ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''ಕೊವಿಡ್ 19ರೋಗಿಗಳಿಗೆ ಸ್ಮಾರ್ಟ್ ಫೋನ್ ನಿರ್ಬಂಧಿಸಬೇಡಿ''

|
Google Oneindia Kannada News

ನವದೆಹಲಿ, ಆ.3: ಕೊವಿಡ್ 19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರು ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಬಳಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಈ ಕುರಿತಂತೆ ಪತ್ರ ಬರೆದಿದೆ. ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಬಳಕೆ ನಿರ್ಬಂಧಿಸಿದರೆ ಕೊವಿಡ್ 19 ರೋಗಿಗಳು ತಮ್ಮ ಕುಟುಂಬಸ್ಥರು, ಆಪ್ತರ ಜೊತೆ ಮಾತನಾಡಲು ಕಷ್ಟವಾಗುತ್ತದೆ. ವಿಡಿಯೋ ಕಾಲ್ ಮಾಡಿ ಮಾತನಾಡಲು ಇದ್ದ ನಿರ್ಬಂಧವನ್ನು ತೆಗೆದು ಹಾಕಿ, ಇದರಿಂದ ಅವರ ಮನೋಸ್ಥೈರ್ಯ ಹೆಚ್ಚಿಸಿ ಎಂದು ಕೇಂದ್ರ ಸರ್ಕಾರ ಹೇಳಿದೆ.

ಪ್ರತಿನಿತ್ಯ ಬಳಸುವ ಮೊಬೈಲ್ ನಲ್ಲಿ 9 ದಿನ ಕೊರೊನಾ ವೈರಸ್ ಜೀವಂತ!ಪ್ರತಿನಿತ್ಯ ಬಳಸುವ ಮೊಬೈಲ್ ನಲ್ಲಿ 9 ದಿನ ಕೊರೊನಾ ವೈರಸ್ ಜೀವಂತ!

ಆರೋಗ್ಯ ಸೇವೆಗಳ ನಿರ್ದೇಶನಾಲಯ(ಡಿಜಿಎಚ್ಎಸ್) ದ ಡಾ. ರಾಜೀವ್ ಗರ್ಗ್ ಅವರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ನಿಯಮವಾಳಿಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಂಡು ಮಾನವೀಯತೆಗೆ ಬೆಲೆ ಕೊಡುವಂತೆ ಸೂಚಿಸಿದ್ದಾರೆ.

Allow hospitalised COVID-19 patients to use smartphones to interact with kin: Centre to states, UTs

ರೋಗಿಯ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಒತ್ತು ನೀಡಬೇಕಿದೆ. ಕೊವಿಡ್ 19 ವಾರ್ಡ್ ಹಾಗೂ ಐಸಿಯುನಲ್ಲಿರುವ ರೋಗಿಗಳ ಬಗ್ಗೆ ನಿಗಾವಹಿಸುವಂತೆ ಸೂಚಿಸಿದ್ದಾರೆ.

ಸ್ಮಾರ್ಟ್ ಫೋನ್ ಬಳಕೆ ನಿಷೇಧ ಇಲ್ಲದಿದ್ದರೂ ಕೆಲವು ರಾಜ್ಯಗಳಲ್ಲಿ ರೋಗಿಗಳ ಜೊತೆ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಅವರ ಕುಟುಂಬಸ್ಥರು ದೂರಿದ್ದರು. ದೂರುಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಡಾ. ಗರ್ಗ್ ಹೇಳಿದ್ದಾರೆ.

English summary
The Centre has written to all states and Union Territories stating that smartphones and tablet devices should be allowed for hospitalised COVID-19 patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X