ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಮಾರು ಶೇ.30ರಷ್ಟು ಕೊವಿಡ್ ರೋಗಿಗಳಿಗೆ ಸೋಂಕಿನ ಲಕ್ಷಣಗಳೇ ಇಲ್ಲ

|
Google Oneindia Kannada News

ನವದೆಹಲಿ, ನವೆಂಬರ್ 24: ಕೊರೊನಾ ಸೋಂಕು ಇಡೀ ಜಗತ್ತನ್ನೇ ಬಾಧಿಸುತ್ತಿದೆ. ಆದರೆ ಲಕ್ಷಣಗಳಿಲ್ಲದ ಕೊರೊನಾ ಸೋಂಕಿತ ಪ್ರಕರಣಗಳನ್ನು ನೋಡಿದಾಗ ಮತ್ತಷ್ಟು ಭಯ ಉಂಟಾಗುತ್ತದೆ. ಈ ಕೊರೊನಾ ಸೋಂಕಿತರು ಲಕ್ಷಣಗಳಿಲ್ಲದಿದ್ದರೂ ಕೊರೊನಾ ಸೋಂಕನ್ನು ಮತ್ತೊಬ್ಬರಿಗೆ ಹರಡುತ್ತಾರೆ.

ಅವರು ಕೊರೊನಾ ಸೋಂಕನ್ನು ಹೊಂದಿದ್ದಾರೆ ಎಂಬುದರ ಕುರಿತು ಅವರಿಗೆ ಅರಿವಿರುವುದಿಲ್ಲ.ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ಶೇ.30ರಷ್ಟು ರೋಗಿಗಳಿಗೆ ಸೋಂಕಿನ ಲಕ್ಷಣಗಳೇ ಇಲ್ಲ ಎಂಬುದು ತಿಳಿದುಬಂದಿದೆ. ಆದರೆ ಇವರು ಅತಿ ಹೆಚ್ಚು ಮಂದಿಗೆ ಕೊರೊನಾ ಸೋಂಕನ್ನು ಹರಡುತ್ತಾರೆ ಎಂಬುದು ಆತಂಕಕಾರಿ ಸಂಗತಿಯಾಗಿದೆ.

ಎಷ್ಟು ದಿನ ಸೋಂಕು ಇವರ ದೇಹದಲ್ಲಿರುತ್ತದೆ

ಎಷ್ಟು ದಿನ ಸೋಂಕು ಇವರ ದೇಹದಲ್ಲಿರುತ್ತದೆ

ಲಕ್ಷಣಗಳಿರುವ ಕೊರೊನಾ ಸೋಂಕಿತರ ದೇಹದಲ್ಲಿ ಎಷ್ಟು ದಿನ ಕೊರೊನಾ ಸೋಂಕಿರುತ್ತದೆಯೋ ಅಷ್ಟೇ ದಿನ ಲಕ್ಷಣರಹಿತ ವ್ಯಕ್ತಿಗಳಲ್ಲೂ ಕೂಡ ಇರುತ್ತದೆ. ದಕ್ಷಿಣ ಕೊರಿಯಾದ ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ವೈರಸ್ ಮೂಗು, ಗಂಟಲು, ಶ್ವಾಸಕೋಶದಲ್ಲಿ ಇರುತ್ತದೆ.

ಭಾರತಕ್ಕೆ ಪಿಫೈಜರ್ ಕೊರೊನಾ ಲಸಿಕೆಯ ಅಗತ್ಯವಿಲ್ಲ: ಹರ್ಷವರ್ಧನ್ಭಾರತಕ್ಕೆ ಪಿಫೈಜರ್ ಕೊರೊನಾ ಲಸಿಕೆಯ ಅಗತ್ಯವಿಲ್ಲ: ಹರ್ಷವರ್ಧನ್

ಅಧ್ಯಯನ ಹೇಳಿದ್ದೇನು?

ಅಧ್ಯಯನ ಹೇಳಿದ್ದೇನು?

ಅಧ್ಯಯನ ಸಂದರ್ಭದಲ್ಲಿ ಕೊರೊನಾ ಲಕ್ಷಣ ರಹಿತ, ಲಕ್ಷಣ ಇರುವವರನ್ನು ಪರೀಕ್ಷಿಸಲಾಗಿತ್ತು.ಅದರಲ್ಲಿ 193 ಲಕ್ಷಣ ಸಹಿತ, 110 ಮಂದಿ ಲಕ್ಷಣ ರಹಿತ ವ್ಯಕ್ತಗಳ ಕುರಿತು ಅಧ್ಯಯನ ನಡೆದಿತ್ತು, ಅದರಲ್ಲಿ ಶೇ.30ರಷ್ಟು ಲಕ್ಷಣರಹಿತ ವ್ಯಕ್ತಿಗಳು ಆರೋಗ್ಯವಾಗಿದ್ದರು, 21 ಮಂದಿಯಲ್ಲಿ ನಿಧಾನವಾಗಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದವು.

ಅಮೆರಿಕದಲ್ಲಿ ಶೇ.40ರಷ್ಟು ಮಂದಿ ಲಕ್ಷಣರಹಿತರಿದ್ದಾರೆ

ಅಮೆರಿಕದಲ್ಲಿ ಶೇ.40ರಷ್ಟು ಮಂದಿ ಲಕ್ಷಣರಹಿತರಿದ್ದಾರೆ

ಅಮೆರಿಕದಲ್ಲಿ ಶೇ.40ರಷ್ಟು ಮಂದಿ ಕೊರೊನಾ ಲಕ್ಷಣ ರಹಿತರಾಗಿದ್ದಾರೆ.ದಕ್ಷಿಣ ಕೊರಿಯಾದಲ್ಲಿ ಸಿದ್ಧವಾಗಿರುವ ವರದಿ ಪ್ರಕಾರ ಲಕ್ಷಣರಹಿತ ವ್ಯಕ್ತಿಗಳು 17 ದಿನಗಳ ಕಾಲ ಕೊರೊನಾ ಸೋಂಕು ಹೊಂದಿರುತ್ತಾರೆ. ಲಕ್ಷಣಸಹಿತ ವ್ಯಕ್ತಿಗಳು 20 ದಿನಗಳವರೆಗೆ ಸೋಂಕು ಹೊಂದಿರುತ್ತಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ

ಕೊರೊನಾ ಸೋಂಕು ಹರಡದಿರುವಂತೆ ಎಚ್ಚರ ವಹಿಸಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಕಡ್ಡಾಯವಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು, ಕೈಗವಸನ್ನೂ ಧರಿಸಬೇಕು. ಆರು ಅಡಿಗಳ ಅಂತರವನ್ನು ಕಾಯ್ದುಕೊಳ್ಳಬೇಕು.

English summary
The research team looked at people who were asymptomatic, and merely pre-symptomatic, meaning those who eventually became sick with COVID-19 symptoms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X