತ್ಸೆ ನೀಡುವ ವೇಳೆಯಲ್ಲಿ ಸೋಂಕಿಗೆ ಬಲಿಯಾಗಿರುವ ದುರ್ಘಟನೆ ನಡೆದಿದೆ.

ಸಾಯುವ ಮುನ್ನ ನರ್ಸ್ ಲಿನಿ (31) ಅವರು ತಮ್ಮ ಪತಿ ಸಜೀಶ್ ಗೆ ಪತ್ರ ಬರೆದಿದ್ದು, ಮನಕಲುಕುವಂತಿದೆ. ಇಬ್ಬರು ಪುತ್ರರಾದ 5 ವರ್ಷ ವಯಸ್ಸಿನ ಸಿದ್ದಾರ್ಥ್ ಹಾಗೂ 2 ವರ್ಷ ವಯಸ್ಸಿನ ರಿಥುಲ್ ಅವರನ್ನು ಲಿನಿ ಅಗಲಿದ್ದಾರೆ.

Almost on My way : Nurse Who died of Nipah in Note to Husband

ಮಾರಣಾಂತಿಕ ನಿಪಾಹ್ ವೈರಸ್ ಹೇಗೆ ಹರಡುತ್ತೆ ? ಮುನ್ನೆಚ್ಚರಿಕೆ ಏನು?ಮಾರಣಾಂತಿಕ ನಿಪಾಹ್ ವೈರಸ್ ಹೇಗೆ ಹರಡುತ್ತೆ ? ಮುನ್ನೆಚ್ಚರಿಕೆ ಏನು?

ಪೆರೆಮ್ರಾ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವಾಗ ಮೃತ ಪಟ್ಟ ಲಿನಿ ಅವರ ಪಾರ್ಥೀವ ಶರೀರವನ್ನು ಆಕೆಯ ಮನೆಗೂ ಕರೆದೊಯ್ಯಲು ಆಗಲಿಲ್ಲ. ಸೋಂಕು ಹರಡುವ ಸಾಧ್ಯತೆಯಿಂದ ಕೋಯಿಕೋಡ್ ನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Almost on My way : Kerala Nurse Who died of Nipah in Note to Husband

ನಿಪಾಹ್ ವೈರಸ್‌ ಭೀತಿ: ಕರ್ನಾಟಕದಲ್ಲಿ ಹೈ ಅಲರ್ಟ್ನಿಪಾಹ್ ವೈರಸ್‌ ಭೀತಿ: ಕರ್ನಾಟಕದಲ್ಲಿ ಹೈ ಅಲರ್ಟ್

ಸೋಂಕು ತಗುಲಿರುವುದು ತಿಳಿದ ನಂತರ ಲಿನಿ ತನ್ನ ಪತಿಗಾಗಿ ಪತ್ರವೊಂದನ್ನೂ ಬರೆದು ತಮ್ಮ ಇಂಗಿತ ಹಂಚಿಕೊಂಡಿದ್ದರು. 'ನಾನು ನಿನ್ನನ್ನು ಭೇಟಿಯಾಗುತ್ತೇನೆಂದು ನನಗನ್ನಿಸುತ್ತಿಲ್ಲ. ದಯವಿಟ್ಟು ನನ್ನ ಮಕ್ಕಳನ್ನು ನೋಡಿಕೊ. ನಿನ್ನ ಜತೆ ಮಕ್ಕಳನ್ನೂ ಗಲ್ಫ್​ಗೆ ಕರೆದುಕೊಂಡು ಹೋಗು; ನನ್ನ ತಂದೆಯಿದ್ದಂತೆ ಒಬ್ಬನೇ ಇರಬೇಡ, ಪ್ಲೀಸ್' ಎಂದು ಗಲ್ಫ್​ನಲ್ಲಿದ್ದ ತನ್ನ ಗಂಡನಿಗೆ ಪತ್ರದಲ್ಲಿ ಕೇಳಿಕೊಂಡಿದ್ದಾರೆ.

English summary
The Kerala nurse who died reportedly due to Nipah viris while treating the affected victims, wrote a note to her husband, stating, 'Am almost on the way I don't think I will be able to see you again. Sorry 'She asked her husband to their children with him to Gulf.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X